ದಾವಣಗೆರೆ: ಇಲ್ಲಿನ ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯವು ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್ ಪ್ರಕಟಿಸಿರುವ 2026ನೇ ಸಾಲಿನ ರಾಜ್ಯ ಮಟ್ಟದ ರ‍್ಯಾಂಕಿಂಗ್ ಪಟ್ಟಿಯಲ್ಲಿ 17ನೇ ಸ್ಥಾನವನ್ನು ಪಡೆದುಕೊಂಡು ಸಾಧನೆ ಮಾಡಿದೆ.
ಅಂತರರಾಷ್ಟ್ರೀಯ ಸಂಸ್ಥೆಯು ದೇಶದ ಸುಮಾರು 2500 ಉನ್ನತ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡಂತೆ ಪ್ರತಿ ವರ್ಷ ರ‍್ಯಾಂಕಿಂಗ್ ಪಟ್ಟಿಯನ್ನು ಪ್ರಕಟಿಸುತ್ತದೆ. ಇದರಲ್ಲಿ 500 ವಿಶ್ವವಿದ್ಯಾಲಯಗಳು, 300 ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳು, 300 ಬಿಜಿನೆಸ್ ಕಾಲೇಜುಗಳು ಹಾಗೂ 300 ಬಿಬಿಎ ಮತ್ತು ಬಿಸಿಎ ಕಾಲೇಜುಗಳು ಸೇರಿವೆ.
ಶೈಕ್ಷಣಿಕ ಖ್ಯಾತಿ, ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ, ಸಂಶೋಧನೆ, ಉದ್ಯೋಗದಾತ ಕಂಪನಿಗಳ ಪ್ರಖ್ಯಾತಿ, ಸಂಸ್ಥೆಯ ಬೆಳವಣಿಗೆ, ಪ್ರತಿಸ್ಪರ್ಧಿ ಸಂಸ್ಥೆಗಳ ಗ್ರಹಿಕೆ, ಹಿರಿಯ ವಿದ್ಯಾರ್ಥಿಗಳ ಪ್ರತಿಕ್ರಿಯೆ, ಸಾರ್ವಜನಿಕರ ಗ್ರಹಿಕೆ ಹಾಗೂ ಸಂಸ್ಥೆಯ ಪ್ರಭಾವ ಮತ್ತು ಮೌಲ್ಯವರ್ಧನೆ ಮುಂತಾದ ಪ್ರಮುಖ ಒಂಬತ್ತು ಅಂಶಗಳನ್ನು ಪರಿಗಣಿಸಿ ಈ ಮೌಲ್ಯಮಾಪನ ಮಾಡಲಾಗುತ್ತದೆ. ಈ ಎಲ್ಲಾ ಮಾನದಂಡಗಳಲ್ಲಿ ಬಾಪೂಜಿ ಸಂಸ್ಥೆಯು ಸರಾಸರಿ 669.58 ಅಂಕಗಳನ್ನು ಗಳಿಸುವ ಮೂಲಕ ರಾಜ್ಯ ಮಟ್ಟದಲ್ಲಿ 17ನೇ ರ‍್ಯಾಂಕ್ ಅನ್ನು ತನ್ನದಾಗಿಸಿಕೊಂಡಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಾಂಶುಪಾಲರಾದ ಡಾ. ಹೆಚ್. ಬಿ. ಅರವಿಂದ್ ತಿಳಿಸಿದ್ದಾರೆ.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆ ಒಳಪಟ್ಟಿರುವ, ಎಐಸಿಟಿಇ ನವದೆಹಲಿ ಅನುಮೋದನೆ ಪಡೆದಿರುವ ಹಾಗೂ ನ್ಯಾಕ್ ‘ಎ’ ಗ್ರೇಡ್ ಮಾನ್ಯತೆ ಹೊಂದಿರುವ ಈ ಸ್ವಾಯತ್ತ ಸಂಸ್ಥೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಕಾಲೇಜಿನ ಈ ಮಹತ್ತರ ಸಾಧನೆಗೆ ನಿರ್ದೇಶಕರಾದ ಪ್ರೊ. ವೈ. ವೃಷಭೇಂದ್ರಪ್ಪ ಮತ್ತು ಆಡಳಿತ ಮಂಡಳಿಯವರು ಅತ್ಯಂತ ಹರ್ಷ ವ್ಯಕ್ತಪಡಿಸಿ, ಕಾಲೇಜಿನ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
- Bapuji Engineering College
- BIET 17th Rank
- BIET Davanagere
- DAVANAGERE NEWS
- IIRF Ranking 2026
- IIRF State Ranking
- Top Engineering Colleges in Karnataka
- VTU Autonomous Colleges
- ಐಐಆರ್‌ಎಫ್ ರ‍್ಯಾಂಕಿಂಗ್ 2026
- ಕರ್ನಾಟಕದ ಟಾಪ್ ಇಂಜಿನಿಯರಿಂಗ್ ಕಾಲೇಜುಗಳು
- ಡಾ ಹೆಚ್ ಬಿ ಅರವಿಂದ್
- ತಾಂತ್ರಿಕ ಶಿಕ್ಷಣ ಕರ್ನಾಟಕ
- ದಾವಣಗೆರೆ ಸುದ್ದಿ
- ಬಾಪೂಜಿ ಇಂಜಿನಿಯರಿಂಗ್ ಕಾಲೇಜು
- ಬಿಐಇಟಿ 17ನೇ ರ‍್ಯಾಂಕ್
- ಬಿಐಇಟಿ ದಾವಣಗೆರೆ





Leave a comment