Home ದಾವಣಗೆರೆ ಬಿಜೆಪಿ ಐಟಿ ಮತ್ತು ಸೋಶಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಳವೀಯ ಔಟ್: ದೀಪಕ್ ಮ್ಹಾಸ್ಕೆ ಇನ್!
ದಾವಣಗೆರೆನವದೆಹಲಿಬೆಂಗಳೂರು

ಬಿಜೆಪಿ ಐಟಿ ಮತ್ತು ಸೋಶಿಯಲ್ ಮೀಡಿಯಾ ಮುಖ್ಯಸ್ಥ ಅಮಿತ್ ಮಾಳವೀಯ ಔಟ್: ದೀಪಕ್ ಮ್ಹಾಸ್ಕೆ ಇನ್!

Share
ಬಿಜೆಪಿ
Share

ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ತನ್ನ ಸಂಘಟನಾತ್ಮಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದ್ದು, ಸುದೀರ್ಘ 11 ವರ್ಷಗಳ ಕಾಲ ಐಟಿ ಸೆಲ್ ಮತ್ತು ಸೋಶಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರಾಗಿದ್ದ ಅಮಿತ್ ಮಾಳವೀಯ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸಿದೆ. ಅವರ ಜಾಗಕ್ಕೆ ಚತ್ತೀಸ್‌ಗಢದ ಹಿರಿಯ ನಾಯಕ ದೀಪಕ್ ಮ್ಹಾಸ್ಕೆ ಅವರನ್ನು ಪಕ್ಷದ ನೂತನ ಸೋಶಿಯಲ್ ಮೀಡಿಯಾ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ.

2015ರಲ್ಲಿ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಐಟಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಅಮಿತ್ ಮಾಳವೀಯ, ಡಿಜಿಟಲ್ ಸಂವಹನ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಹೊಸ ಹೊಣೆಗಾರಿಕೆ ವಹಿಸಿಕೊಂಡಿರುವ ದೀಪಕ್ ಮ್ಹಾಸ್ಕೆ ಅವರಿಗೆ ಬೆಂಬಲವಾಗಿ ಪ್ರೀತಿ ಗಾಂಧಿ, ಶಿವಾನಂದ ದ್ವಿವೇದಿ, ಅಲೋಕ್ ಭಟ್ ಮತ್ತು ಅರುಣ್ ಯಾದವ್ ಅವರನ್ನು ಸಹ-ಸಂಚಾಲಕರನ್ನಾಗಿ ನೇಮಿಸಲಾಗಿದೆ.

ತಮ್ಮ ನಿರ್ಗಮನದ ಕುರಿತು ಪ್ರತಿಕ್ರಿಯಿಸಿದ ಮಾಳವೀಯ, ನೂತನ ಪದಾಧಿಕಾರಿಗಳಿಗೆ ಶುಭಾಶಯ ಕೋರಿದ್ದಾರೆ. ಕಳೆದ ಒಂದು ದಶಕದಿಂದ ತಮ್ಮೊಂದಿಗೆ ನಿಂತು ಡಿಜಿಟಲ್ ವೇದಿಕೆಯಲ್ಲಿ ಬೆಂಬಲಿಸಿದ ಕಾರ್ಯಕರ್ತರಿಗೆ ಹಾಗೂ ಬೆಂಬಲಿಗರಿಗೆ ಧನ್ಯವಾದ ಸಲ್ಲಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles