ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಇನ್ ಸ್ಟಾಗ್ರಾಂನಲ್ಲಿ ರಚನಾ ರನಾಡೆ ವಿಡಿಯೋ ನೋಡೋವಾಗ ಬಂತು ಷೇರು ಮಾರ್ಕೆಟ್ ಲಿಂಕ್: ಆಮೇಲೆ ಲಕ್ಷ ಲಕ್ಷ ರೂ. ಹೋಗಿದ್ದು ಹೇಗೆ…?

On: August 25, 2024 6:33 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:25-08-2024

ದಾವಣಗೆರೆ: ಇನ್ ಸ್ಟಾಗ್ರಾಂನಲ್ಲಿ ರಚನಾ ರನಾಡೆ ವಿಡಿಯೋ ನೋಡುತ್ತಿದ್ದ ಒಬ್ಬರಿಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಹಣ ಮಾಡಬಹುದು ಎಂಬ ಆಸೆ ಹುಟ್ಟಿಸಿ ಲಕ್ಷಾಂತರ ರೂಪಾಯಿ ಎಗರಿಸಿರುವ ಪ್ರಕರಣ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ದೂರಿನ ಸಾರಾಂಶವೇನು…?

ಕಳೆದ ಏಪ್ರಿಲ್ 28ರಂದು ಸಂಜೆ 6 ಗಂಟೆಗೆ Instagram ಖಾತೆಯನ್ನು ನೋಡುತ್ತಿರುವಾಗ Instagram ನಲ್ಲಿ ಒಂದು ಜಾಹಿರಾತು ಬಂದಿದ್ದು ಅದರಲ್ಲಿ ರಚನಾ ರನಾಡೆ ಇವರು ಮಾತನಾಡುತ್ತಿರುವ ವೀಡಿಯೋ ನೋಡಿ ಲಿಂಕ್ ಕ್ಲಿಕ್ ಮಾಡಿದಾಗ ನನ್ನ ಪೋನ್ ನಂಬರ್ Multiplus Clubn VIP-66 ಗ್ರೂಪಿಗೆ ಸೇರಿಕೊಂಡಿತ್ತು.

ನಂತರ ಷೇರು ವ್ಯವಹಾರದಲ್ಲಿ ಹಣ ತೊಡಗಿಸಿ ಹಣ ಗಳಿಸುವ ಮಾಹಿತಿಯನ್ನು ಕೊಟ್ಟು ನನಗೆ MTPS Application ಅನ್ನು google play store ಮುಖಾಂತರ Install ಮಾಡುವಂತೆ ಹೇಳಲಾಯಿತು. ಇನ್ ಸ್ಟಾಲ್ ಮಾಡಿದ ನಂತರ Multiplus Club A106 ರ ಗ್ರೂಪಿಗೆ ಆಡ್ ಮಾಡಿಕೊಂಡಿದ್ದು, ನಂತರ ಹಂತ ಹಂತವಾಗಿ ಒಟ್ಟು 11,32,000 ರೂ ಹಣವನ್ನು ತೊಡಗಿಸಿಕೊಂಡು 1,000 ರೂ ಲಾಭಾಂಶದ ಹಣವನ್ನು ಖಾತೆಗೆ ಜಮಾ ಮಾಡಿದ್ದಾರೆ.

11,31,000 ರೂಪಾಯಿ ಹೂಡಿಕೆ ಮಾಡಿದ ಹಣಕ್ಕೆ ನನ್ನ ಖಾತೆಯಲ್ಲಿ 55,78,384.74 ರೂ ಪೈಸೆ ತೋರಿಸಿದ್ದು ಅದನ್ನು ವಿತ್ ಡ್ರಾ ಮಾಡಲು ಹೋದಾಗ ಶೇಕಡಾ 20% ರಷ್ಟು ಪ್ರಾಫಿಟ್ ಟ್ಯಾಕ್ಸ್ ಅನ್ನು ಜಮಾ ಮಾಡುವಂತೆ ಹೇಳಲಾಯಿತು. ಯಾರೋ ಸೈಬರ್ ವಂಚಕರು ಆನ್ ಲೈನ್ ಮೂಲಕ ತನಗೆ ಮೋಸ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ದಾವಣಗೆರೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆದ್ದರಿಂದ ಸಾರ್ವಜನಿಕರು ಆನ್ ಲೈನ್ ಮೂಲಕ ಷೇರ್ ಮಾರ್ಕೆಟ್ ಗೆ ಹೂಡಿಕೆ ಮಾಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು, ವಂಚನೆ ಸುದ್ದಿ, ಸಂದೇಶಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಪೊಲೀಸ್
ಇಲಾಖೆಯು ಮನವಿ ಮಾಡಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment