Home ಬೆಂಗಳೂರು “ಕಾಂಗ್ರೆಸ್ ಕಚೇರಿ ದಾಳಿಯ ಅಖಾಡವಲ್ಲ”, ಬಿಜೆಪಿಯದ್ದು ‘ರೌಡಿ ಮೋರ್ಚಾ’: ಬಿ. ಕೆ. ಹರಿಪ್ರಸಾದ್ ಗರಂ!
ಬೆಂಗಳೂರುಕ್ರೈಂ ನ್ಯೂಸ್ನವದೆಹಲಿ

“ಕಾಂಗ್ರೆಸ್ ಕಚೇರಿ ದಾಳಿಯ ಅಖಾಡವಲ್ಲ”, ಬಿಜೆಪಿಯದ್ದು ‘ರೌಡಿ ಮೋರ್ಚಾ’: ಬಿ. ಕೆ. ಹರಿಪ್ರಸಾದ್ ಗರಂ!

Share
ಬಿ. ಕೆ. ಹರಿಪ್ರಸಾದ್
Share

ಬೆಂಗಳೂರು: ದೇಶದ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿ ಹೋರಾಟವನ್ನು ಹತ್ತಿಕ್ಕಿ, ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಿಸಿರುವ ಬಿಜೆಪಿ ಸರ್ಕಾರ, ವಿಷಯಾಂತರ ಮಾಡಲು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಚೇರಿ ಮುತ್ತಿಗೆಯ ನಕಲಿ ನಾಟಕವಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯಲ್ಲಿ ನ್ಯಾಯಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ಲಾಠಿ ಪ್ರಹಾರ ನಡೆಸಲಾಗಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಮೇಲೆಯೂ ಬಲಪ್ರಯೋಗ ನಡೆಸಿ, ರಕ್ತ ಬರುವಂತೆ ದಾಳಿ ಮಾಡಲಾದ ದೃಶ್ಯವನ್ನು ಇಡೀ ದೇಶವೇ ನೋಡಿದೆ ಎಂದು ಅವರು ಕಿಡಿಕಾರಿದ್ದಾರೆ.

ಆರ್. ಅಶೋಕ್ ಕಲ್ಪನಾ ಶಕ್ತಿಗೆ ನೋಬೆಲ್ ಕೊಡಬೇಕು!

ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸ್ಥಾನದ ಘನತೆ ಮರೆತು ಮಾತನಾಡುತಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ ‘ಮಚ್ಚು, ಲಾಂಗ್’ ಇದ್ದವು ಎಂದು ಆರೋಪಿಸುತ್ತಿರುವ ಅವರ ಕಲ್ಪನಾ ಶಕ್ತಿಗೆ ನೋಬೆಲ್ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದ ಹರಿಪ್ರಸಾದ್, ಬಿಜೆಪಿಯು ತನ್ನಲ್ಲಿರುವ ‘ರೌಡಿ ಮೋರ್ಚಾ’ ಸಂಸ್ಕೃತಿ ಮತ್ತು ಅಪರಾಧ ಹಿನ್ನೆಲೆಯ ನಾಯಕರ ಬಗ್ಗೆ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದಿದ್ದಾರೆ.

ಕಾಂಗ್ರೆಸ್ ಕಚೇರಿ ದಾಳಿಯ ಅಖಾಡವಲ್ಲ:

“ನಮ್ಮ ಕಚೇರಿ ಹಾಗೂ ಕಾರ್ಯಕರ್ತರ ಗೌರವವನ್ನು ಪ್ರಜಾಸತ್ತಾತ್ಮಕವಾಗಿ ರಕ್ಷಿಸಿಕೊಳ್ಳುವುದು ನಮ್ಮ ಹಕ್ಕು. ಕಾಂಗ್ರೆಸ್ ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಹಾಗೆಯೇ ಬಿಜೆಪಿಯ ಗೂಂಡಾಗಿರಿಗೆ ತಲೆಬಾಗುವುದೂ ಇಲ್ಲ” ಎಂದು ಬಿ.ಕೆ. ಹರಿಪ್ರಸಾದ್ ಸ್ಪಷ್ಟಪಡಿಸಿದ್ದಾರೆ

Share

Leave a comment

Leave a Reply

Your email address will not be published. Required fields are marked *

Related Articles