SUDDIKSHANA KANNADA NEWS/ DAVANAGERE/ DATE:03-02-2025
ದಾವಣಗೆರೆ: ಹಲವು ಮಹಿಳೆಯರು, ಯುವತಿಯರು ಹಾಗೂ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಬಂಧನಕ್ಕೊಳಗಾಗಿರುವ ಚನ್ನಗಿರಿ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ನ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಹರಿಬಿಟ್ಟ ಆರೋಪಿ ಅಮ್ಜದ್ ವಿರುದ್ಧವೇ ಆತನ ಪುತ್ರನು ಬಸವನಗರ ಪೊಲೀಸ್ ಠಾಣೆಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಎರಡು ಮದುವೆಯಾಗಿದ್ದ ಅಮ್ಜದ್ ಮೊದಲ ಪತ್ನಿಯ ಪುತ್ರನು ಸ್ಫೋಟಕ ಆರೋಪ ಮಾಡಿದ್ದಾನೆ. ಮನೆಯಲ್ಲಿ ಇರಲು ಬಿಡುತ್ತಿಲ್ಲ. ಸುಖಾಸುಮ್ಮನೆ ಬೈಯ್ಯುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸಾಮಾನ್ಯ ಆಗಿತ್ತು. ಪದೇ ಪದೇ ಮನೆಯಿಂದ ಹೊರಹೋಗುವಂತೆ ಕಿರುಕುಳ ನೀಡುತ್ತಿದ್ದಾನೆ ಎಂದು ಅಮ್ಜದ್ ಪುತ್ರ ಬಸವನಗರ ಪೊಲೀಸ್ ಠಾಣೆಗೆ ತೆರಳಿದ್ದ ಎಂದು ತಿಳಿದು ಬಂದಿದೆ.
ಅಮ್ಜದ್ ಗೆ ಕರೆ ಮಾಡಿದ ಬಸವನಗರ ಪೊಲೀಸ್ ಠಾಣೆಗೆ ಬರುವಂತೆ ಸೂಚಿಸಿದ್ದಾರೆ. ಆದ್ರೆ, ಅಮ್ಜದ್ ನಾಟಕವಾಡಿದ್ದ. ನಾನು ಬೇರೆ ಕಡೆ ಇದ್ದೇನೆ, ಬೆಳಿಗ್ಗೆ ಠಾಣೆಗೆ ಹಾಜರಾಗುವುದಾಗಿ ಹೇಳಿದ್ದ. ಆದ್ರೆ, ಅಷ್ಟರೊಳಗೆ ಅಮ್ಜದ್ ನ ರಾಸಲೀಲೆ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಸುಮಟೋ ಕೇಸ್ ದಾಖಲಿಸಿ ಕಾಮುಕನನ್ನು ಬಂಧಿಸಿದ್ದಾರೆ.
ಆರೋಪಿ ಬಂಧನ ಆಗುವವರೆಗೆ ಬಸವನಗರ ಪೊಲೀಸರಿಗೆ ಅಮ್ಜದ್ ಕಾಮುಕತನ ಗೊತ್ತಾಗಿರಲಿಲ್ಲ. ಸದ್ಯ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದು, ತನಿಖೆ ಮುಂದುವರಿದಿದೆ. ಮೊದಲ ಪತ್ನಿಯ ಪುತ್ರನೇ ತಂದೆ ವಿರುದ್ಧ ಪೊಲೀಸರಿಗೆ ದೂರು ನೀಡಲು ತೆರಳಿದ್ದು ಈಗ ಬೆಳಕಿಗೆ ಬಂದಿದೆ.