ದಾವಣಗೆರೆ: ಮೈಸೂರು ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ (ಕಾವಾ) 2026-27ನೇ ಶೈಕ್ಷಣಿಕ ಸಾಲಿನ ಪದವಿ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಪ್ರಥಮ ವರ್ಷದ ಬ್ಯಾಚುಲರ್ ಆಫ್ ವಿಶ್ಯುವಲ್ ಆರ್ಟ್ಸ್ (B.V.A.) ಪದವಿ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪ್ರಮುಖ ಮಾಹಿತಿ:
ಕೋರ್ಸ್: ಬಿ.ವಿ.ಎ. (Bachelor of Visual Arts)
ಅವಧಿ: 4 ವರ್ಷಗಳು (8 ಸೆಮಿಸ್ಟರ್ – ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ)
ಶೈಕ್ಷಣಿಕ ಅರ್ಹತೆ: ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 30, 2026.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ವಿದ್ಯಾರ್ಥಿಗಳು ಈ ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ:
UUCMS ಪೋರ್ಟಲ್: https://uucms.karnataka.gov.in
ಕಾವಾ ಅಧಿಕೃತ ವೆಬ್‌ಸೈಟ್: https://www.cavamysore.karnataka.gov.in
ಸಂಪರ್ಕಿಸಿ: ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ 0821-2438931 ಅನ್ನು ಸಂಪರ್ಕಿಸಬಹುದು ಎಂದು ಕಾವಾ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






Leave a comment