Home ಬೆಂಗಳೂರು ಕೇಸರಿ ಮಾಸ್ಕ್ ಧರಿಸಿದ್ದ ಆರೋಪಿ ಕಾಲಿಗೆ ಬಿಹಾರ ಪೊಲೀಸರ ಗುಂಡೇಟು: ಫೇಸ್‌ಬುಕ್‌ನಲ್ಲಿ ರೌಡಿಸಂ, ಮದ್ಯ ಸೇವನೆ, ಹುಡುಗಿಯರ ಜೊತೆ ಚೆಲ್ಲಾಟವಾಡ್ತಿದ್ದ ಆರೋಪಿ ಈಗ ಪೊಲೀಸ್ ಆಸ್ಪತ್ರೆಯಲ್ಲಿ!
ಬೆಂಗಳೂರುಕ್ರೈಂ ನ್ಯೂಸ್

ಕೇಸರಿ ಮಾಸ್ಕ್ ಧರಿಸಿದ್ದ ಆರೋಪಿ ಕಾಲಿಗೆ ಬಿಹಾರ ಪೊಲೀಸರ ಗುಂಡೇಟು: ಫೇಸ್‌ಬುಕ್‌ನಲ್ಲಿ ರೌಡಿಸಂ, ಮದ್ಯ ಸೇವನೆ, ಹುಡುಗಿಯರ ಜೊತೆ ಚೆಲ್ಲಾಟವಾಡ್ತಿದ್ದ ಆರೋಪಿ ಈಗ ಪೊಲೀಸ್ ಆಸ್ಪತ್ರೆಯಲ್ಲಿ!

Share
ಬಿಹಾರ
Share

ಜಮುಯಿ/ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸ್ನೇಹಿತನ ಮೇಲೆ ನಡೆದ ಭೀಕರ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ನಂದನ್ ಯಾದವ್‌ಗೆ ಬಿಹಾರ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಬಂಧನದ ವೇಳೆ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ದಾಳಿ ನಡೆಸಲು ಮುಂದಾದಾಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು, ಗಾಯಗೊಂಡ ಆರೋಪಿಯನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಮಾಜಿಕ ಜಾಲತಾಣದ ಗತ್ತು ಮತ್ತು ಕೃತ್ಯದ ಹಿನ್ನೆಲೆ:

ಈ ದೌರ್ಜನ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬೆನ್ನಲ್ಲೇ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದಲ್ಲಿ ಕೇಸರಿ ಮಾಸ್ಕ್ ಧರಿಸಿ ಬಾಲಕಿಯನ್ನು ಎಳೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ ನಂದನ್ ಯಾದವ್, ತನ್ನ ಫೇಸ್‌ಬುಕ್ ಖಾತೆಯಲ್ಲಿ ಗನ್, ಮದ್ಯ ಹಾಗೂ ಆರ್ಕೆಸ್ಟ್ರಾ ನೃತ್ಯಗಾರರೊಂದಿಗೆ ಪೋಸ್ ನೀಡಿದ್ದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ.

ಆತನ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ಭೋಜ್‌ಪುರಿ ಹಾಡುಗಳು, ಬೆದರಿಕೆಯ ಧ್ವನಿವರ್ಧಕಗಳು ಮತ್ತು ಮದ್ಯದ ಬಾಟಲಿಗಳನ್ನು ಪ್ರದರ್ಶಿಸುವ ವೀಡಿಯೊಗಳಿದ್ದು, ಇವು ಆತನ ವಿಕೃತ ಮನಸ್ಥಿತಿ ಹಾಗೂ ನಕಲಿ ಗತ್ತನ್ನು ತೋರ್ಪಡಿಸುತ್ತಿದ್ದವು.

ಸಂಜೆ ವೇಳೆ ಕೋಚಿಂಗ್ ತರಗತಿಯಿಂದ ಹಿಂತಿರುಗುತ್ತಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ತಡೆದು, ಸುಮಾರು 15-20 ನಿಮಿಷಗಳ ಕಾಲ ಈ ಗ್ಯಾಂಗ್ ಕಿರುಕುಳ ನೀಡಿತ್ತು. ಈ ಸಂಬಂಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಜಮುಯಿ ಪೊಲೀಸರು, ನಂದನ್ ಯಾದವ್ ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles