ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮುದ್ದಾದ 6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ

On: May 16, 2024 5:44 PM
Follow Us:
---Advertisement---

ಮೈಸೂರು: ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಕನ್ನಡದ ಸೂಪರ್ ಹಿಟ್ ಚಿತ್ರ 777 ಚಾರ್ಲಿಯಲ್ಲಿ ಕಾಣಿಸಿಕೊಂಡಿದ್ದ ನಾಯಿ ಮುದ್ದಾದ ಮರಿಗಳಿಗೆ ಜನ್ಮನ ನೀಡಿದೆ. ‘777 ಚಾರ್ಲಿ’ ಚಿತ್ರಕ್ಕಾಗಿ ತರಬೇತಿ ನೀಡಿದ್ದ ಪ್ರಮೋದ್ ಅವರ ಮನೆಯಲ್ಲಿಯೇ ಚಾರ್ಲಿ ವಾಸವಾಗಿದ್ದು, ಅಲ್ಲಿಯೇ ಮರಿಗಳಿಗೆ ಜನ್ಮ ನೀಡಿದೆ. ಒಂದು ಹೆಣ್ಣು ಮರಿ ಸೇರಿ ಒಟ್ಟು ಆರು ಮರಿಗಳಿಗೆ ಜನ್ಮ ನೀಡಿದೆ.

ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿಗೆ ತೆರಳಿದ್ದ ರಕ್ಷಿತ್ ಶೆಟ್ಟಿ , ಇನ್‌ಸ್ಟಾಗ್ರಾಂ ಲೈವ್ ಬರುವ ಮೂಲಕ ಚಾರ್ಲಿಯ ತಾಯ್ತನದ ಗಳಿಗೆಯನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. ಚಾರ್ಲಿ ತಾಯಿಯಾಗಿರುವ ವಿಷಯ ಕೇಳಿ ಸಂತಸ ವ್ಯಕ್ತಪಡಿಸಿರುವ ರಕ್ಷಿತ್ ಶೆಟ್ಟಿ, ‘ಚಾರ್ಲಿ ತಾಯಿಯಾಗುತ್ತಾಳೋ ಇಲ್ಲವೊ ಎಂಬ ಅನುಮಾನವಿತ್ತು. ಅದು ಈಗ ದೂರವಾಗಿದೆ’ ಎಂದಿದ್ದಾರೆ.

‘ಚಾರ್ಲಿ ಮರಿ ಹಾಕಿರುವ ವಿಷಯ ತಿಳಿದು ಮೈಸೂರಿನಲ್ಲಿರುವ ಪ್ರಮೋದ್‌ ಅವರ ಮನೆಗೆ ಬಂದೆ. ಚಾರ್ಲಿ ಸಿನಿಮಾ ಮುಗಿದು ಎರಡು ವರ್ಷ ಕಳೆಯಿತು. ಚಾರ್ಲಿ ತಾಯಿ ಆಗುವುದನ್ನು ನೋಡುವುದಕ್ಕೆ ಇಡೀ ಚಿತ್ರತಂಡವೇ ಕಾಯುತಿತ್ತು. ಪ್ರಮೋದ್ ಅವರಿಗೆ ಕರೆ ಮಾಡಿ ಚಾರ್ಲಿ ತಾಯಿ ಆಗುತ್ತಾಳಾ ಎಂದು ಕೇಳುತ್ತಿದ್ದೆ. ವಯಸ್ಸಾದ್ದರಿಂದ ತಾಯಿಯಾಗುವ ಸಂಭವ ಕಡಿಮೆ ಎಂದು ಅವರು ಹೇಳುತ್ತಿದ್ದರು. ಕೊನೆಗೂ ತಾಯ್ತನದ ಸಂಭ್ರಮವನ್ನು ಚಾರ್ಲಿ ಅನುಭವಿಸುತ್ತಿದ್ದಾಳೆ. ಮೇ 9ರಂದು 6 ಮರಿಗಳಿಗೆ ಜನ್ಮ ನೀಡಿದ್ದಾಳೆ’ ಎಂದು ಹೇಳಿದ್ದಾರೆ.

ನಾನು ಎಲ್ಲಿಗೆ ಹೋದರೂ ಜನ ಚಾರ್ಲಿ ಸಿನಿಮಾದ ಬಗ್ಗೆ ಮಾತನಾಡುತ್ತಾರೆ. ಅಷ್ಟರ ಮಟ್ಟಿಗೆ ಆ ಚಿತ್ರ ಜನರನ್ನು ತಲುಪಿದೆ. ಮಕ್ಕಳಿಗಂತೂ ಇಷ್ಟವಾದ ಸಿನಿಮಾವಾಗಿದೆ’ ಎಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ.

Join WhatsApp

Join Now

Join Telegram

Join Now

Leave a Comment