Home ಕ್ರೈಂ ನ್ಯೂಸ್ ಬ್ರೆಜಿಲ್‌ನಲ್ಲಿ ಆಘಾತಕಾರಿ ದುರ್ಘಟನೆ: ಹೋಟೆಲ್ 7ನೇ ಮಹಡಿಯ ಕಿಟಕಿ ಫ್ರೇಮ್ ಮುರಿದು ಬಿದ್ದು ಯುವತಿ ಸಾವು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬ್ರೆಜಿಲ್‌ನಲ್ಲಿ ಆಘಾತಕಾರಿ ದುರ್ಘಟನೆ: ಹೋಟೆಲ್ 7ನೇ ಮಹಡಿಯ ಕಿಟಕಿ ಫ್ರೇಮ್ ಮುರಿದು ಬಿದ್ದು ಯುವತಿ ಸಾವು, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ

Share
ಬ್ರೆಜಿಲ್‌
Share

ಬ್ರೆಜಿಲ್: ಬ್ರೆಜಿಲ್‌ನ ಸಾವೊ ಲೂಯಿಸ್‌ನಲ್ಲಿರುವ ರಿಯೋ ಪೋಟಿ ಹೋಟೆಲ್‌ನಲ್ಲಿ ನಡೆದ ದಾರುಣ ಘಟನೆಯಲ್ಲಿ 26 ವರ್ಷದ ರೆನಾಟಾ ರೆಬೆಕಾ ನೆಗ್ರಾಒ ಸಾಲ್ಡಾನ್ಹಾ ಡೋಸ್ ಸ್ಯಾಂಟೋಸ್ ಎಂಬುವವರು 7ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಹೋಟೆಲ್ ಕಾರಿಡಾರ್‌ನ ಅಲ್ಯೂಮಿನಿಯಂ ಕಿಟಕಿ ಫ್ರೇಮ್‌ಗೆ ಆತುಕೊಂಡಾಗ ಹಠಾತ್ ಅದು ಮುರಿದು ಬಿದ್ದು ಈ ದುರ್ಘಟನೆ ಸಂಭವಿಸಿದೆ.

ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ಮೃತ ಯುವತಿ ಇಬ್ಬರು ಮಕ್ಕಳ ತಾಯಿಯಾಗಿದ್ದು, ಗೆಳೆಯನೊಂದಿಗೆ ಪೋಕರ್ ಆಟಕ್ಕಾಗಿ ಸಾವೊ ಲೂಯಿಸ್‌ಗೆ ಬಂದಿದ್ದರು. ಮಂಗಳವಾರ ನಸುಕಿನ ಜಾವ 1:30ರ ಸುಮಾರಿಗೆ ರೂಮ್ ಕೀಗಾಗಿ ಹುಡುಕಾಡುವಾಗ ಈ ದುರಂತ ಸಂಭವಿಸಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿದೆ.

ಕಿಟಕಿ ಫ್ರೇಮ್ ಮುರಿದು ಬಿದ್ದು ದುರಂತ: ಹೋಟೆಲ್ ಕಾರಿಡಾರ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ರೆನಾಟಾ ಅವರು ಕಿಟಕಿ ಅಂಚಿನ ಮೇಲೆ ಕುಳಿತು ಅಲ್ಯೂಮಿನಿಯಂ ಫ್ರೇಮ್‌ಗೆ ಆತುಕೊಂಡಾಗ ಹಠಾತ್ ಅದು ಮುರಿದು ಬಿದ್ದು ಕೆಳಗೆ ಬಿದ್ದಿದ್ದಾರೆ.

ಆಕಸ್ಮಿಕ ಸಾವು ಎಂದು ದೃಢಪಡಿಸಿದ ಪೊಲೀಸರು: ಇದು ಆಕಸ್ಮಿಕ ಸಾವು ಎಂದು ತನಿಖಾಧಿಕಾರಿಗಳು ತಿಳಿಸಿದ್ದು, ಆಕೆಯ ಗೆಳೆಯನ ಮೇಲೂ ಯಾವುದೇ ಹಲ್ಲೆ ಅಥವಾ ತಳ್ಳಿರುವ ಆರೋಪವಿಲ್ಲ ಎಂದು ಸಿಸಿಟಿವಿ ದೃಶ್ಯಗಳಿಂದ ಸ್ಪಷ್ಟವಾಗಿದೆ.

ಹೋಟೆಲ್ ಆಡಳಿತ ಮಂಡಳಿಯಿಂದ ಸ್ಪಷ್ಟನೆ: ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ರಿಯೋ ಪೋಟಿ ಹೋಟೆಲ್ ಆಡಳಿತ ಮಂಡಳಿಯು, ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ.

ಯುವತಿಯ ಅಕಾಲಿಕ ಮರಣದಿಂದ ತಾಯಿ ಬೆಟ್ಟಿ ನೆಗ್ರಾಒ ಹಾಗೂ ಕುಟುಂಬಸ್ಥರು ತೀವ್ರ ಶೋಕಸಾಗರದಲ್ಲಿದ್ದು, ಮೃತದೇಹವನ್ನು ತವರು ಪರಾ ಪ್ರದೇಶಕ್ಕೆ ರವಾನಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles