ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಬೆಂಗಳೂರು ತರಳಬಾಳು ಕೇಂದ್ರದಲ್ಲಿ ಜ. 11ರ ಶನಿವಾರ ಹಾಸ್ಯ ಸಂಜೆ, ಜುಗಲ್ ಬಂದಿ ಕಾರ್ಯಕ್ರಮ

On: January 8, 2025 10:26 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:08-01-2025

ಬೆಂಗಳೂರು: ಸಾವಿರ ಸಾರ್ಥಕ ಕ್ಷಣ, ಆಶೀರ್ವಾದದ ಶ್ರೀ ರಕ್ಷೆ, ಭಾವುಕ ಜೀವಕ್ಕೆ, ಜೀವನವನ್ನು ಸಾರ್ಥಕಗೊಳಿಸುವಂತಹ ಕಾರ್ಯಕ್ರಮ ಬೆಂಗಳೂರು ತರಳಬಾಳು ಕೇಂದ್ರ ಸಮಿತಿಯಿಂದ ಆಯೋಜನೆ ಮಾಡಲಾಗಿದೆ.

ನಾಡಿನ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ನ್ಯಾಯಮುಖಿ, ರೈತಮುಖಿ ಕೈಂಕರ್ಯಗಳಲ್ಲಿ ಜಾತ್ಯಾತೀತ, ಧರ್ಮಾತೀತವಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠಕ್ಕೆ ಮಠ ಪರಂಪರೆಯಲ್ಲಿಯೇ ವಿಶೇಷ ಸ್ಥಾನಮಾನ ಹೊಂದಿದೆ.

ಪರಮ ಪೂಜ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ತರಳಬಾಳು ಕೇಂದ್ರದಲ್ಲಿ ಬೆಂಗಳೂರು ನಗರ ವಾಸಿಗಳ ಒತ್ತಡದ ಜೀವನಕ್ಕೆ ಕೊಂಚ ಸಾಂಸ್ಕೃತಿಕ ತಂಪೆರೆಯಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತ ನಗರ ವಾಸಿಗಳ ವಿಶೇಷವಾಗಿ ಮಹಿಳೆಯರ ಮಕ್ಕಳ, ಹಿರಿಯರ ಸಂತೋಷಕ್ಕೆ ಕಾರಣವಾಗಿದೆ.

ಹತ್ತನೇ ವಿಶ್ವ ಸಂಸ್ಕೃತ ಸಮ್ಮೇಳನ, ಬೆಳದಿಂಗಳ ಕವಿಗೋಷ್ಠಿ, ಯೋಗ ತರಬೇತಿ, ಪುಸ್ತಕ ಲೋಕಾರ್ಪಣೆ ಹೀಗೆ ಹಲವಾರು ವಿನೂತನ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ದಾಸೋಹವನ್ನು ಉಣಬಡಿಸುತ್ತಿದೆ. ಈ ವಿನೂತನ ಪ್ರಯೋಗಗಳಿಗೆ ಹೊಸ ಸೇರ್ಪಡೆಯ ಜೊತೆಗೆ ನಗರವಾಸಿಗಳಿಗೆ ಹೊಸ ವರ್ಷದ ಸಂಭ್ರಮವನ್ನು ಇಮ್ಮಡಿಗೊಳಿಸುವ ಆಶಯದೊಂದಿಗೆ ತರಳಬಾಳು ಕೇಂದ್ರ ಸಮಿತಿಯು ಈ ವಾರಾಂತ್ಯದಲ್ಲಿ ಸುಂದರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಾವಿರ ಸಾರ್ಥಕ ಕ್ಷಣ, ಆಶೀರ್ವಾದದ ಶ್ರೀ ರಕ್ಷೆ, ಭಾವುಕ ಜೀವಕ್ಕೆ, ಜೀವನವನ್ನು ಸಾರ್ಥಕಗೊಳಿಸುವತ್ತ ಹೆಜ್ಜೆ ಇಟ್ಟಿದೆ.

ಜನವರಿ 11ರ ಶನಿವಾರ ಸಂಜೆ 6 ಗಂಟೆಗೆ ತರಳಬಾಳು ಕೇಂದ್ರದ ಸಭಾಂಗಣದಲ್ಲಿ ಹಾಸ್ಯ ಜುಗಲ್ ಬಂದಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ  ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಕರುಣಿಸಲಿದ್ದಾರೆ.

ಹಾಸ್ಯ ಜುಗಲ್ ಬಂದಿ ಕಾರ್ಯಕ್ರಮವನ್ನು ಕನ್ನಡದ ಪೂಜಾರಿಗಳು, ಪಾಂಡಿತ್ಯ, ಹಾಸ್ಯ, ಭಾಷಾ ಪ್ರಾವಿಣ್ಯತೆ, ಔಚಿತ್ಯಪೂರ್ಣ ಮಾತಿಗೆ ಮನೆಮಾತಾಗಿರುವ ಶರಣ ಹಿರೇಮಗಳೂರು ಕಣ್ಣನ್ ರವರು ಮತ್ತು ಉಪನ್ಯಾಸಕರಾಗಿ, ವಿಜ್ಞಾನದ ಜೊತೆಗೆ ತತ್ವಜ್ಞಾನವಾದ ಭಗವದ್ಗೀತೆ ಮತ್ತು ವೇಧ ಅದ್ಯಾಯನದ ಜ್ಞಾನ ಹೊಂದಿ ಅರ್ಥಪೂರ್ಣ ವಾಗ್ಮಿಗೆ ಹೆಸರಾಗಿರುವ ಶರಣೆ ನಾಗಶ್ರೀ ತ್ಯಾಗರಾಜ್ ರವರು ನಡೆಸಿಕೊಡಲಿದ್ದಾರೆ.

ಅಕ್ಕನ ಬಳಗದಿಂದ ವಚನ ಗಾಯನ, ಸಿರಿಗೆರೆಯ ತರಳಬಾಳು ಕಲಾಸಂಘದಿಂದ ವಚನ ನೃತ್ಯ , ಕೊಂಡಜ್ಜಿ , ಪೃಥ್ವಿ ಮಂಜುನಾಥ್ ಬೇಲೂರು ಇವರಿಂದ ಭರತನಾಟ್ಯ ಪ್ರದರ್ಶನವು ಕಾರ್ಯಕ್ರಮಕ್ಕೆ ಮೆರುಗು ತರಲಿದೆ. ಕಾರ್ಯಕ್ರಮದ ನಂತರ ದಾಸೋಹ ವ್ಯವಸ್ಥೆಯನ್ನು ಮಾಡಲಾಗಿದೆ.

ಅಪರೂಪದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತಾವು, ತಮ್ಮ ಕುಟುಂಬದವರು, ಸ್ನೇಹಿತರು ಭಾಗವಹಿಸುವುದರ ಜೊತೆ, ಬೆಂಗಳೂರಿನಲ್ಲಿ ವಾಸವಾಗಿರುವ ತಮ್ಮ ಬಂಧು ಮಿತ್ರರಿಗೂ ಪಾಲ್ಗೊಳ್ಳುವಂತೆ ತರಳಬಾಳು ಕೇಂದ್ರದ ಕಾರ್ಯದರ್ಶಿ ವಿಶ್ವನಾಥ್ ಎಚ್.ಎಂ. ಮೊ-9845233555 ಸಂಪರ್ಕಿಸುವಂತೆ ಕೋರಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment