SUDDIKSHANA KANNADA NEWS/ DAVANAGERE/DATE:12_09_2025
ಉಡುಪಿ: ಭಗ್ನಪ್ರೇಮಿಯೊಬ್ಬ ಯುವತಿಗೆ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪದ ಕೊಕ್ಕರ್ಣೆಯಲ್ಲಿ ನಡೆದಿದೆ.
READ ALSO THIS STORY: ಧರ್ಮಸ್ಥಳ ಕುರಿತಂತೆ ಬಾಂಬ್ ಸಿಡಿಸಿದ ಸೌಜನ್ಯ ಚಿಕ್ಕಪ್ಪ: ಕೊಟ್ಟ ಸ್ಫೋಟಕ ಮಾಹಿತಿ ಏನು?
ಕಾರ್ತಿಕ್ ಪೂಜಾರಿ ಎಂಬಾತನೇ ಕೊಲೆಗೆ ಯತ್ನಿಸಿದ ಯುವಕ. ಕೊಕ್ಕರ್ಣೆಯ ಪೂಜಾರಿಬೆಟ್ಟು ಗ್ರಾಮದ ರಕ್ಷಿತಾ (20) ತೀವ್ರವಾಗಿ ಗಾಯಗೊಂಡ ಯುವತಿ. ಯುವತಿಯು ಉಡುಪಿ ತಾಲೂಕಿನ ಮಣಿಪಾಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು. ಮನೆಯಿಂದ ಕೆಲಸಕ್ಕೆ ಹೋಗಲು ನಡೆದುಕೊಂಡು ಬರುವಾಗ ಕಾರ್ತಿಕ್ ಪೂಜಾರಿ ಇದ್ದಕ್ಕಿದ್ದಂತೆ ಬೈಕ್ ನಲ್ಲಿ ಬಂದು ನೇರವಾಗಿ ಚಾಕುವಿನಿಂದ ಚುಚ್ಚಿದ್ದಾನೆ.
ಇಂದು ಯುವತಿಯ ಜನುಮದಿನವಾಗಿದ್ದು, ಆಕೆಯ ಹುಟ್ಟುಹಬ್ಬದಂದೇ ಚಾಕುವಿನಿಂದ ಇರಿದಿರುವ ಕಾರ್ತಿಕ್ ಪೂಜಾರಿ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ. ಯುವತಿಗೆ ಚಾಕು ಚುಚ್ಚಿದ ನಂತರ ಯುವಕ ಬೈಕ್ ಸ್ಥಳದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಕಾರ್ತಿಕ್ ಪೂಜಾರಿ ಹಾಗೂ ರಕ್ಷಿತಾ ಪೂಜಾರಿ ಇಬ್ಬರು ಪ್ರೀತಿಸುತ್ತಿದ್ದರು. ಮದುವೆಗೂ ಕಾರ್ತಿಕ್ ಪೂಜಾರಿ ಒತ್ತಾಯಿಸುತ್ತಿದ್ದ. ಆಕೆಗೆ ಜನುಮದಿನದಂದು ಶುಭಾಶಯ ಕೋರಲು ಹೋಗಿ ಮದುವೆಯಾಗೋಣ ಎಂದಿದ್ದಾನೆ. ಇದಕ್ಕೆ ಆಕೆ ಒಪ್ಪದಿದ್ದಾಗ ಚಾಕು ಇರಿದಿದ್ದಾನೆ ಎಂದು ತಿಳಿದು ಬಂದಿದೆ.