ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಆವರಣದಲ್ಲಿ ಮಳೆಯ ಆಗಮನಕ್ಕಾಗಿ ಪ್ರಾರ್ಥಿಸಿ ಜೂನ್ 28ರಿಂದ ಜುಲೈ 26ರವರೆಗೆ ಒಟ್ಟು 5 ವಾರಗಳ ಕಾಲ ಸಂತೆ ನಡೆಸಲು ತೀರ್ಮಾನಿಸಲಾಗಿದೆ.
ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ನ ಕಾರ್ಯಾಧ್ಯಕ್ಷ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆದೇಶದ ಮೇರೆಗೆ ದೇವಸ್ಥಾನದ ಧರ್ಮದರ್ಶಿಗಳು ಹಾಗೂ ಬಾಬುದಾರರು ಈ ನಿರ್ಧಾರ ಕೈಗೊಂಡಿದ್ದಾರೆ.
ಇತಿಹಾಸದ ಪ್ರಕಾರ, ದೇವಸ್ಥಾನದ ಪ್ರತಿಷ್ಠಾಪನೆಯಾದಾಗಿನಿಂದಲೂ ಮಳೆ ಇಲ್ಲದೆ ಬರದ ಪರಿಸ್ಥಿತಿ ಆವರಿಸಿದಾಗ ಸಾರ್ವಜನಿಕರು, ರೈತರು ಹಾಗೂ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದಾಗ ದೇವಿಗೆ ಪ್ರಾರ್ಥನೆ ಸಲ್ಲಿಸಿ, ದೇವಸ್ಥಾನದ ಮುಂಭಾಗದಲ್ಲಿ ಸಂತೆ ಹಾಕುವುದರಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು ಎಂಬ ಪ್ರತೀತಿ ಇದೆ.
ಇದರ ಹಿನ್ನೆಲೆಯಲ್ಲಿ ಈ ವರ್ಷವೂ ವರುಣನ ಕೃಪೆಗಾಗಿ ದೇವಸ್ಥಾನದ ಸುತ್ತಮುತ್ತ ಹಾಗೂ ಎಸ್.ಕೆ.ಪಿ. ರಸ್ತೆ, ಹಳೇಪೇಟೆ ಆವರಣದಲ್ಲಿ ಬೆಳಗಿನಿಂದ ಸಂಜೆಯವರೆಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ಕೆ ರೈತರು, ವ್ಯಾಪಾರಸ್ಥರು, ಸಾರ್ವಜನಿಕರು, ಭಕ್ತಾದಿಗಳು, ಅರಕ್ಷಕ ಹಾಗೂ ಮಹานಗರ ಪಾಲಿಕೆ ಸಿಬ್ಬಂದಿ ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಟ್ರಸ್ಟ್ನ ಧರ್ಮದರ್ಶಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.
- Davanagere Duggamma Sante
- DAVANAGERE NEWS
- Davanagere rain market
- Durgambika temple fair
- June 28 temple market
- Karnataka traditional fair
- praying for rain
- rain ritual Davanagere
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಮಾರುಕಟ್ಟೆ ಸುದ್ದಿ
- ಜೂನ್ 28 ರಿಂದ ಸಂತೆ
- ದಾವಣಗೆರೆ ದುಗ್ಗಮ್ಮ ಜಾತ್ರೆ
- ದಾವಣಗೆರೆ ಮಳೆ ಸಂತೆ
- ದಾವಣಗೆರೆ ಸುದ್ದಿ
- ದುರ್ಗಾಂಬಿಕಾ ದೇವಸ್ಥಾನ ಸಂತೆ
- ಮಳೆಗಾಗಿ ಪ್ರಾರ್ಥನೆ
- ವರುಣನ ಕೃಪೆ





Leave a comment