SUDDIKSHANA KANNADA NEWS/ DAVANAGERE/ DATE:24-04-2023
ದಾವಣಗೆರೆ (DAVANAGERE): ಲಿಂಗಾಯತ ಸಿಎಂ (CM) ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಎಲ್ಲಾ ವಿಚಾರಗಳು ವರಿಷ್ಠರ ಗಮನದಲ್ಲಿರುತ್ತವೆ. ಚುನಾವಣಾ ಫಲಿತಾಂಶ ಬಂದ ಬಳಿಕ ಯಾರು
ಮುಖ್ಯಮಂತ್ರಿ ಆಗಬೇಕು ಎಂಬುದು ತೀರ್ಮಾನ ಆಗಲಿದೆ ಎಂದು ಹೇಳುವ ಮೂಲಕ ಸಿಎಂ (CM) ಬಸವರಾಜ್ ಬೊಮ್ಮಾಯಿ (BASAVARAJ BOMMAI) ಅಚ್ಚರಿ ಹೇಳಿಕೆ ನೀಡಿದ್ದಾರೆ.
ಜಿಎಂಐಟಿ ಗೆಸ್ಟ್ ಹೌಸ್ (GMIT GUEST HOUSE) ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ಬಿಜೆಪಿ ಪಕ್ಷಕ್ಕೆ ಲಿಂಗಾಯತ ಸಮುದಾಯದ ಮತಗಳು ಬರುತ್ತವೆ ಎಂಬ ವಿಶ್ವಾಸ ಇದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ವೀರಶೈವ ಲಿಂಗಾಯತರ ಸಭೆ ಮಾಡುತ್ತಿದ್ದಾರೆ. ಇದೇನೂ ಹೊಸದಲ್ಲ. ಚುನಾವಣೆಯಲ್ಲಿ ಈ ಹಿಂದೆ ಯಾವ ರೀತಿ ಕಾರ್ಯತಂತ್ರ ರೂಪಿಸುತ್ತಿದ್ದಾರೋ ಅದೇ ರೀತಿಯಲ್ಲಿ ಈ ಬಾರಿಯೂ ಆಗುತ್ತಿದೆ. ಇದರಲ್ಲಿ ವಿಶೇಷತೆ ಏನೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿದ್ದು ಹೇಳಿಕೆ ತಿರುಚಿಲ್ಲ:
ವೀರಶೈವ ಲಿಂಗಾಯತ ಸಮುದಾಯದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರು ಆಡಿರುವ ಮಾತು ವಿಡಿಯೋದಲ್ಲಿದೆ. ಅದನ್ನು ಯಾರೂ ತಿರುಚಲು ಸಾಧ್ಯವಿಲ್ಲ. ಈ ಹಿಂದೆ ಪತ್ರಿಕೆಯಲ್ಲಿ ಬರೆದಾಗ ತಿರುಚಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಪರಿಸ್ಥಿತಿ ಆ ರೀತಿ ಇಲ್ಲ. ಮೊದಲು ಹೇಳಿದ್ದೇ ಬೇರೆ, ಆಮೇಲೆ ಸಿದ್ದರಾಮಯ್ಯ ಹೇಳಿದ್ದೇ ಬೇರೆ. ಅವರ ಹೇಳಿಕೆಗಳನ್ನು ಬದಲಿಸಿದ್ದಾರೆ ಅಷ್ಟೇ. ಯಾರೂ ತಿರುಚಿಲ್ಲ. ಸಿದ್ದರಾಮಯ್ಯ ಮಾತನಾಡಿರುವುದು ಸ್ಟಷ್ಟವಾಗಿದೆ. ಜನರೇನೂ ದಡ್ಡರಲ್ಲ ಎಂದು ಎಂದು ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದರು.
ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ (NARENDRA MODI), ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ (YOGI ADITHYANATH), ರಾಜನಾಥ್ ಸಿಂಗ್ ಸೇರಿದಂತೆ ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬರುತ್ತಾರೆ. ಈಗಾಗಲೇ ಅಮಿತ್ ಶಾ (AMITH SHA) ಬಂದಿದ್ದಾರೆ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ (JAGADEESH SHETTER) ಬಿಜೆಪಿಯಲ್ಲಿ ಎಲ್ಲಾ ಪದವಿ, ಹುದ್ದೆ ಪಡೆದು ಹೋಗಿದ್ದಾರೆ. ಆ ಕ್ಷೇತ್ರದ ಜನರೇ ಅವರ ತೀರ್ಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿರುವುದಕ್ಕೆ ಆ ಕ್ಷೇತ್ರಗಳ ಜನರೇ ಮಾತನಾಡುತ್ತಿದ್ದಾರೆ. ಪಕ್ಷ (PARTY) ಅವರನ್ನು ಗೌರವಯುತವಾಗಿ ನಡೆದುಕೊಂಡಿತ್ತು ಎಂದರು.
ತೋರಿಕೆಗೆ ರಾಹುಲ್ ಭೇಟಿ:
ರಾಹುಲ್ ಗಾಂಧಿ (RAHUL GANDHI) ಕೂಡಲಸಂಗಮಕ್ಕೆ ಭೇಟಿ ನೀಡುವ ಮೂಲಕ ಲಿಂಗಾಯತ ಸಮುದಾಯ ಮತಗಳತ್ತ ಚಿತ್ತ ನೆಟ್ಟಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ ಅವರು, ರಾಹುಲ್ ಗಾಂಧಿ ತೋರಿಕೆಗೆ ಮಾತ್ರ ಭೇಟಿ ನೀಡಿದ್ದಾರೆ. ಅಷ್ಟಾದರೂ ಕಾಳಜಿ ಬಂದಿದೆಯಲ್ವಾ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಜನರ ಭಾವನೆಗಳ ಜೊತೆ ಆಟವಾಡುವುದಿಲ್ಲ. ಕಾಂಗ್ರೆಸ್ (CONGRESS) ಭಾವನೆಗಳ ಜೊತೆ ಆಟವಾಡುವುದು. ಕೆಪಿಸಿಸಿ ಡಿ. ಕೆ. ಶಿವಕುಮಾರ್ (D. K. SHIVAKUMAR) ಹೇಳೋದು ಒಂದು, ಮಾಡೋದು ಇನ್ನೊಂದು. ಹಾಗಾಗಿ, ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕೊಲ್ಲೂರಿನಲ್ಲಿ ಚಂಡಿಕಾ ಯಾಗ ಮಾಡಿರುವುದು ಅವರ ವೈಯಕ್ತಿಕ ವಿಚಾರ. ಅವ್ರೂ ಪೂಜೆ ಮಾಡುತ್ತಾರೆ. ನಾವು ಪೂಜೆ ಮಾಡುತ್ತೇವೆ. ದೇವರ ಆಶೀರ್ವಾದ ಯಾರಿಗೆ ಸಿಗುತ್ತೆ ಎಂಬುದು ಚುನಾವಣೆ ಫಲಿತಾಂಶದ ಬಳಿಕ ಗೊತ್ತಾಗಲಿದೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರು ಹೇಳಿದಂತೆ ಎಲ್ಲರೂ ಮತ ಹಾಕುವುದಿಲ್ಲ ಎಂಬುದು ನನ್ನ ಭಾವನೆ. ಧರ್ಮ, ಜಾತಿ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಮಾತನಾಡುವುದಿಲ್ಲ. ಮಾಧ್ಯಮವದರೇ ಅದರ ಬಗ್ಗೆ ವಿಶ್ಲೇಷಿಸಬೇಕು ಎಂದು ಹೇಳಿದರು.
ನಾನು ಹೋದ ಕಡೆಗಳಲೆಲ್ಲಾ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ನಾಳೆ ನಾಡಿದ್ದು ಬೆಳಗಾವಿ (BELAGAVI) ಜಿಲ್ಲೆಯಲ್ಲಿ ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ನಾಮಪತ್ರ ವಾಪಸ್ ಪಡೆಯುತ್ತಾರೆ:
ನಾಮಪತ್ರ ಹಿಂತೆಗೆದುಕೊಳ್ಳಲು ಇಂದು ಕೊನೆ ದಿನ (LAST DAY). ಕೆಲವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ. ಆ ಬಳಿಕ ಚುನಾವಣೆಯಲ್ಲಿ ಅಭ್ಯರ್ಥಿಗಳು ಯಾರಿರುತ್ತಾರೆ ಎಂಬುದು ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಜನರು ಬಹಳ ವಿಚಾರ ಮಾಡಿ ತೀರ್ಮಾನಕ್ಕೆ ಬರುತ್ತಿದ್ದಾರೆ. ಶಿಕ್ಷಣ (EDUCATION), ಉದ್ಯೋಗ (JOB), ಆರೋಗ್ಯ (HEALTH) ಸೇರಿದಂತೆ ಅವರ ಜೀವನಮಟ್ಟದ ಬಗ್ಗೆ ಗೊತ್ತಿದೆ. ಕೆಲಸ ಮಾಡಿರುವವರು, ಮಾಡುತ್ತಾರೆ ಎಂಬ ನಂಬಿಕೆ ಜನರಲ್ಲಿ ಗಳಿಸಿದವರಿಗೆ ಆಶೀರ್ವಾದ ಮಾಡುತ್ತಾರೆ. ದೊಡ್ಡ ಪ್ರಮಾಣದಲ್ಲಿ ಹೊಸಬರಿಗೆ ಅವಕಾಶ ಕೊಡಲಾಗಿದೆ. ಶೇಕಡಾ 80 ರಿಂದ 90ರಷ್ಟು ಬಂಡಾಯ ಎದ್ದವರು ನಾಮಪತ್ರ ವಾಪಸ್ ಪಡೆಯುತ್ತಾರೆ. ನಾನು ಕಳೆದ ಎರಡು ದಿನಗಳಿಂದ ಮಾತುಕತೆ ನಡೆಸಿದ್ದೇನೆ. ಲಿಂಗಾಯತ ಮತಗಳು ಕಳೆದ ಬಾರಿಗಿಂತ ಈ ಬಾರಿ ಜಾಸ್ತಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.