Home ದಾವಣಗೆರೆ ಕಡಿಮೆಯಾದ ಮಳೆ, ಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಕುಸಿತ: ಇಂದಿನ ನೀರಿನ ಮಟ್ಟ, ಒಳಹರಿವು ಎಷ್ಟಿದೆ?
ದಾವಣಗೆರೆನವದೆಹಲಿಬೆಂಗಳೂರು

ಕಡಿಮೆಯಾದ ಮಳೆ, ಭದ್ರಾ ಜಲಾಶಯದ ಒಳಹರಿವಿನಲ್ಲಿ ಭಾರೀ ಕುಸಿತ: ಇಂದಿನ ನೀರಿನ ಮಟ್ಟ, ಒಳಹರಿವು ಎಷ್ಟಿದೆ?

Share
ಭದ್ರಾ ಜಲಾಶಯ
Share

ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿಯಾಗಿರುವ ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಮುಂದುವರಿದಿದ್ದು, ಆಗಸ್ಟ್ 17ರ ಬೆಳಗಿನ 6 ಗಂಟೆಯ ವರದಿಯಂತೆ ಜಲಾಶಯದ ಪ್ರಸ್ತುತ ನೀರಿನ ಮಟ್ಟ 173 ಅಡಿ 5 ಇಂಚು ತಲುಪಿದೆ.

ಜಲಾಶಯದ ಇಂದಿನ ಪ್ರಮುಖ ವಿವರಗಳು:

ಗರಿಷ್ಠ ಮಟ್ಟ (FRL): 186 ಅಡಿ (2158.0 MSL)

ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC

ಇಂದಿನ ನೀರಿನ ಮಟ್ಟ: 173′ 5″ (2145.41 MSL)

ಇಂದಿನ ನೀರು ಸಂಗ್ರಹ: 56.609 TMC

ಒಳಹರಿವು: 3,154 ಕ್ಯೂಸೆಕ್

ಹೊರಹರಿವು: 203 ಕ್ಯೂಸೆಕ್ (ರಿವರ್ ಸ್ಲೂಯಿಸ್: 100 ಕ್ಯೂಸೆಕ್, ಆವಿ ಭವನ: 103 ಕ್ಯೂಸೆಕ್, ಬಲದಂಡೆ/ಎಡದಂಡೆ ನಾಲೆ: 0 ಕ್ಯೂಸೆಕ್)

ಕಳೆದ ವರ್ಷ ಇದೇ ದಿನ: 185.1 ಅಡಿ 

ಕಳೆದ ವರ್ಷದ ಹೋಲಿಕೆ: ಕಳೆದ ವರ್ಷ (2025) ಇದೇ ದಿನದಂದು ಜಲಾಶಯದ ನೀರಿನ ಮಟ್ಟ 185 ಅಡಿ 1 ಇಂಚು ಇತ್ತು ಹಾಗೂ 70.384 TMC ನೀರು ಸಂಗ್ರಹವಾಗಿತ್ತು. ಅಂದು ಜಲಾಶಯಕ್ಕೆ 21,043 ಕ್ಯೂಸೆಕ್ ಒಳಹರಿವು ಹಾಗೂ 19,828 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

Share

Leave a comment

Leave a Reply

Your email address will not be published. Required fields are marked *

Related Articles