Home ದಾವಣಗೆರೆ ಪ್ರಿಯಕರನಿಗೆ ‘ಕೆಟಿಎಂ’ ಬೈಕ್ ಗಿಫ್ಟ್ ಮಾಡಲು 72 ಗ್ರಾಂ ಚಿನ್ನ ಕದ್ದ ಕಾಲೇಜು ವಿದ್ಯಾರ್ಥಿನಿ ಬಂಧನ, ಪ್ರಿಯಕರ ಪರಾರಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪ್ರಿಯಕರನಿಗೆ ‘ಕೆಟಿಎಂ’ ಬೈಕ್ ಗಿಫ್ಟ್ ಮಾಡಲು 72 ಗ್ರಾಂ ಚಿನ್ನ ಕದ್ದ ಕಾಲೇಜು ವಿದ್ಯಾರ್ಥಿನಿ ಬಂಧನ, ಪ್ರಿಯಕರ ಪರಾರಿ!

Share
ಪ್ರಿಯಕರ
Share

ಪೊಲ್ಲಾಚಿ (ತಮಿಳುನಾಡು): ಪ್ರಿಯಕರನ ದುಬಾರಿ ಬೈಕ್ ಕನಸನ್ನು ನನಸು ಮಾಡಲು ಹೋಗಿ, ಕಾಲೇಜು ವಿದ್ಯಾರ್ಥಿನಿಯೊಬ್ಬಳು ಜೈಲು ಪಾಲಾಗಿರುವ ಆಘಾತಕಾರಿ ಘಟನೆ ತಮಿಳುನಾಡಿನ ಪೊಲ್ಲಾಚಿಯಲ್ಲಿ ಬೆಳಕಿಗೆ ಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಬಂಧಿತ 19 ವರ್ಷದ ಯುವತಿಯು ಸರ್ಕಾರಿ ಆರ್ಟ್ಸ್ ಕಾಲೇಜಿನಲ್ಲಿ ಬಿ.ಕಾಮ್ ಓದುತ್ತಿದ್ದಾಳೆ. ಆಕೆಯ ಪ್ರಿಯಕರ ಜನಗನ್ ಶಿವ ಎಂಬಾತ ‘ಕೆಟಿಎಂ’ (KTM) ಬೈಕ್ ಬೇಕೆಂದು ಆಸೆ ವ್ಯಕ್ತಪಡಿಸಿದ್ದ. ಆತನ ಆಸೆಯನ್ನು ಪೂರೈಸಲು ಹಣವಿಲ್ಲದ ಕಾರಣ, ಯುವತಿಯು ತನ್ನ ತಂದೆಯ ಸ್ನೇಹಿತ ತಮಿಳುಸೆಲ್ವನ್ ಎಂಬುವವರ ಮನೆಗೆ ಭೇಟಿ ನೀಡಿದಾಗ ಬೀರುದಲ್ಲಿದ್ದ ಸುಮಾರು 72 ಗ್ರಾಂ (9 ಸವರನ್) ಚಿನ್ನಾಭರಣಗಳನ್ನು ಕದ್ದಿದ್ದಳು.

ಬಳಿಕ ಆ ಚಿನ್ನವನ್ನು ಸ್ಥಳೀಯ ಜ್ಯುವೆಲ್ಲರಿ ಶೋರೂಂನಲ್ಲಿ ಮಾರಿ ಸುಮಾರು 2.5 ಲಕ್ಷ ರೂಪಾಯಿ ನಗದು ಪಡೆದುಕೊಂಡಿದ್ದಳು. ಅದೇ ಹಣದಿಂದ ತನ್ನ ಪ್ರಿಯಕರನಿಗೆ ಬ್ರ್ಯಾಂಡ್ ನ್ಯೂ KTM ಬೈಕ್ ಖರೀದಿಸಿಕೊಟ್ಟಿದ್ದಳು. ಬೈಕ್ ಖರೀದಿಸಿದ ನಂತರ ಇಬ್ಬರೂ ಶೋರೂಂನಲ್ಲಿ ಸಂಭ್ರಮಿಸಿ, ಫೋಟೋ ಹಾಗೂ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ಈ ವೀಡಿಯೋಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಮನೆಯಲ್ಲಿದ್ದ ಒಡವೆ ಕಾಣೆಯಾಗಿರುವುದನ್ನು ಗಮನಿಸಿದ ತಮಿಳುಸೆಲ್ವನ್ ಪೊಲ್ಲಾಚಿ ಈಸ್ಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವಿನ ಕೃತ್ಯ ಬಯಲಾಗಿದೆ. ಪ್ರಸ್ತುತ ಯುವತಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದ್ದು, ಘಟನೆಯ ನಂತರ ತಲೆಮರೆಸಿಕೊಂಡಿರುವ ಆಕೆಯ ಪ್ರಿಯಕರನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *