Home ದಾವಣಗೆರೆ ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನಿರಂತರ ಪ್ರಯತ್ನ: ದಾವಣಗೆರೆ ಜಿಲ್ಲೆಯ ಹಳ್ಳಿಗಳಿಗೆ ಸಿಗಲಿದೆ ಹೈ-ಸ್ಪೀಡ್ ಇಂಟರ್ನೆಟ್!
ದಾವಣಗೆರೆಬೆಂಗಳೂರು

ದಾವಣಗೆರೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನಿರಂತರ ಪ್ರಯತ್ನ: ದಾವಣಗೆರೆ ಜಿಲ್ಲೆಯ ಹಳ್ಳಿಗಳಿಗೆ ಸಿಗಲಿದೆ ಹೈ-ಸ್ಪೀಡ್ ಇಂಟರ್ನೆಟ್!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಗ್ರಾಮೀಣ ಪ್ರದೇಶಗಳಿಗೆ ಗುಣಮಟ್ಟದ ಮೊಬೈಲ್ ಸಂಪರ್ಕ ಕಲ್ಪಿಸಲು ದಾವಣಗೆರೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ಸರ್ಕಾರ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿಗಳೊಂದಿಗೆ ನಿರಂತರವಾಗಿ ನಡೆಸಿದ ಪ್ರಯತ್ನಕ್ಕೆ ಸ್ಪಂದಿಸಿರುವ ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‌ಎನ್‌ಎಲ್), ಕ್ಷೇತ್ರದ 12 ಗ್ರಾಮಗಳಲ್ಲಿ 4ಜಿ ಮೊಬೈಲ್ ಟವರ್‌ಗಳನ್ನು ಈಗಾಗಲೇ ಕಾರ್ಯಾರಂಭಗೊಳಿಸಿದೆ.

ಮತ್ತಷ್ಟು 6 ಗ್ರಾಮಗಳಲ್ಲಿ ಹೊಸ 4ಜಿ ಟವರ್‌ಗಳಿಗೆ ಅನುಮೋದನೆ ನೀಡಿದೆ. ಈ ಕುರಿತು ಕರ್ನಾಟಕ ಟೆಲಿಕಾಂ ವಲಯದ ಮುಖ್ಯ ಮಹಾಪ್ರಬಂಧಕರಾದ ಎನ್. ಸುಜಾತ ಅವರು ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಅಧಿಕೃತ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಯೋಜನೆಯಡಿ ಜಗಳೂರು, ದಾವಣಗೆರೆ, ಚನ್ನಗಿರಿ ಹಾಗೂ ನ್ಯಾಮತಿ ತಾಲ್ಲೂಕುಗಳ ದ್ವಾರಕಾನಗರ, ಕಡರಪ್ಪನಹಟ್ಟಿ, ಪಂಡರಾಪುರ, ಶಿವಪುರ, ಶ್ರೀಮಾರುತಿನಗರ, ತಿಮ್ಮಪ್ಪನಗರ, ಕುಕ್ಕುವಾಡ, ಚಿಕ್ಕಮಳಲಿ, ನಿಲೋಗಲ್ಲು, ಶಿವಗಂಗೆಹಳ್ಳಿ ಮತ್ತು ನರಗಿನಕೆರೆ ಸೇರಿದಂತೆ 11 ಗ್ರಾಮಗಳು ಹಾಗೂ ಹರಪನಹಳ್ಳಿ ತಾಲ್ಲೂಕಿನ ವಡೇರಹಳ್ಳಿ ಸೇರಿ ಒಟ್ಟು 12 ಗ್ರಾಮಗಳಲ್ಲಿ 4ಜಿ ಸೇವೆ ಆರಂಭವಾಗಿದೆ.

ಇದಲ್ಲದೆ, ದಾವಣಗೆರೆ ಜಿಲ್ಲೆಯ ಅಣ್ಣಾಪುರ, ಬುಸ್ಸೇನಹಳ್ಳಿ, ಹಾಲೇಶಪುರ ಹಾಗೂ ಮುಗಳಿಹಳ್ಳಿ, ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ವಾಲಾ ತಾಂಡಾ ಮತ್ತು ಕೊಂಗನಹೊಸೂರು ಗ್ರಾಮಗಳಲ್ಲಿ ಹೊಸ 4ಜಿ ಟವರ್‌ಗಳನ್ನು ಸ್ಥಾಪಿಸಲು ಅನುಮೋದನೆ ದೊರೆತಿದೆ. ಸಂಸದರ ನಿರಂತರ ಪ್ರಯತ್ನದಿಂದ ಈ ಕ್ರಮ ಕೈಗೊಳ್ಳಲಾಗಿದೆ.

Share

Leave a comment

Leave a Reply

Your email address will not be published. Required fields are marked *