Home ಕ್ರೈಂ ನ್ಯೂಸ್ ಪತಿಯಿಂದ ದೂರವಿದ್ದ ಮಹಿಳೆ ಹತ್ಯೆ ಶಂಕೆ: ಪ್ರಿಯಕರ ಶಬ್ಬೀರ್‌ ಫೋನ್‌ನೊಂದಿಗೆ ಪರಾರಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪತಿಯಿಂದ ದೂರವಿದ್ದ ಮಹಿಳೆ ಹತ್ಯೆ ಶಂಕೆ: ಪ್ರಿಯಕರ ಶಬ್ಬೀರ್‌ ಫೋನ್‌ನೊಂದಿಗೆ ಪರಾರಿ!

Share
ಮಹಿಳೆ
Share

ಬೆಂಗಳೂರುಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ 28 ವರ್ಷದ ಚೈತ್ರಾ ಎಂಬ ವಿವಾಹಿತ ಮಹಿಳೆ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಇನಮಿಂಚೇನಹಳ್ಳಿ ಮೂಲದ ಚೈತ್ರಾ, ಕಳೆದ 8 ವರ್ಷಗಳಿಂದ ಪತಿಯಿಂದ ದೂರವಾಗಿ ಚೊಕ್ಕಹಳ್ಳಿಯ ಬಾಡಿಗೆ ಮನೆಯಲ್ಲಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. ಈ ನಡುವೆ ಮಂಚನಬಲೆಯ ಶಬ್ಬೀರ್ ಎಂಬಾತನೊಂದಿಗೆ ಆಕೆ ಲಿವ್-ಇನ್ ಸಂಬಂಧದಲ್ಲಿದ್ದಳು ಎನ್ನಲಾಗಿದೆ.

ಇತ್ತೀಚೆಗೆ ಇಬ್ಬರ ನಡುವೆ ಆಗಾಗ್ಗೆ ತೀವ್ರ ಜಗಳ ನಡೆಯುತ್ತಿತ್ತು. ಘಟನೆಯ ದಿನ ಶಬ್ಬೀರ್ ಚೈತ್ರಾಳ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ ಎಂದು ಮೃತರ ಸಂಬಂಧಿಕರು ಗಂಭೀರ ಆರೋಪ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ದಾರಿಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾಳೆ ಎಂದು ಶಬ್ಬೀರ್ ನಾಟಕವಾಡುತ್ತಿದ್ದಾನೆ ಹಾಗೂ ಘಟನೆ ಬಳಿಕ ಆಕೆಯ ಮೊಬೈಲ್ ಫೋನ್ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ಶಬ್ಬೀರ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles