ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಮಂಗಳವಾರ ತಡರಾತ್ರಿ ಭೀಕರ ಘಟನೆಯೊಂದು ನಡೆದಿದೆ. ಸ್ಥಳೀಯ ಪಿಜ್ಜಾ ಔಟ್‌ಲೆಟ್‌ಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಕೇವಲ ಮೂರು ಸೆಕೆಂಡುಗಳಲ್ಲಿ ಮೂರು ಸುತ್ತು ಗುಂಡು ಹಾರಿಸಿ ತಲೆಮರೆಸಿಕೊಂಡಿದ್ದಾರೆ. ಈ ಇಡೀ ಕೃತ್ಯ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಗುಂಡಿನ ಸದ್ದು ಕೇಳುತ್ತಿದ್ದಂತೆ ಅಂಗಡಿಯಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಪ್ರಾಣಭಯದಿಂದ ಹೊರಗೆ ಓಡಿದ್ದಾರೆ. ಘಟನೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ‘ಗೋಪಿ ಲಹೋರಿಯಾ ಗ್ರೂಪ್’ ಹೆಸರಿನ ಖಾತೆಯೊಂದು ಈ ದಾಳಿಯ ಹೊಣೆ ಹೊತ್ತುಕೊಂಡಿದೆ.
ಇದು ಹಫ್ತಾ ವಸೂಲಿ (Extortion) ಅಥವಾ ಗ್ಯಾಂಗ್‌ಸ್ಟರ್‌ಗಳ ಬೆದರಿಕೆ ಕೃತ್ಯವೇ ಎಂಬ ಕೋನದಲ್ಲಿ ಪೋಲಿಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ





Leave a comment