ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Davanagere: ಬಿಜೆಪಿಯಿಂದ ಗುರುಸಿದ್ದನಗೌಡ, ಪುತ್ರರ ಉಚ್ಚಾಟನೆ ಸಮರ್ಥಿಸಿದ ವೀರೇಶ್ ಹನಗವಾಡಿ

On: September 11, 2023 8:59 AM
Follow Us:
Bjp President clarification
---Advertisement---

SUDDIKSHANA KANNADA NEWS/ DAVANAGERE/ DATE:11-09-2023

ದಾವಣಗೆರೆ (Davanagere): ಜಗಳೂರು ಮಾಜಿ ಶಾಸಕ ಗುರುಸಿದ್ದನಗೌಡ ಹಾಗೂ ಅವರ ಪುತ್ರರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಉಚ್ಚಾಟಿಸಿದ ಕ್ರಮವನ್ನು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಸಮರ್ಥಿಸಿಕೊಂಡರು.

ಈ ಸುದ್ದಿಯನ್ನೂ ಓದಿ: 

ಬಿಜೆಪಿಗೆ ಎಂ. ಪಿ. ರೇಣುಕಾಚಾರ್ಯ (M. P. Renukacharya)ಕಪ್ಪುಚುಕ್ಕೆ, ತೇಜೋವಧೆ ಮುಂದುವರೆಸಿದರೆ ಸುಮ್ಮನಿರಲ್ಲ: ವೀರೇಶ್ ವೀರಾವೇಶದ ಎಚ್ಚರಿಕೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಗುರುಸಿದ್ದನಗೌಡರ ವಿರುದ್ದ ಶಿಸ್ತು ಕ್ರಮ  ತೆಗೆದು ಕೊಂಡಿದ್ದೇವೆ. ಜಗಳೂರಿನಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಗುರುಸಿದ್ದನಗೌಡ ಹಾಗೂ ಅವರ ಪುತ್ರರು ಬಿಜೆಪಿ ಪಕ್ಷವು ಸೋಲಲು ಪ್ರಮುಖ ಕಾರಣ ಎಂದು ಪರಾಜಿತ ಅಭ್ಯರ್ಥಿ ಎಸ್. ವಿ. ರಾಮಚಂದ್ರಪ್ಪರು ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ ದೂರು ಕೊಟ್ಟಿದ್ದರು. ಈ ದೂರು ಆಧರಿಸಿ ಆರೋಪಕ್ಕೆ ಸಂಬಂಧಿಸಿದಂತೆ ಸರಿಯಾದ ದಾಖಲೆಗಳು ಇದ್ದ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆದ್ರೆ, ನಿನ್ನೆ ರೇಣುಕಾಚಾರ್ಯ ಅವರು ಗುರುಸಿದ್ದನಗೌಡರ ಮನೆಗೆ ಭೇಟಿ ಮಾಡಿ ಮತ್ತೆ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ಕಿಡಿಕಾರಿದರು.

ಜಗಳೂರು ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರು ನನ್ನ ಸೋಲಿಗೆ ಕೆಲವರ ಪಿತೂರಿ ಕಾರಣ ಎಂಬ ಆರೋಪ ಮಾಡಿದ್ದರು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ನನ್ನದು ಏಕಪಕ್ಷೀಯ ನಿರ್ಧಾರ ಅಲ್ಲ. ಕೋರ್ ಕಮಿಟಿಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇವೆ. ಎಸ್. ಎ. ರವೀಂದ್ರನಾಥ್, ನಾನು ಸೇರಿದಂತೆ ಹದಿನೈದು ಜನರು ಇದ್ದೆವು. ಸೂಕ್ತ ದಾಖಲಾತಿ ಕೊಟ್ಟ ಕಾರಣ ಶಿಸ್ತು ಪಾಲನಾ ಸಮಿತಿ ಕ್ರಮ ಕೈಗೊಂಡಿದೆ ಎಂದರು.

ಯಡಿಯೂರಪ್ಪ ಸೂರ್ಯ ಇದ್ದ ಹಾಗೆ. ಅವರ ನೆರಳಲ್ಲೇ ಬದುಕಿರುವುದು. ಯಡಿಯೂರಪ್ಪ ಪಕ್ಷ ಕಟ್ಟಿದ್ದಾರೆ‌. ಯಾರ ಮೇಲೆ ಬಂದೂಕು ಇಟ್ಟು ಯಾರಿಗೆ ಹೊಡೆಯುತ್ತೀರಾ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ, ಕೆ. ಎಸ್. ಈಶ್ವರಪ್ಪರ ವಿರುದ್ಧ ಹಿಂದೆ ಸಹಾನುಭೂತಿ ಇರಲಿಲ್ಲ. ಈಗ ಸಹಾನುಭೂತಿ ಇದೆ. ಅವರ ವಿರುದ್ಧವೇ ರೇಣುಕಾಚಾರ್ಯ ಮಾತನಾಡಿದ್ದರು. ಇದನ್ನು ಆಗಲೇ ಮರೆತುಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.

ರೇಣುಕಾಚಾರ್ಯರು ಒಬ್ಬರು ಮಾತ್ರ ಪ್ರಾಮಾಣಿಕರು, ಉಳಿದವರು ಅಪ್ರಾಮಾಣಿಕರಾ. ಗುರುಸಿದ್ದನಗೌಡ ಹಾಗೂ ರವೀಂದ್ರನಾಥ್ ಅವರ ಬಗ್ಗೆ ಮಾತನಾಡುವ ರೇಣುಕಾಚಾರ್ಯ ವರ್ತನೆ ಸರಿಯಾಗಿಲ್ಲ. ಇದು ಎಲ್ಲರಲ್ಲಿಯೂ ಗೊಂದಲ ಮೂಡುವಂತೆ ಮಾಡುತ್ತಿದೆ. ನಾನು ಗುರುಸಿದ್ದನಗೌಡರ ಜೊತೆ ಮಾತನಾಡಿದ್ದೇನೆ. ಅವರು ಸರಿ ಎಂದಿದ್ದರು. ಆದ್ರೆ, ರೇಣುಕಾಚಾರ್ಯ ಮತ್ತೆ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಎಸ್. ಜಗದೀಶ್, ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಜಗಳೂರು ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಮಹೇಶ್ ಪಲ್ಲಾಗಟ್ಟಿ, ಶಾಂತರಾಜ್ ಪಾಟೀಲ್, ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment