ದಾವಣಗೆರೆ: ನಗರದ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಬಿಜೆಪಿ ನಾಯಕರು ಚಪ್ಪಲಿ ಧರಿಸಿ ಪ್ರವೇಶಿಸಿದ್ದಾರೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇವಸ್ಥಾನದೊಳಗೆ ಚಪ್ಪಲಿ ಧರಿಸಿರುವುದು ಆಕಸ್ಮಿಕವಾಗಿ ನಡೆದ ಘಟನೆಯೇ ಹೊರತು ಉದ್ದೇಶಪೂರ್ವಕವಲ್ಲ. ಈ ತಪ್ಪಿಗೆ ಕ್ಷಮೆ ಕೇಳಲು ನಾವು ಸಿದ್ಧರಿದ್ದೇವೆ. ಆದರೆ, ಕಾಂಗ್ರೆಸ್ ನಾಯಕರು ಈ ಸೂಕ್ಷ್ಮ ವಿಚಾರವನ್ನು ಉಪಚುನಾವಣೆಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಖಂಡನೀಯ” ಎಂದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ವಾಗ್ದಾಳಿ ನಡೆಸಿದ ಜಾಧವ್, “ಶಾಮನೂರು ಶಿವಶಂಕರಪ್ಪ ಮತ್ತು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಅವಧಿಯಲ್ಲಿ ದೇವಸ್ಥಾನದ ಆಡಳಿತದಲ್ಲಿ ನಡೆದಿರುವ ಅಕ್ರಮ ಹಾಗೂ ಭ್ರಷ್ಟಾಚಾರಗಳ ಬಗ್ಗೆ ನಾವು ದಾಖಲೆ ಸಮೇತ ಚರ್ಚೆಗೆ ಸಿದ್ಧರಿದ್ದೇವೆ. ಕಾಂಗ್ರೆಸ್ ನಾಯಕರು ದಲಿತ ನಾಯಕರನ್ನು ಎತ್ತಿಕಟ್ಟಿ ರಾಜಕೀಯ ಮಾಡುವುದನ್ನು ನಿಲ್ಲಿಸಲಿ” ಎಂದು ಸವಾಲು ಹಾಕಿದರು.
ಬಿಜೆಪಿ ನಾಯಕ ಅಜಯ್ ಕುಮಾರ್ ಅವರು ಚಪ್ಪಲಿ ಧರಿಸಿರುವ ವಿಡಿಯೋ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, “ಅದು ನಮ್ಮ ಸೋಷಿಯಲ್ ಮೀಡಿಯಾ ತಂಡದವರಿಂದ ಆದ ತಪ್ಪಿರಬಹುದು” ಎನ್ನುತ್ತಾ ತುಸು ಗೊಂದಲಕ್ಕೀಡಾದರು. ಅಂತಿಮವಾಗಿ, “ದೇವರು ಮತ್ತು ದೇವಸ್ಥಾನದ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ” ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್. ಟಿ. ವೀರೇಶ್, ದೇವರಮನಿ ಶಿವಕುಮಾರ್, ಟಿಂಕರ್ ಮಂಜಣ್ಣ, ಶಿವನಗೌಡ ಟಿ. ಪಾಟೀಲ್ ಮತ್ತಿತರರು ಹಾಜರಿದ್ದರು.
- Ajay Kumar BJP video
- BJP vs Congress Karnataka
- Davanagere Durgamma Temple controversy
- Davanagere Politics News
- Davanagere South By-Election 2026
- Shamanur Shivashankarappa
- Sri Durgambika Devi Temple
- SS Mallikarjun
- Temple administration corruption charges.
- Temple chappal row
- Yashwanth Rao Jadhav
- ಅಜಯ್ ಕುಮಾರ್ ಬಿಜೆಪಿ
- ಎಸ್ ಟಿ ವೀರೇಶ್
- ಎಸ್. ಎಸ್. ಮಲ್ಲಿಕಾರ್ಜುನ್
- ಚಪ್ಪಲಿ ವಿವಾದ
- ದಾವಣಗೆರೆ ಉಪಚುನಾವಣೆ 2026
- ದಾವಣಗೆರೆ ದುರ್ಗಮ್ಮ ದೇವಸ್ಥಾನ
- ದಾವಣಗೆರೆ ಬಿಜೆಪಿ ಪತ್ರಿಕಾಗೋಷ್ಠಿ
- ದೇವಸ್ಥಾನದ ಪಾವಿತ್ರ್ಯತೆ ಧಕ್ಕೆ.
- ಬಿಜೆಪಿ ಕಾಂಗ್ರೆಸ್ ರಾಜಕೀಯ
- ಯಶವಂತರಾವ್ ಜಾಧವ್
- ಶಾಮನೂರು ಶಿವಶಂಕರಪ್ಪ
- ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ





Leave a comment