Home ದಾವಣಗೆರೆ ಕ್ರಿಕೆಟ್ ಚೆಂಡು ತರಲು ಹೋಗಿ ನದಿಗೆ ಬಿದ್ದ 10 ವರ್ಷದ ಬಾಲಕ: ಒಮ್ಮೆ ಮಗನ ಮುಖ ತೋರಿಸುವಂತೆ ನದಿ ದಂಡೆಯಲ್ಲೇ ನಾಲ್ಕು ದಿನಗಳಿಂದ ತಾಯಿಯ ಕಣ್ಣೀರ ಕಾಯುವಿಕೆ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಕ್ರಿಕೆಟ್ ಚೆಂಡು ತರಲು ಹೋಗಿ ನದಿಗೆ ಬಿದ್ದ 10 ವರ್ಷದ ಬಾಲಕ: ಒಮ್ಮೆ ಮಗನ ಮುಖ ತೋರಿಸುವಂತೆ ನದಿ ದಂಡೆಯಲ್ಲೇ ನಾಲ್ಕು ದಿನಗಳಿಂದ ತಾಯಿಯ ಕಣ್ಣೀರ ಕಾಯುವಿಕೆ!

Share
ನದಿ
Share

ಉತ್ತರ ಕಾಶ್ಮೀರ: ಬಂಡಿಪೋರಾ ಜಿಲ್ಲೆಯ ‘ನಾಲ್ಲಾ ಮದುಮತಿ’ ನದಿಯ ದಂಡೆಯ ಮೇಲೆ ಕಳೆದೆರಡು ದಿನಗಳಿಂದ ಶಹೀನಾ ಎಂಬ ತಾಯಿ ಕಣ್ಣೀರು ಹಾಕುತ್ತ ಕುಳಿತಿದ್ದಾರೆ. ತಮ್ಮ 10 ವರ್ಷದ ಮಗ ಮೊಮಿನ್ ಆಶಿಕ್ ನದಿಯ ರಭಸದ ಹರಿವಿನಲ್ಲಿ ಕೊಚ್ಚಿಹೋಗಿದ್ದು, ಆತನ ಮುಖವನ್ನು ಕೊನೆಯದಾಗಿ ಒಮ್ಮೆಯಾದರೂ ನೋಡಬೇಕೆಂಬ ಹಂಬಲದಲ್ಲಿ ಅವರು ನದಿಯ ನೀರನ್ನೇ ದಿಟ್ಟಿಸುತ್ತಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು?

ಬಂಡಿಪೋರಾದ ಕಲಾಸಾ ಗ್ರಾಮದ ಗನೈ ಮೊಹಲ್ಲಾದ ನಿವಾಸಿಯಾಗಿರುವ ಮೊಮಿನ್ ಆಶಿಕ್, ತನ್ನ ಸ್ನೇಹಿತನೊಂದಿಗೆ ನದಿಯ ಬದಿಯ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಲು ತೆರಳಿದ್ದ. ಅದೇ ವೇಳೆಗೆ ನದಿಯ ದಂಡೆಯ ಬಳಿ ಕ್ರಿಕೆಟ್ ಚೆಂಡೊಂದು ತಲಾಂಗಿರುವುದನ್ನು ಕಂಡು, ಅದನ್ನು ತರಲು ಆತ ನದಿಯ ಹತ್ತಿರ ತೆರಳಿದ್ದಾನೆ.

ಕಲಾಸಾ ಸೇತುವೆಯ ಕೆಳಗೆ ನೀರಿಗೆ ಬಿದ್ದಿದ್ದ ಚೆಂಡನ್ನು ತೆಗೆದು ತನ್ನ ಸ್ನೇಹಿತನತ್ತ ಎಸೆದ ಮೊಮಿನ್, ವಾಪಸ್ ದಂಡೆಗೆ ಹತ್ತಲು ಯತ್ನಿಸುವಾಗ ಕಾಲು ಜಾರಿ ರಭಸವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದಾನೆ. ಅದೇ ಸಮಯದಲ್ಲಿ ಕಿಶನ್‌ಗಂಗಾ ಜಲವಿದ್ಯುತ್ ಯೋಜನೆಯಿಂದ ನೀರು ಬಿಡಲಾಗಿದ್ದರಿಂದ ನದಿಯ ಹರಿವು ಮಿತಿಮೀರಿ ಹೆಚ್ಚಾಗಿತ್ತು. ಕ್ಷಣಾರ್ಧದಲ್ಲಿ ಆತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾನೆ.

ನಿರಂತರ ಶೋಧ ಕಾರ್ಯಾಚರಣೆ:

ಘಟನೆ ನಡೆದ ತಕ್ಷಣದಿಂದಲೇ ಎಸ್‌ಡಿಆರ್‌ಎಫ್ (SDRF), ಜಮ್ಮು-ಕಾಶ್ಮೀರ ಪೊಲೀಸರು, ಮಾರ್ಕೋಸ್ (MARCOS) ಕಮಾಂಡೋ ಪಡೆಗಳು ಹಾಗೂ ಸ್ಥಳೀಯ ಈಜುಗಾರರು ನದಿಯಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಆದರೆ, ನೀರಿನ ತೀವ್ರ ವೇಗದಿಂದಾಗಿ ಮಗುವಿನ ಸುಳಿವು ಇನ್ನೂ ಸಿಕ್ಕಿಲ್ಲ.

ನಾಲ್ಕು ಹೆಣ್ಣುಮಕ್ಕಳ ನಂತರ ಹುಟ್ಟಿದ ಏಕೈಕ ಗಂಡುಮಗನಾದ ಮೊಮಿನ್, ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದನು ಮತ್ತು ಕುದುರೆ ಸವಾರಿಯಲ್ಲಿಯೂ ಆಸಕ್ತಿ ಹೊಂದಿದ್ದನು. ಆತನ ಶೋಧಕ್ಕಾಗಿ ಇಡೀ ಗ್ರಾಮವೇ ಪ್ರಾರ್ಥಿಸುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles