ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ದಾವಣಗೆರೆಯಲ್ಲಿ ನಾಗರಿಕ ಸೌಹಾರ್ದತೆ ಸಭೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಕೊಟ್ಟ ಸೂಚನೆ ಏನು…?

On: September 7, 2023 3:30 AM
Follow Us:
SP MEETING IN DAVANAGERE
---Advertisement---

SUDDIKSHANA KANNADA NEWS/ DAVANAGERE/ DATE: 07-09-2023

 

ದಾವಣಗೆರೆ Davanagere): ಸದ್ಯದಲ್ಲಿಯೇ ಗಣೇಶೋತ್ಸವ ಹಾಗೂ ಈದ್ ಮಿಲಾದ್ ಹಬ್ಬ ಬರುತ್ತಿದೆ. ಹಬ್ಬದ ಆಚರಣೆಗೆ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ. ನಗರದ ಕೆಲವೆಡೆಗಳಲ್ಲಿ ಈಗಾಗಲೇ ಗಣೇಶನ ಮೂರ್ತಿ ಪ್ರತಿಷ್ಠಾಪಿಸಲು ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ. ಜೊತೆಗೆ ಈದ್ ಮಿಲಾದ್ ಹಬ್ಬ ಇದ್ದು, ಎರಡೂ ಧರ್ಮದವರು ಹಬ್ಬದ ವೇಳೆ ಶಾಂತಿ, ಸುವ್ಯವಸ್ಥೆ ಹಾಗೂ ಕಾನೂನು ಕಾಪಾಡುವಂತೆ ದಾವಣಗೆರೆ ( Davanagere) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚನೆ ನೀಡಿದರು.

ಎಸ್ಪಿ ಕಚೇರಿಯಲ್ಲಿ ಮುಂಬರಲಿರುವ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಗರ ಪೊಲೀಸ್ ಉಪವಿಭಾಗದ ವತಿಯಿಂದ ಕರೆಯಲಾಗಿದ್ದ ನಾಗರಿಕ ಸೌಹಾರ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್ಪಿ ಅವರು, ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿ. ಆದ್ರೆ, ಯಾವುದೇ ರೀತಿಯಲ್ಲಿಯೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಆಚರಿಸುವಂತಾಗಬೇಕು ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: 

Davanagere: ದಾವಣಗೆರೆ ಭದ್ರಾ ಅಚ್ಚುಕಟ್ಟುದಾರರಿಗೆ ಸದ್ಯಕ್ಕೆ ರಿಲೀಫ್, ಎಡದಂಡೆ ನಾಲೆ ನೀರು ಬಂದ್, ಬಲದಂಡೆ ನಾಲೆಯಲ್ಲಿ ನೀರು ಯಥಾಸ್ಥಿತಿ: ಆತಂಕಪಡಬೇಕಿಲ್ಲ ರೈತರು ಎಂದ ಮಧು ಬಂಗಾರಪ್ಪ

 

ಗಣೇಶೋತ್ಸವ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದು. ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ಪಡೆಯುವ ಸಂಘಟನೆಗಳು ಹಾಗೂ ಆಯೋಜಕರೇ ಉತ್ಸವದ ವೇಳೆ ಗಲಾಟೆಯಾದರೆ ಹೊಣೆ ಹೊರಬೇಕು
ಎಂದು ಎಚ್ಚರಿಕೆ ನೀಡಿದರು.

ಪ್ರತಿವರ್ಷವೂ ಗಣೇಶೋತ್ಸವ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ. ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುವುದು. ಮಾತ್ರವಲ್ಲ, ಆಯೋಜಕರು ಹೆಚ್ಚಿನ ನಿಗಾ ವಹಿಸಬೇಕು. ಜನರಿಗೆ ಕಿರಿಕಿರಿಯಾಗದಂತೆ
ಡಿಜೆ ಬಳಸಬಾರದು. ಹಬ್ಬದ ಆಚರಣೆಗೆ ತೊಂದರೆಯಾಗಬಾರದು. ಹಾಗೆಂದ ಮಾತ್ರಕ್ಕೆ ಹಬ್ಬದ ಆಚರಣೆ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬವನ್ನು ಎಲ್ಲಾ ನಾಗರಿಕರು ಸೌಹಾರ್ದತಯುತವಾಗಿ ಆಚರಿಸಲು ತಿಳಿಸಲಾಯಿತು. ಸಭೆಯಲ್ಲಿ ವಿವಿಧ ಧರ್ಮದ ಮುಖಂಡರು ಹಾಗೂ ಮಹಾನಗರ ಪಾಲಿಕೆಯ ಸದಸ್ಯರು,
ಗಣೇಶ ಹಬ್ಬ ಹಾಗು ಈದ್ ಮಿಲಾದ್ ಹಬ್ಬದ ಆಚರಣೆಯ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು. ಈ ವೇಳೆ ಶಾಂತಿಯುತ ಆಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹೆಚ್ಚುವರಿ ಪೊಲಿಸ್ ಅಧೀಕ್ಷಕ ಆರ್. ಬಿ. ಬಸರಗಿ ರವರು, ದಾವಣಗೆರೆ ನಗರ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪ್ರೊಬೇಷನರಿ ಡಿವೈಎಸ್ಪಿ ಯಶವಂತ್, ನಗರ ಉಪವಿಭಾಗದ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಪೊಲೀಸ್
ಕಚೇರಿಯ ಅಧಿಕಾರಿಗಳು, ಆರ್ ಎಸ್ ಎಸ್ ನ ಹಿರಿಯರಾದ ಶಂಕರನಾರಯಣ, ಜೆಡಿಎಸ್ ನ ಅಮಾನುಲ್ಲಾ ಖಾನ್, ಯಾಸೀನ್ ಪೀರ್ ರಿಜ್ವಿ, ಪಾಲಿಕೆ ಸದಸ್ಯ ಎ. ನಾಗರಾಜ, ಜೊಳ್ಳಿಗುರು, ಶ್ರೀನಿವಾಸ, ದಿನೇಶ್ ಕೆ. ಶೆಟ್ಟಿ, ಚನ್ನಬಸಪ್ಪ ಗೌಡ್ರು,
ಬಾಬು, ನವೀನ್, ಟಿ ಅಜ್ಗರ್, ಕುಮಾರ್, ನಜೀರ್ ಅಹ್ಮದ್ ಹಾಗೂ ವಿವಿಧ ಧಾರ್ಮಿಕ ಮುಖಂಡರು ಹಾಗೂ ನಾಗರಿಕರು ಹಾಜರಿದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment