
ಚನ್ನಗಿರಿ / ದಾವಣಗೆರೆ: ಮತ್ತೆ ಅಡಿಕೆ ಧಾರಣೆಯು ಕುಸಿತ ಕಂಡಿದೆ. ಅಂತ ಹೇಳಿಕೊಳ್ಳುವಷ್ಟು ಕಡಿಮೆಯಾಗಿಲ್ಲವಾದರೂ ಧಾರಣೆ ಕುಸಿತ ಕಾಣುತ್ತಿರುವುದು ಅಡಿಕೆ ಬೆಳೆಗಾರರಲ್ಲಿ ಆತಂಕ ತಂದಿದೆ.
ರಾಜ್ಯದ ಪ್ರಮುಖ ಕೃಷಿ ಮಾರುಕಟ್ಟೆಗಳಲ್ಲಿ ಒಂದಾಗಿರುವ ಚನ್ನಗಿರಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಬೆಲೆ ಪ್ರಕಟಗೊಂಡಿದೆ.
ರೈತರಿಗೆ ಅನುಕೂಲವಾಗುವಂತೆ ಪ್ರತಿದಿನದ ಮಾರುಕಟ್ಟೆ ಧಾರಣೆಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತಿದ್ದು, ಚನ್ನಗಿರಿ ಮಾರುಕಟ್ಟೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸು ಉತ್ತಮ ಬೆಲೆಯನ್ನು ಕಾಯ್ದುಕೊಂಡಿವೆ. ಇದರೊಂದಿಗೆ ದಾವಣಗೆರೆ ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಬೆಲೆಯೂ ಸಹ ನಿಗದಿಯಾಗಿದೆ.
ಚನ್ನಗಿರಿ ರಾಶಿ ಅಡಿಕೆ ಬೆಲೆ: ಕನಿಷ್ಠ ₹42,000, ಗರಿಷ್ಠ ₹47,991 ಹಾಗೂ ಸರಾಸರಿ ₹46,719.
ಚನ್ನಗಿರಿ 2ನೇ ಬೆಟ್ಟೆ ಅಡಿಕೆ: ₹33,119, ₹34,952 ಮತ್ತು ₹36,786 ರಂತೆ ವಿವಿಧ ಶ್ರೇಣಿಯ ಬೆಲೆಗಳು.
ಕಾಳುಮೆಣಸು ಬೆಲೆ (Black Pepper): ಚನ್ನಗಿರಿ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಕಾಳುಮೆಣಸಿನ ಬೆಲೆಯು ₹63,679 ರಂತೆ ದಾಖಲಾಗಿದೆ.
ದಾವಣಗೆರೆ ಹಸಿ ಅಡಿಕೆ ಮಾರುಕಟ್ಟೆ: ದಾವಣಗೆರೆ ಮಾರುಕಟ್ಟೆಯಲ್ಲಿ ಹಸಿ ಅಡಿಕೆ ಬೆಲೆಯು ಪ್ರತಿ ಕ್ವಿಂಟಲ್‌ಗೆ ₹5,800/- ರಂತೆ ಇದೆ.




