SUDDIKSHANA KANNADA NEWS/ DAVANAGERE/ DATE:01-02-2025
ದಾವಣಗೆರೆ: ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸ್ವನಿಧಿ, 30ಸಾವಿರ ಮೌಲ್ಯದ ಕ್ರೆಡಿಟ್ ಕಾರ್ಡು ಸಿಗಲಿದೆ .ಗರ್ಭಿಣಿಯರಿಗೆ, ಹಾಲು ಉಣಿಸುವ ತಾಯಂದರಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಹೋಂ ಸ್ಟೇಗಳಿಗೆ ಮುದ್ರಾ ಸಾಲ ನೀಡಲು ಒತ್ತು ನೀಡಲಾಗಿದೆ. ಇದೊಂದು ಅಭಿವೃದ್ಧಿ, ಧನ, ಧಾನ್ಯ ಮತ್ತು ಉದ್ದಮಿಗೆ ಪೂರಕ ಬಜೆಟ್ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪ ವಾಲಿ ಹೇಳಿದ್ದಾರೆ.
ಎಸಿ.ಎಸ್ ಟಿ ಮಹಿಳಾ ಉದ್ದಿಮೆಗಳಿಗೆ 2ಕೋಟಿ ಸಾಲ ಒತ್ತು ನೀಡಲಾಗಿದೆ. ವಿಶೇಷವೆೇನೆಂದರೆ ನಮ್ಮ ಕರ್ನಾಟಕದ ಚನ್ನಪಟ್ಟಣ ಗೊಂಬೆಗಳ ಉತ್ಪಾದನೆಗೆ ಆದ್ಯೆತೆ ನೀಡಲಾಗಿದೆ. ಇದು ತುಂಬಾ ಖುಷಿಯ ಸಂಗತಿ . ಸ್ವದೇಶಿ ಉತ್ಪಾದನೆಗಳಿಗೆ ಮತ್ತಷ್ಟು ಉತ್ತೇಜನ ನೀಡಲಾಗಿದೆ. ಈ ಬಜೆಟ್ ಮಧ್ಯಮ ವರ್ಗದವರಿಗೆ ಕೊಡುಗೆ ಆಗಿದೆ. ಕ್ಯಾನ್ಸರ್ ಸಂಬಧಿ ಔಷಧೀಯ ಮೇಲೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಒಟ್ಟಾರೆ ಈ ಬಜೆಟ್ ಮಧ್ಯಮ ವರ್ಗದ ಜನಗಳಿಗೆ ಶಕ್ತಿ ತುಂಬಿದ ಈ ಪರಿಫೂರ್ಣ ಬಜೆಟ್ ಆಗಿದೆ. ಎಲ್ಲರ ಪರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.
ದೂರದೃಷ್ಟಿಯುಳ್ಳ ಬಜೆಟ್:
ಸುಮಾರು 12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದ್ದು,ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ಮಧ್ಯಮ ವರ್ಗಕ್ಕೆ ದೊರೆತ ಅತಿದೊಡ್ಡ ತೆರಿಗೆ ವಿನಾಯ್ತಿ ಎಂದರೆ ತಪ್ಪಾಗಲಾರದು ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್ ಹೇಳಿದ್ದಾರೆ.
ದೇಶದ ಜನರ ನಿರೀಕ್ಷೆಯಂತೆ ಈ ಬಜೆಟ್ ಅತ್ಯುತ್ತಮವಾಗಿದ್ದು, ರೈತರು, ಉದ್ದಿಮೆದಾರರು, ಮಧ್ಯಮ ವರ್ಗದವರು ಮಹಿಳೆಯರು ಸೇರಿದಂತೆ ಜನಸಾಮಾನ್ಯರ ಅಭಿವೃದ್ಧಿ ಮತ್ತು ಹಿತಾಸಕ್ತಿಯನ್ನು ಆಲೋಚಿಸಿ ಬಜೆಟ್ ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ ಸಂಪೂರ್ಣವಾಗಿ ಕೇಂದ್ರ ಬಜೆಟ್ ಒಂದು ಅಭಿವೃದ್ಧಿಪರ ಮತ್ತು ಎಲ್ಲಾ ವರ್ಗದ ಜೀವನಮಟ್ಟ ಸುಧಾರಣೆಯನ್ನು ಗಮನದಲ್ಲಿಟ್ಟು ನಿರ್ಮಲಾ ಸೀತಾರಾಮನ್ ಅವರು ದೂರ ದೃಷ್ಟಿಯುಳ್ಳ ಬಜೆಟ್ ಅನ್ನು ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.