Home ದಾವಣಗೆರೆ ದಾವಣಗೆರೆಯ ಜಿಮ್‌ನಲ್ಲಿ ಮಹಿಳೆಯ ರಹಸ್ಯ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್: ಜಿಮ್ ಮಾಲೀಕನ ವಿರುದ್ಧ ಅತ್ಯಾಚಾರ ಎಸಗಿದ ದೂರು ದಾಖಲಿಸಿದ ಮಹಿಳೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ದಾವಣಗೆರೆಯ ಜಿಮ್‌ನಲ್ಲಿ ಮಹಿಳೆಯ ರಹಸ್ಯ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್: ಜಿಮ್ ಮಾಲೀಕನ ವಿರುದ್ಧ ಅತ್ಯಾಚಾರ ಎಸಗಿದ ದೂರು ದಾಖಲಿಸಿದ ಮಹಿಳೆ!

Share
ದಾವಣಗೆರೆ
Share

ದಾವಣಗೆರೆ: ನಗರದಲ್ಲಿ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಜಿಮ್‌ಗೆ ಬರುತ್ತಿದ್ದ ಗೃಹಿಣಿಯೊಬ್ಬರ ರಹಸ್ಯ ನಗ್ನ ವಿಡಿಯೋ ಹಾಗೂ ಫೋಟೋಗಳನ್ನು ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ನಿರಂತರ ಅತ್ಯಾಚಾರ ಎಸಗಿರುವುದಾಗಿ ಮಹಿಳೆ ಆರೋಪಿಸಿದ್ದು, ಈ ಸಂಬಂಧ ದಾವಣಗೆರೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟುವಳ್ಳಿ ರಸ್ತೆಯ “ಪವರ್ ಫಿಟ್‌ನೆಸ್ ಜಿಮ್” ಮಾಲೀಕ ಇಸ್ಮಾಯಿಲ್ ಎಂ. ಎಂಬಾತನ ವಿರುದ್ಧ ದಾವಣಗೆರೆ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನ ವಿವರ:

ದೂರುದಾರ ಮಹಿಳೆಯು ದಾವಣಗೆರೆಯ ನಿವಾಸಿಯಾಗಿದ್ದು, ಅವರ ಪತಿ ಗೌರವಾನ್ವಿತ  ಪ್ರಾಧ್ಯಾಪಕರಾಗಿದ್ದಾರೆ. ನೊಂದ ಮಹಿಳೆಯು ಕಳೆದ ಒಂದೂವರೆ ವರ್ಷದಿಂದ ತನ್ನ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ನಿಟ್ಟುವಳ್ಳಿ ರಸ್ತೆಯ ದುರ್ಗಾಂಬಿಕ ಹೈಸ್ಕೂಲ್ ಹತ್ತಿರವಿರುವ “ಪವರ್ ಫಿಟ್‌ನೆಸ್ ಜಿಮ್‌”ಗೆ ಪ್ರತಿದಿನ ಬೆಳಗ್ಗೆ ಹೋಗುತ್ತಿದ್ದರು. ಈ ಜಿಮ್‌ನ ಮಾಲೀಕ ಮತ್ತು ತರಬೇತುದಾರನಾಗಿದ್ದ ಇಸ್ಮಾಯಿಲ್ ಎಂ., ಜಿಮ್‌ನ ಬಟ್ಟೆ ಬದಲಾಯಿಸುವ ಪ್ರತ್ಯೇಕ ಕೋಣೆಯಲ್ಲಿ ಮಹಿಳೆಯ ರಹಸ್ಯ ನಗ್ನ ವಿಡಿಯೋ ಮತ್ತು ಫೋಟೋಗಳನ್ನು ಚಿತ್ರೀಕರಿಸಿದ್ದ ಎನ್ನಲಾಗಿದೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಈ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿ, “ನಾನು ಕರೆದಾಗಲೆಲ್ಲ ಬರಬೇಕು, ಲೈಂಗಿಕ ಸಂಪರ್ಕಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಫೇಸ್‌ಬುಕ್, ವಾಟ್ಸಾಪ್‌ಗಳಲ್ಲಿ ಹರಿಬಿಟ್ಟು ನಿನ್ನ ಹಾಗೂ ನಿನ್ನ ಪತಿಯ ಗೌರವ ಮಣ್ಣುಪಾಲು ಮಾಡುತ್ತೇನೆ” ಎಂದು ಇಸ್ಮಾಯಿಲ್ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು. ಮಾನ ಮರ್ಯಾದೆಗೆ ಅಂಜಿ ಮಹಿಳೆಯು ಒಳಗೊಳಗೇ ನರಕಯಾತನೆ ಅನುಭವಿಸುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಬಲವಂತವಾಗಿ ಕರೆಸಿಕೊಂಡು ಅತ್ಯಾಚಾರ:

ದಿನಾಂಕ 28.03.2026 ರಂದು ರಾತ್ರಿ ಇಸ್ಮಾಯಿಲ್ ಕರೆ ಮಾಡಿ, “ಇದೇ ರಾತ್ರಿ ಜಿಮ್‌ಗೆ ಬರದಿದ್ದರೆ ಮನೆಯ ಬಳಿ ಬಂದು ನಿನ್ನ ಗಂಡನಿಗೆ ಫೋಟೋ ತೋರಿಸಿ ಸಂಸಾರ ಹಾಳು ಮಾಡುತ್ತೇನೆ” ಎಂದು ಹೆದರಿಸಿದ್ದನು. ರಾತ್ರಿ 11 ಗಂಟೆಗೆ ಜಿಮ್‌ಗೆ ಕರೆಯಿಸಿಕೊಂಡು ಮಹಿಳೆಯ ಅಸಹಾಯಕತೆಯನ್ನು ಬಳಸಿಕೊಂಡು ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಅಲ್ಲದೆ, “ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು ಹಾಗೂ ನಿನ್ನ ಕುಟುಂಬದವರನ್ನು ಕೊಲೆ ಮಾಡುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದನು. ತದನಂತರವೂ ಇದೇ ರೀತಿ ಫೋಟೋಗಳನ್ನು ತೋರಿಸಿ ಹಲವಾರು ಬಾರಿ ಅತ್ಯಾಚಾರ ಮುಂದುವರಿಸಿದ್ದನು ಎಂದು ದೂರಿನಲ್ಲಿ ಸಂತ್ರಸ್ತ ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸ್ ಠಾಣೆಗೆ ದೂರು:

ಆರೋಪಿಯ ನಿರಂತರ ಕಿರುಕುಳ ಹಾಗೂ ಅತ್ಯಾಚಾರದಿಂದ ಮನನೊಂದ ಮಹಿಳೆ ಧೃತಿಗೆಟ್ಟು, ಅಂತಿಮವಾಗಿ ತನ್ನ ಪತಿಗೆ ವಿಷಯ ತಿಳಿಸಿದ್ದಾರೆ. ಪ್ರಸ್ತುತ ಕುಟುಂಬವು ತೀವ್ರ ಮಾನಸಿಕ ಅಶಾಂತಿ ಮತ್ತು ಜೀವಭಯದಲ್ಲಿದ್ದು, ದಿನಾಂಕ 15-07-2026 ರಂದು ನೊಂದ ಮಹಿಳೆ ನೀಡಿದ ಲಿಖಿತ ದೂರಿನ ಆಧಾರದ ಮೇಲೆ ದಾವಣಗೆರೆ ಮಹಿಳಾ ಠಾಣೆ ಪೊಲೀಸರು ಆರೋಪಿ ಇಸ್ಮಾಯಿಲ್ ಎಂ. ವಿರುದ್ಧ ಗುನ್ನೆ ನಂ: 97/2026, ಸೆಕ್ಷನ್ 64(2)(m) (ಅತ್ಯಾಚಾರ), 351(2) (ಕ್ರಿಮಿನಲ್ ಬೆದರಿಕೆ), 77 (ರಹಸ್ಯ ಚಿತ್ರೀಕರಣ/Voyeurism) ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *