Home ದಾವಣಗೆರೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಓದು-ಬರಹ ಬಾರದ್ದಕ್ಕೆ ಕಾಂಗ್ರೆಸ್ ಶಾಸಕ ಗರಂ: 180 ಶಿಕ್ಷಕರಿಗೆ ನೋಟಿಸ್!
ದಾವಣಗೆರೆಬೆಂಗಳೂರು

7ನೇ ತರಗತಿ ವಿದ್ಯಾರ್ಥಿಗಳಿಗೆ ಓದು-ಬರಹ ಬಾರದ್ದಕ್ಕೆ ಕಾಂಗ್ರೆಸ್ ಶಾಸಕ ಗರಂ: 180 ಶಿಕ್ಷಕರಿಗೆ ನೋಟಿಸ್!

Share
ಶಿಕ್ಷಕ
Share

ಚಿಕ್ಕಬಳ್ಳಾಪುರ: ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಮತ್ತು ಮಕ್ಕಳ ಮೂಲಭೂತ ಕಲಿಕಾ ನ್ಯೂನತೆಯನ್ನು ಸರಿಪಡಿಸಲು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 7ನೇ ತರಗತಿಯ ಹಲವು ವಿದ್ಯಾರ್ಥಿಗಳಿಗೆ ಕನ್ನಡ ವರ್ಣಮಾಲೆ ಬರೆಯಲು ಹಾಗೂ ಗಣಿತದ ಸರಳ ಕೂಡಲ ಮತ್ತು ಕಳೆಯುವ ಲೆಕ್ಕಗಳನ್ನು ಮಾಡಲು ಬಾರದಿರುವುದನ್ನು ಕಂಡು ಶಾಸಕರು ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಶೈಕ್ಷಣಿಕ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರಾಥಮಿಕ ಹಂತದಲ್ಲಿ (1ರಿಂದ 6ನೇ ತರಗತಿವರೆಗೆ) ಪಾಠ ಬೋಧನೆ ಮಾಡಿದ 180ಕ್ಕೂ ಹೆಚ್ಚು ಶಿಕ್ಷಕರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ.

ಪರಿಶೀಲನೆ ಮತ್ತು ಮೌಲ್ಯಮಾಪನ:

ಶಾಸಕರ ಸೂಚನೆ ಮೇರೆಗೆ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿಗಳು, ಬಿಆರ್‌ಪಿ ಹಾಗೂ ಸಿಆರ್‌ಪಿ ತಂಡಗಳು ತಾಲೂಕಿನಾದ್ಯಂತ 7ನೇ ತರಗತಿ ಮಕ್ಕಳ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡಿ ವರದಿ ಸಿದ್ಧಪಡಿಸಿವೆ. ನಿಯಮಿತ ಅನುದಾನ ಮತ್ತು ವೇತನ ಪಡೆಯುತ್ತಿದ್ದರೂ ಕನಿಷ್ಠ ಅಕ್ಷರಜ್ಞಾನ ಕಲಿಸದಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಶಿಕ್ಷಕರಿಗೆ ಆದೇಶಿಸಲಾಗಿದೆ. ಸೂಕ್ತ ವಿವರಣೆ ನೀಡದಿದ್ದಲ್ಲಿ ಇಲಾಖಾ ಮಟ್ಟದ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.

ಶಾಸಕರ ನಡೆಗೆ ವ್ಯಾಪಕ ಬೆಂಬಲ:

ತಮ್ಮ ನಿರ್ಧಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರದೀಪ್ ಈಶ್ವರ್, “ಈ ಕ್ರಮವು ಸಮಾಜದ ಕೆಲ ವರ್ಗಗಳಿಗೆ ಅಸಮಾಧಾನ ತರಬಹುದು, ಆದರೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಇದು ಅನಿವಾರ್ಯ. ನನ್ನ ಈ ನಿರ್ಧಾರ ಮುಂಬರುವ ಚುನಾವಣೆಗಲ್ಲ, ಬದಲಿಗೆ ನಮ್ಮ ಮುಂದಿನ ತಲೆಮಾರಿನ ಉಜ್ವಲ ಭವಿಷ್ಯಕ್ಕಾಗಿ” ಎಂದು ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles