Home ದಾವಣಗೆರೆ “ನಾನೇ ಸಿಎಂ ಅಂತೀನಿ, ಇದಕ್ಕಿಂತ ದೊಡ್ಡದೇನಿದೆ?” ಹುದ್ದೆ ತಪ್ಪಿದ್ದರೂ ಬೇಸರವಿಲ್ಲ- ಅನುದಾನ ಬೇಕು: ಶಾಸಕ ಶಿವಗಂಗಾ ಬಸವರಾಜ್ ವರಸೆ!
ದಾವಣಗೆರೆಬೆಂಗಳೂರು

“ನಾನೇ ಸಿಎಂ ಅಂತೀನಿ, ಇದಕ್ಕಿಂತ ದೊಡ್ಡದೇನಿದೆ?” ಹುದ್ದೆ ತಪ್ಪಿದ್ದರೂ ಬೇಸರವಿಲ್ಲ- ಅನುದಾನ ಬೇಕು: ಶಾಸಕ ಶಿವಗಂಗಾ ಬಸವರಾಜ್ ವರಸೆ!

Share
ಶಿವಗಂಗಾ ಬಸವರಾಜ್
Share

ದಾವಣಗೆರೆ: ನಾನೇ ಮುಖ್ಯಮಂತ್ರಿ ಅಂತೀನಲ್ಲ. ಇದಕ್ಕಿಂತ ದೊಡ್ಡದು ಯಾವುದಿದೆ?. ಇದು ಮೊದಲ ಬಾರಿಗೆ ಗೆದ್ದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬ ಬೇಡಿಕೆ ಇಟ್ಟಿದ್ದ ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ್ ಅವರು ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹೇಳಿದ ಮಾತು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ನಾನೇ ಅಂತೀನಲ್ಲ. ಇದಕ್ಕಿಂತ ದೊಡ್ಡದು ಯಾವುದಿದೆ? ನಾನು ರೈತ ಕೋಟಾದಡಿ ಸಚಿವ ಸ್ಥಾನ ಕೇಳಿದ್ದು ನಿಜ.ಜಾತಿವಾರು, ಜಿಲ್ಲಾವಾರು ಕೋಟಾ ಕೇಳಿರಲಿಲ್ಲ. ಜಾತಿವಾರು ಬಸವಂತಣ್ಣರಿಗೆ, ಜಿಲ್ಲಾವಾರು ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಎರಡೂ ಕೋಟಾದಲ್ಲಿ ಕೇಳಿರಲಿಲ್ಲ. ಆದರೂ ಹೈಕಮಾಂಡ್ ನೀಡಿದೆ ಎಂದು ಹೇಳಿದರು.

ನಾನು ಮೊದಲನೇ ಬಾರಿಗೆ ಶಾಸಕನಾಗಿ ಗೆದ್ದಿದ್ದೇನೆ. ಮುಂದಿನ ಬಾರಿಯೂ ಗೆಲ್ಲಬೇಕು. ನನಗೆ ಅನುದಾನ ಕೊಟ್ಟರೆ ಸಾಕು, ಹುದ್ದೆ ಬೇಡ. ಸಚಿವ ಸ್ಥಾನ ಸೇರಿದಂತೆ ಯಾವುದೇ ಹುದ್ದೆ ಕೊಟ್ಟರೂ ನಿಭಾಯಿಸಲು ಸಿದ್ಧನಿದ್ದೇನೆ. ಮಂತ್ರಿನೇ ನಿಭಾಯಿಸುತ್ತೇನೆಂದರೆ ರಾಜಕೀಯ ಕಾರ್ಯದರ್ಶಿ ಕೊಟ್ಟರೆ ಬೇಡ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದರು.

ಸಚಿವ ಸಂಪುಟ ವಿಸ್ತರಣೆ ಹಾಗೂ ಸ್ಥಾನಮಾನ ಹಂಚಿಕೆ ಕುರಿತು ಮಾತನಾಡಿದ ಅವರು, “ನಾನು ಸಚಿವ ಸ್ಥಾನ ಕೇಳಿದ್ದು ನಿಜ, ಆದರೆ ಅದು ಜಾತಿವಾರು ಅಥವಾ ಜಿಲ್ಲಾವಾರು ಕೋಟಾದಡಿಯಲ್ಲ, ಬದಲಿಗೆ ರೈತ ಕೋಟಾದಡಿ ಅವಕಾಶ ನೀಡುವಂತೆ ಕೋರಿದ್ದೆ. ಜಿಲ್ಲಾವಾರು ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಹಾಗೂ ಜಾತಿವಾರು ಬಸವಂತಪ್ಪ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಎರಡೂ ಕೋಟಾಗಳಲ್ಲಿ ನಾನು ಕೇಳಿರಲಿಲ್ಲವಾದರೂ, ಹೈಕಮಾಂಡ್ ತನ್ನದೇ ಆದ ಲೆಕ್ಕಾಚಾರದಲ್ಲಿ ನಿರ್ಧಾರ ತೆಗೆದುಕೊಂಡಿದೆ” ಎಂದರು.

ಆರ್. ಬಿ. ತಿಮ್ಮಾಪುರ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಕಾರಣಕ್ಕೆ ಮಾಯಕೊಂಡ ಶಾಸಕರಾದ ಬಸವಂತಪ್ಪರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರ ಕಡೆಯವರು, ಇವರ ಕಡೆಯವರು ಎನ್ನಲಾಗದು. ಬಸವಂತಣ್ಣ ಯಾರ ಕಡೆ ಇದ್ದರು, ಎಸ್. ಎಸ್. ಮಲ್ಲಿಕಾರ್ಜುನ್ ಯಾವ ಕಡೆ ಇದ್ದರು? ಎಲ್ಲರೂ ಕಾಂಗ್ರೆಸ್ಸಿಗರು ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles