SUDDIKSHANA KANNADA NEWS/ DAVANAGERE/ DATE:02-10-2024
ಬೆಂಗಳೂರು: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಟೆನ್ಶನ್ ನಲ್ಲಿದ್ದಾರೆ. ಹೈಕೋರ್ಟ್, ವಿಶೇಷ ಜನಪ್ರತಿನಿಧಿಗಳ ಕೋರ್ಟ್ ರಾಜ್ಯಪಾಲರ ಪ್ರಾಸಿಕ್ಯೂಷನ್ ಎತ್ತಿ ಹಿಡಿದಿದೆ. ಜೊತೆಗೆ ಐಟಿ ತನಿಖೆಯ ಸುಳಿಯಲ್ಲಿ ಸಿದ್ದರಾಮಯ್ಯ ಸಿಲುಕಿದ್ದಾರೆ. ಈ ನಡುವೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಸಿದ್ದರಾಮಯ್ಯರಿಗೆ ಮುಜುಗರ ತರುವಂತಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವಿವಿಐಪಿ ಸಂಸ್ಕೃತಿಯು ಅನಾವರಣಗೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಶೂಗೆ ಲೇಸ್ ಅನ್ನು ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಕಟ್ಟುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಕೂಡಲೇ ಆತನ ಕೈಯಿಂದ ರಾಷ್ಟ್ರಧ್ವಜವನ್ನು ಕಸಿದುಕೊಂಡರು.
ಮೂಡಾ ಪ್ರಕರಣ ಹೊರ ಬಂದ ಬಳಿಕ ಒಂದಲ್ಲಾ ಒಂದು ರೀತಿಯ ಸಮಸ್ಯೆಯ ಸುಳಿಗೆ ಸಿಲುಕುತ್ತಿರುವ ಸಿದ್ದರಾಮಯ್ಯರು ಆತಂಕದಲ್ಲಿಯೇ ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮಾಡಿದ ಯಡವಟ್ಟು ಈಗ ಸಿದ್ದರಾಮಯ್ಯರು ಮುಜುಗರ ಎದುರಿಸುವಂತಾಗಿದೆ. ಮಾತ್ರವಲ್ಲ, ಸಿದ್ದರಾಮಯ್ಯರ ಶೂ ಲೇಸ್ ಅನ್ನು ರಾಷ್ಟ್ರಧ್ವಜ ಹಿಡಿದುಕೊಂಡು ಕಟ್ಟಿರುವುದು ಚರ್ಚೆಗೂ ಕಾರಣವಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
https://x.com/i/flow/login?redirect_after_login=%2Fhashtag%2FKarnataka%3Fsrc%3Dhashtag_click