Home ದಾವಣಗೆರೆ ಗಲ್ಲಿಗೆ ಹಾಕಿದರೂ ಮುಂದೆಯೂ ವಂದೇ ಮಾತರಂ ಎರಡು ಪ್ಯಾರಾವಷ್ಟೇ ಹಾಡೋದು, ಮುಂದಿನ ಬಾರಿ ಬಿಜೆಪಿ 140 ಸ್ಥಾನ ಬರೋದು ಡೌಟ್: ಬಿ. ಕೆ. ಹರಿಪ್ರಸಾದ್!
ದಾವಣಗೆರೆಬೆಂಗಳೂರು

ಗಲ್ಲಿಗೆ ಹಾಕಿದರೂ ಮುಂದೆಯೂ ವಂದೇ ಮಾತರಂ ಎರಡು ಪ್ಯಾರಾವಷ್ಟೇ ಹಾಡೋದು, ಮುಂದಿನ ಬಾರಿ ಬಿಜೆಪಿ 140 ಸ್ಥಾನ ಬರೋದು ಡೌಟ್: ಬಿ. ಕೆ. ಹರಿಪ್ರಸಾದ್!

Share
ಬಿ. ಕೆ. ಹರಿಪ್ರಸಾದ್
Share

ಶಿವಮೊಗ್ಗ: ಕಳೆದ ಲೋಕಸಭೆ ಚುನಾವಣೆಯಲ್ಲಿ 400 ಸೀಟು ಗೆಲ್ಲುತ್ತೇವೆ ಎಂದವರು 240ಕ್ಕೆ ಕುಸಿದರು. ಮುಂದಿನ ಬಾರಿ 140ಕ್ಕೆ ಕುಸಿಯಲಿದ್ದಾರೆ. ಈಗ ಎಸ್ಐಆರ್ ಮೂಲಕ ಕರ್ನಾಟಕದಲ್ಲಿ 5.47 ಕೋಟಿ ಮತದಾರರಲ್ಲಿ 1.7 ಮತದಾರರನ್ನು ಕೈಬಿಟ್ಟಿದ್ದಾರೆ. 43 ಲಕ್ಷ ಜನರಿಗೆ ನೋಟೀಸ್ ನೀಡಿದ್ದು, ಹಿರಿಯರು ಯಾವ ರೀತಿ ಅಧಇಕಾರಿ ಮುಂದೆ ನಿಂತು ಹೆಸರು ಸೇರಿಸಿಕೊಳ್ಳುತ್ತಾರೆ. ನಮ್ಮ ಸ್ವತಂತ್ರ ಉಳಿಸಿಕೊಳ್ಳಲು ಒಟ್ಟಾಗಿ ಹೋರಾಟ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಕರೆ ನೀಡಿದ್ದಾರೆ.

ಶಿಕಾರಿಪುರದಲ್ಲಿ ನಡೆದ ಜನತಾ ಜೋಡೋ ಜಾಗೃತಿ ಯಾತ್ರೆ ಸಮಾವೇಶದಲ್ಲಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ನಮಗೆ ಮೀಸಲಾತಿ ನೀಡಿದ್ದಾರೆ. ಇದು ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಉದ್ಯೋಗ ವಿನಿಮಯ ಕಾರ್ಯಕ್ರಮವಲ್ಲ. 1937ರಲ್ಲಿ ವಂದೇ ಮಾತರಂ ಹಾಡಿನ ಮೊದಲ ಎರಡು ಪ್ಯಾರಾಗಳನ್ನು ನಾವು ಅಳವಡಿಸಿಕೊಂಡೆವು. 1950ರಲ್ಲಿ ರಾಜೇಂದ್ರ ಪ್ರಸಾದ್ ಅವರು ಇದನ್ನು ರಾಷ್ಟ್ರದ ಹಾಡು ಎಂದು ಕರೆದರು. ಕಳೆದ 80 ವರ್ಷಗಳಿಂದ ಯಾವುದೇ ರೀತಿಯ ವಿರೋಧ ಇರಲಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ವಂದೇ ಮಾತರಂ ವಿಚಾರ ಎತ್ತಿದ್ದಾರೆ. ಗಲ್ಲಿಗೆ ಹಾಕಿದರೂ ಸರಿ ನಾವು ಮೊದಲ ಎರಡು ಪ್ಯಾರಾ ಮಾತ್ರ ಹಾಡುತ್ತೇವೆ ಎಂದು ಹೇಳಿದ್ದೇನೆ. ಮುಂದೆಯೂ ಹೇಳುವೆ ಎಂದು ಹೇಳಿದರು.

ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯಾತೀತ ತತ್ವ ಸ್ವಾತಂತ್ರ್ಯ ಹೋರಾಟದ ಕೊಡುಗೆಗಳು. ಇಲ್ಲಿರುವವರು ನಾವು ಈ ಹೋರಾಟದಲ್ಲಿ ಪಾಲ್ಗೊಂಡಿಲ್ಲ. ನಮ್ಮ ಪೂರ್ವಜರು ನಮಗೆ ಕೊಟ್ಟಿರುವ ಈ ಅಂಶಗಳನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಿಸಿ ಹೋಗಬೇಕು. ಮೋದಿ ಅವರ ಸರ್ಕಾರ ಬಂದ ನಂತರ ಏನೆಲ್ಲಾ ಆಗಿದೆ. ದೇಶದಲ್ಲಿ ಮೊದಲ ಬಾರಿಗೆ ದೇಶದ 72% ಪದವೀಧರರಿಗೆ ಉದ್ಯೋಗವಿಲ್ಲ. ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ಸಾಲಮನ್ನಾ ಮಾಡಿದರು. ಕಾಫಿ ತೋಟಕ್ಕೆ 1200 ಕೋಟಿ ಪ್ಯಾಕೇಜ್ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷರು ಪಾದಯಾತ್ರೆ ಮಾಡುವಾಗ ಎಲ್ಲಾ ಪ್ರದೇಶ ಬರಗಾಲದಲ್ಲಿತ್ತು. ಆದರೆ ಇವರಿಗೆ ಪಂಚತಾರಾ ಹೊಟೇಲ್ ಊಟ ಹೋಗುತ್ತಿತ್ತು. ಬಳ್ಳಾರಿಯ ಗಣಿ ಕಳ್ಳರನ್ನು ಮಂತ್ರಿ ಮಾಡಿಕೊಂಡಿದ್ದರು. ಇವರ ಪಾದಯಾತ್ರೆ ದೇಶದ ಒಳತಿಗೆ ಅಲ್ಲ ಎಂದು ಹೇಳಿದರು.

ಮೋದಿ ಅವರ 114 ವರ್ಷಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 12 ನಿಮಿಷಗಳ ಕಾಲ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡಿಲ್ಲ. ಬಿಜೆಪಿ ನಾಯಕರು ಆ ಭಾಷಣ ಕೇಳಿ ಇಂಗು ತಿಂದ ಮಂಗನಂತೆ ಆಡುತ್ತಿರುತ್ತಾರೆ. ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನು ತಿಂಗಳುಗಟ್ಟಲೆ ಹೇಳಬಲ್ಲೆ. ಬಿಜೆಪಿಯವರ ಸಾಧನೆ ಏನು? ಹಿಂಸೆ ಸುಳ್ಳು ಅವರ ಮಂತ್ರ ಎಂದು ಆರೋಪಿಸಿದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles