Home ಕ್ರೈಂ ನ್ಯೂಸ್ ಟೆಲಿಗ್ರಾಂ ಜಾಬ್ ಆಫರ್ ನಂಬಿ ತೆರಳಿದ್ದ ಭಾರತೀಯ ಯುವಕನಿಗೆ ರಷ್ಯಾದಲ್ಲಿ ಯುದ್ಧಕ್ಕೆ ಸೇರಿಸಿಕೊಳ್ಳಲು ಚಿತ್ರಹಿಂಸೆ ಆರೋಪ: ಕೇಂದ್ರದ ನೆರವು ಕೋರಿದ ತಂಗಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಟೆಲಿಗ್ರಾಂ ಜಾಬ್ ಆಫರ್ ನಂಬಿ ತೆರಳಿದ್ದ ಭಾರತೀಯ ಯುವಕನಿಗೆ ರಷ್ಯಾದಲ್ಲಿ ಯುದ್ಧಕ್ಕೆ ಸೇರಿಸಿಕೊಳ್ಳಲು ಚಿತ್ರಹಿಂಸೆ ಆರೋಪ: ಕೇಂದ್ರದ ನೆರವು ಕೋರಿದ ತಂಗಿ!

Share
ಯುವಕ
Share

ಬಿಲಾಸ್‌ಪುರ (ಛತ್ತೀಸ್‌ಗಢ): ಉದ್ಯೋಗದ ಆಸೆಗೆ ಬಿದ್ದು ರಷ್ಯಾಗೆ ತೆರಳಿದ್ದ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಬಿಲ್ಹಾ ನಿವಾಸಿ, 21 ವರ್ಷದ ವಿನೀತ್ ಕುಮಾರ್ ದುಬೆ ಎಂಬ ಯುವಕ ರಷ್ಯಾದಲ್ಲಿ ಬಂಧನಕ್ಕೊಳಗಾಗಿದ್ದು, ಆತನನ್ನು ಯುದ್ಧಕ್ಕೆ ಸೇರಿಸಿಕೊಳ್ಳಲು ಚಿತ್ರಹಿಂಸೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಯುವಕನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಆತನ ಕುಟುಂಬವು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಕಚೇರಿಯ ನೆರವು ಕೋರಿದೆ.

ಟೆಲಿಗ್ರಾಂ ಗ್ರೂಪ್ ಒಂದರಲ್ಲಿ ಉದ್ಯೋಗದ ಆಫರ್ ಪಡೆದಿದ್ದ ವಿನೀತ್, ಈ ತಿಂಗಳ ಆರಂಭದಲ್ಲಿ ರಷ್ಯಾಗೆ ತೆರಳಿದ್ದ. ಅಕ್ಟೋಬರ್ 6 ರಂದು ಕೊನೆಯ ಬಾರಿಗೆ ಕುಟುಂಬದೊಂದಿಗೆ ಮಾತನಾಡಿದ್ದ ಆತ, ಅಕ್ಟೋಬರ್ 7 ರಿಂದ ನಾಪತ್ತೆಯಾಗಿದ್ದಾನೆ. ಮಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವಿನೀತ್ ಬಂಧನಕ್ಕೊಳಗಾಗಿರುವುದನ್ನು ದೃಢಪಡಿಸಿದೆಯಾದರೂ, ಆತನ ಕುರಿತು ಹೆಚ್ಚಿನ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ ಎಂದು ಆತನ ತಂಗಿ ಆಶಿ ದುಬೆ ತಿಳಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ಯುದ್ಧಕ್ಕೆ ಸೇರುವಂತೆ ಆತನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ರಷ್ಯಾದ ಸಂಖ್ಯೆಯಿಂದ ಕರೆಗಳು ಬಂದಿರುವುದಾಗಿ ಕುಟುಂಬಸ್ಥರು ದೂರಿದ್ದಾರೆ.

ಉದ್ಯೋಗದ ಆಸೆಗೆ ಬಿದ್ದ ಯುವಕ: ಟೆಲಿಗ್ರಾಂ ಮೂಲಕ ಉದ್ಯೋಗ ಆಫರ್ ಪಡೆದು ರಷ್ಯಾಗೆ ತೆರಳಿದ್ದ ಛತ್ತೀಸ್‌ಗಢದ 21 ವರ್ಷದ ವಿನೀತ್ ಕುಮಾರ್ ಅಕ್ಟೋಬರ್ 7 ರಿಂದ ನಾಪತ್ತೆಯಾಗಿದ್ದಾನೆ.

ಯುದ್ಧಕ್ಕೆ ಸೇರ್ಪಡೆಗೊಳಿಸಲು ನಿರಂತರ ಒತ್ತಡ: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಸೇರ್ಪಡೆಗೊಳಿಸಲು ಯುವಕನ ಮೇಲೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಕುಟುಂಬ ಆರೋಪಿಸಿದೆ.

ಸರ್ಕಾರಕ್ಕೆ ಮನವಿ: ಬಿಲಾಸ್‌ಪುರ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರು ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಮಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದು, ತಕ್ಷಣದ ನೆರವಿಗೆ ಮನವಿ ಮಾಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles