Home ಕ್ರೈಂ ನ್ಯೂಸ್ ಸಣ್ಣಪುಟ್ಟ ಜಗಳಕ್ಕೆ ಈಜು ಬಾರದ ಹೆಂಡತಿಯ ನದಿಗೆ ತಳ್ಳಿ ಹತ್ಯೆ ಮಾಡಿದ ಪತಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಣ್ಣಪುಟ್ಟ ಜಗಳಕ್ಕೆ ಈಜು ಬಾರದ ಹೆಂಡತಿಯ ನದಿಗೆ ತಳ್ಳಿ ಹತ್ಯೆ ಮಾಡಿದ ಪತಿ ಬಂಧನ!

Share
ಪತಿ
Share

ರಾಜನಂದಗಾಂವ್: ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೆ ಪತಿ-ಪತ್ನಿ ನಡುವೆ ನಿರಂತರವಾಗಿ ನಡೆಯುತ್ತಿದ್ದ ಜಗಳದ ಹಿನ್ನೆಲೆಯಲ್ಲಿ, ಕ್ರೂರ ಪತಿಯೊಬ್ಬ ತನ್ನ ಹೆಂಡತಿಯನ್ನು ಪ್ರವಾಸದ ನೆಪದಲ್ಲಿ ಮೋಹರಾ ನಡಿಗೆ ಕರೆದಕೊಂಡು ಹೋಗಿ ನದಿಗೆ ತಳ್ಳಿ ಬರ್ಬರವಾಗಿ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಈಜು ಬಾರದ ಹೆಂಡತಿಯು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಕೃತ್ಯವೆಸಗಿದ ಬಳಿಕ ತಾನೇ ಸ್ವತಃ ತನ್ನ ಭಾವನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾನೆ.

ಆರೋಪಿಯನ್ನು ಮಯೂರ್ ಮೇಶ್ರಾಮ್ ಅಲಿಯಾಸ್ ರಿಂಕು ಎಂದು ಗುರುತಿಸಲಾಗಿದೆ. ಅಕ್ಟೋಬರ್ 21ರ ಸಂಜೆ ಆರೋಪಿಯು ತನ್ನ ಪತ್ನಿ ನೀಲಮ್ ಅವರೊಂದಿಗೆ ಮೋಹರಾ ನದಿ ತೀರದ ಸಣ್ಣ ಸೇತುವೆಯ ಬಳಿ ತೆರಳಿದ್ದನು. ದಾರಿಯಲ್ಲೇ ದಂಪತಿಗಳ ನಡುವೆ ಮಾತಿಗೆ ಮಾತು ಬೆಳೆದು ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಆರೋಪಿಯು ಹೆಂಡತಿಗೆ ಈಜು ಬರುವುದಿಲ್ಲ ಎಂಬುದು ತಿಳಿದಿದ್ದರೂ ಉದ್ದೇಶಪೂರ್ವಕವಾಗಿ ಆಕೆಯನ್ನು ನದಿಯ ಆಳವಾದ ನೀರಿಗೆ ತಳ್ಳಿದ್ದಾನೆ. ಪರಿಣಾಮವಾಗಿ ನೀಲಮ್ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ. ಬಾಸಂತ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪರಾಧ ಕೃತ್ಯ ನಡೆದಿದೆ.

ಘಟನೆಯ ಹಿನ್ನೆಲೆ: ಸಣ್ಣಪುಟ್ಟ ವಿಚಾರಗಳ ಕ್ಷುಲ್ಲಕ ಜಗಳಗಳಿಂದ ಬೇಸತ್ತು ಹತ್ಯೆಗೆ ಸಂಚು ರೂಪಿಸಿದ್ದ ಪತಿ.

ಪ್ರವಾಸದ ನೆಪ: ಅಕ್ಟೋಬರ್ 21 ರಂದು ಮೋಜು-ಮಸ್ತಿಗೆ ಕರೆದೊಯ್ಯುವ ಮತ್ಸರದಿಂದ ನದಿ ತೀರಕ್ಕೆ ಕರೆದೊಯ್ದು ಕೃತ್ಯ.

ಕೃತ್ಯದ ಬಯಲು: ಕೊಲೆ ಮಾಡಿದ ಬಳಿಕ ಹೆಂಡತಿಯ ತಮ್ಮನಿಗೆ (ಭಾವನಿಗೆ) ಸ್ವತಃ ತಾನೇ ಫೋನ್ ಮಾಡಿ ಒಪ್ಪಿಕೊಂಡ ಆರೋಪಿ.

ಪೊಲೀಸ್ ಕ್ರಮ: ಅಕ್ಟೋಬರ್ 22 ರಂದೇ ಆರೋಪಿಯನ್ನು ಬಂಧಿಸಿ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಮೃತರ ಕುಟುಂಬ ಸದಸ್ಯರ ದೂರಿನ ಮೇರೆಗೆ ಬಾಸಂತ್‌ಪುರ ಠಾಣೆಯ ಪೊಲೀಸರು ತಕ್ಷಣವೇ ತನಿಖೆ ಕೈಗೊಂಡು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಆರೋಪಿಯನ್ನು ರಾಜನಂದಗಾಂವ್ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *