Home ಕ್ರೈಂ ನ್ಯೂಸ್ ರೈಲಿನಲ್ಲಿ ಸೀಟು ವಿವಾದ: RPF ಸಿಬ್ಬಂದಿ ಹಾಗೂ ಟಿಸಿ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ ನಟಿ ಅಂತರಾ ಬ್ಯಾನರ್ಜಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ರೈಲಿನಲ್ಲಿ ಸೀಟು ವಿವಾದ: RPF ಸಿಬ್ಬಂದಿ ಹಾಗೂ ಟಿಸಿ ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ ನಟಿ ಅಂತರಾ ಬ್ಯಾನರ್ಜಿ ಬಂಧನ!

Share
ರೈಲಿ
Share

ಸೂರತ್: ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸೀಟು ಹಂಚಿಕೆ ವಿಚಾರವಾಗಿ ನಡೆದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾಡೆಲ್ ಹಾಗೂ ನಟಿ ಅಂತರಾ ಬ್ಯಾನರ್ಜಿ ಎಂಬುವವರು ರೈಲ್ವೆ ಭದ್ರತಾ ಪಡೆ (RPF) ಸಿಬ್ಬಂದಿ ಮತ್ತು ಟಿಕೆಟ್ ತಪಾಸಕರ (TC) ಮೇಲೆ ಬ್ಲೇಡ್‌ನಿಂದ ಹಲ್ಲೆ ನಡೆಸಿ, ಬಟ್ಟೆ ಬಿಚ್ಚಿ ಹಂಗಾಮ ಸೃಷ್ಟಿಸಿದ ಘಟನೆ ನಡೆದಿದೆ.

ಆಗಸ್ಟ್ 12 ರಂದು ಬಂದ್ರಾದಿಂದ ಸೂರತ್‌ಗೆ ಶೂಟಿಂಗ್‌ಗಾಗಿ ಪ್ರಯಾಣಿಸುತ್ತಿದ್ದ ಅಂತರಾ, ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಸಿ ಕೋಚ್ ಪ್ರವೇಶಿಸಿ ಬೇರೊಬ್ಬರ ಮೀಸಲು ಆಸನದಲ್ಲಿ ಕುಳಿತಿದ್ದರು.

ಸೀಟು ಖಾಲಿ ಮಾಡಲು ನಿರಾಕರಿಸಿದಾಗ ಆಕೆಯನ್ನು ತಡೆಯಲು ಬಂದ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆಸಿ, ತನ್ನ ಬಳಿ ಇದ್ದ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆ ಬಳಿಕ ರೈಲಿನ ಕಿಟಕಿಯ ಗಾಜನ್ನು ಒಡೆದು ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ದಹನು ರೋಡ್ ನಿಲ್ದಾಣದಲ್ಲಿ ಜಿಆರ್‌ಪಿ (GRP) ವಶಕ್ಕೆ ಪಡೆದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಆಕೆಗೆ ಜಾಮೀನು ಮಂಜೂರಾಗಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles