ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ವಿಜನ್ ಇಂಟರ್ ನ್ಯಾಷನಲ್ ಶಾಲೆಗೆ ಹಾಕಿದ್ದಂತಹಬೀಗಮುದ್ರೆ ಅಕ್ರಮವಾಗಿ ತೆಗೆಯಲಾಗಿದೆ: ಸಾಮಾಜಿಕ ಕಾರ್ಯಕರ್ತ ಶ್ರೇಯಸ್ ಆರೋಪ

On: October 20, 2023 1:16 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:20-10-2023

ದಾವಣಗೆರೆ (Davanagere): ನಗರದ ಹಳೆ ಪಿ.ಬಿ. ರಸ್ತೆಯ ವಿಜನ್ ಇಂಟರ್ ನ್ಯಾಷನಲ್ ಶಾಲೆಗೆ ಹಾಕಿದ್ದಂತಹ ಬೀಗಮುದ್ರೆಯನ್ನು ಅಕ್ರಮವಾಗಿ ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಡಿಪಿಐ, ಬಿಇಒ, ನಗರಪಾಲಿಕೆ ವಿರುದ್ಧ ಹೈಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಶ್ರೇಯಸ್ ತಿಳಿಸಿದರು.

Read Also This Story:

Davanagere: ಹಾದಿಬೀದಿಯಲ್ಲಿ ರೇಣುಕಾಚಾರ್ಯ ಪಕ್ಷದ ವಿರುದ್ಧ ಮಾತನಾಡಬಾರದು: ಬಿಜೆಪಿಯಿಂದ ಉಚ್ಚಾಟಿಸುವಂತೆ ವರಿಷ್ಠರಿಗೆ ಒತ್ತಾಯ

ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಳೆದ 10 ವರ್ಷಗಳಿಂದ ವಿಜನ್ ಇಂಟರ್ ನ್ಯಾಷನಲ್ ಸ್ಕೂಲ್ ಬಫರ್ ಝೋನ್ ನಲ್ಲಿದ್ದರೂ ಮಹಾನಗರ ಪಾಲಿಕೆಯಿಂದ ಅಕ್ರಮವಾಗಿ ಡೋರ್ ನಂಬರ್ ನೀಡಲಾಗಿದೆ. ‌ ಯಾವುದೇ ಪರವಾನಗಿ ಪಡೆದಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಗೆ ಸಲ್ಲಿಸಿದ ದೂರು ಅನ್ವಯ ಅ. 17 ರಂದು ಪೊಲೀಸರ ಸಮಕ್ಷಮದಲ್ಲಿ ಬೀಗ ಮುದ್ರೆ ಹಾಕಲಾಗಿತ್ತು. ಅ.‌ 18 ರಂದು ಅಕ್ರಮವಾಗಿ ಬೀಗಮುದ್ರೆ ತೆರವು ಮಾಡಲಾಗಿದೆ ಎಂದು ತಿಳಿಸಿದರು.

 

ಶಾಲೆಯ ಬೀಗಮುದ್ರೆ ತೆರವು ಮಾಡಿರುವ ಬಗ್ಗೆ ಡಿಡಿಪಿಐಯವರ ಗಮನಕ್ಕೆ ತಂದಾಗ ಮೊದಲು ಒಪ್ಪಿಕೊಂಡರು. ಕೆಲ ಸಮಯದ ನಂತರ ತಮಗೆ ಮಾಹಿತಿಯೇ ಇಲ್ಲ. ಬಿಇಒ ಅವರಿಗೆ ಗೊತ್ತು ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ಡಿಡಿಪಿಐ ಅವರ ಸೂಚನೆಯಂತೆ ಬೀಗಮುದ್ರೆ ತೆರವು ಮಾಡಲಾಗಿದೆ ಎಂದು ಬಿಇಒ ಮಾಹಿತಿ ನೀಡಿದರು ಎಂದ ಅವರು, ಶಾಲೆಗೆ ಹಾಕಿದ್ದಂತಹ ಬೀಗಮುದ್ರೆ ತೆರವು ಮಾಡಿರುವುದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ನಾಗರಾಜ್ ಸುರ್ವೇ ಮಾತನಾಡಿ, ದಾವಣಗೆರೆಯಲ್ಲಿ ಈವರೆಗೆ 18 ಅಕ್ರಮ ಶಾಲೆಗಳಿವೆ ಎಂದು ಗುರುತಿಸಲಾಗಿದೆ. ಈವರೆಗೆ ಕುಂದುವಾಡದ ಒಂದು, ವಿಜನ್ ಶಾಲೆ ಮುಚ್ಚಲಾಗಿದೆ. ಇನ್ನುಳಿದ ಶಾಲೆಗಳ ಕುರಿತು ದಾಖಲೆ ಸಂಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಟಿ. ಚೇತನ್, ನೌಶಿನ್ ತಾಜ್ ಉಪಸ್ಥಿತರಿದ್ದರು.

 

 


ಜಾಹೀರಾತು: 

ವಧು – ವರ ಮಾಹಿತಿ ಕೇಂದ್ರ

ನಮ್ಮಲ್ಲಿ ಎಲ್ಲಾ ಜಾತಿಯವರು ಹಾಗೂ ಎಲ್ಲಾ ವರ್ಗವದರು ಇದ್ದಾರೆ. ಮೊದಲ ಹಾಗೂ ಎರಡನೇ ಮದುವೆಗೆ ಹಾಗೂ ನಮ್ಮಲ್ಲಿ 2 ಲಕ್ಷ ಪ್ರೊಫೈಲ್ ಇದೆ. ನಿಮ್ಮಲ್ಲಿ ಎಂಥ ಸಮಸ್ಯೆ ಇದ್ದರೂ ಕೇವಲ ಮೂರು ತಿಂಗಳಲ್ಲಿ ಮದುವೆ ಹೊಂದಿಸಿ ಕೊಡುತ್ತೇವೆ ಹಾಗೂ ಅಂತರಜಾತಿ ಮದುವೆ ಹೆಚ್ಚಾಗಿ ಮಾಡಿಸುತ್ತೇವೆ. ಒಮ್ಮೆ ಭೇಟಿ ಕೊಡಿ ಅಥವಾ ಕರೆ ಮಾಡಿ ಮೊಬೈಲ್ ನಂಬರ್: 99455 00051, ವಾಟ್ಸಪ್ ನಂಬರ್ 98443 50220. 


 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment