ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಚುನಾವಣಾ ಅಕ್ರಮ ನಡೆಯುತ್ತಿದೆಯಾ… ನಿಮಗೆ ಗೊತ್ತಾಯ್ತಾ..? ಹಾಗಿದ್ದರೆ ಸಿವಿಸಿಲ್ ಆಪ್ ಬಳಸಿ, ದೂರು ಸಲ್ಲಿಸಿ

On: April 12, 2023 10:31 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:12-04-2023

ದಾವಣಗೆರೆ (DAVANAGERE): ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಿಗೆ ಸಹಾಯ ಮತ್ತು ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದು ಮಾದರಿ ನೀತಿ ಸಂಹಿತೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ವಿವಿಧೆಡೆ ಚೆಕ್ ಪೋಸ್ಟ್ (CHECK POST)ಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಅದರಂತೆ ಎಲ್ಲಾ ತಾಲ್ಲೂಕುಗಳಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ (ROOM) ಸ್ಥಾಪಿಸಿ ಸಾರ್ವಜನಿಕರಿಗೆ ಮಾಹಿತಿಗೆ ಸಹಾಯವಾಣಿ ಹಾಗೂ ಟೋಲ್‍ಫ್ರೀ ನಂಬರ್ ಗಳ ಮೂಲಕ ನಿಯಂತ್ರಿಸಲಾಗುತ್ತಿದೆ ಎಂದಿದ್ದಾರೆ.

1950 ಮತ್ತು 18004251342 ಟೋಲ್‍ಫ್ರೀ:

ಚುನಾವಣೆ ಅಕ್ರಮಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು ಟೋಲ್‍ಫ್ರೀ ನಂಬರ್ ಗಳ ಮೂಲಕ ಸಾರ್ವಜನಿಕರಿಂದ ಕರೆಗಳನ್ನು ಸ್ವೀಕರಿಸಲಾಗುತ್ತಿದೆ. ಮಾ.29 ರಿಂದ ಏಪ್ರಿಲ್ 12 ರ ವರೆಗೆ ಒಟ್ಟು 228 ದೂರುಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯ ಮಾಹಿತಿ, ಮತದಾರರ ಹೆಸರು ಬದಲಾವಣೆ, ಚುನಾವಣಾ ಗುರುತಿನ ಚೀಟಿಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.

ಸಿವಿಸಿಲ್ ಹದ್ದಿನ ಕಣ್ಣು:

ಸಿವಿಸಿಲ್ ಆಪ್ ಮೂಲಕವು ಚುನಾವಣೆ (ELECTION)ಅಕ್ರಮಗಳ ಬಗ್ಗೆ ದೂರು ಸ್ವೀಕರಿಸಲಾಗುತ್ತಿದೆ. ಸಿವಿಜಿಲ್ ಸಿಟಿಜನ್ ಆಪ್ (APP) ಡೌನ್‍ಲೋಡ್ (DOWNLOAD)ಮಾಡಿಕೊಂಡು ಚುನಾವಣೆ ಅಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಫೆÇೀಟೋ ಸಹಿತ ಮಾಹಿತಿ ಹಾಕಿದ 20 (TWENTY) ನಿಮಿಷಗಳಲ್ಲಿ ಪರಿಹಾರ ದೊರಕಲಿದೆ. ಸಿವಿಜಲ್ ಅಪ್ ಮೂಲಕ ಸಾರ್ವಜನಿಕರು ನೇರವಾಗಿ ಪೋಟೋ (PHOTO), ವೀಡಿಯೋ (VIDEO) ಮತ್ತು ಆಡಿಯೋ ಸೆರೆ ಹಿಡಿದು ಕಳುಹಿಸಿದ ತಕ್ಷಣ ನಿಯಂತ್ರಣ ಕೊಠಡಿ (ROOM)ಗೆ ತಲುಪಲಿದ್ದು ಎಫ್.ಎಸ್.ಟಿ. ತಂಡವು 10 ನಿಮಿಷದೊಳಗಾಗಿ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳಲಿದ್ದು ಇದು ಸಿವಿಜಲ್‍ನ ವಿಶೇಷತೆಯಾಗಿದೆ.

ಜಿಲ್ಲೆಯಲ್ಲಿ ಸಿವಿಸಿಲ್ ಆಪ್ ಪರಿಶೀಲನೆಗೂ ಪ್ರತ್ಯೇಕ ತಂಡ ಕಾರ್ಯ ನಿರ್ವಹಿಸುತ್ತಿದೆ ಇದುವರೆಗೂ 26 ದೂರುಗಳು ಸ್ವೀಕಾರವಾಗಿದೆ. ಅದರಲ್ಲಿ 12 ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ ಚಿನ್ಹೆ, ಮುಖಂಡರ ಭಿತ್ತಿಪತ್ರಗಳಿಗೆ ಸಂಬಂಧಿಸಿದ್ದಾಗಿದೆ. ಅವುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಪರಿಣಾಮಕಾರಿಯಾಗಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಸಾರ್ವಜನಿಕರು ಸಿವಿಜಲ್ ಆಪ್ ಡೌನ್‍ಲೋಡ್ ಮಾಡಿಕೊಂಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಾಗ ಇದು ಸೆರೆ ಹಿಡಿದಲ್ಲಿ ಸಹಾಯಕವಾಗಲಿ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment