SUDDIKSHANA KANNADA NEWS/ DAVANAGERE/ DATE-27-06-2025
ದಾವಣಗೆರೆ: ಭದ್ರಾ ಡ್ಯಾಂ ಮಟ್ಟದಲ್ಲಿ ಭರ್ಜರಿ ಏರಿಕೆಯಾಗಿದೆ. ಕೇವಲ ಒಂದೇ ದಿನಕ್ಕೆ ಎರಡೂವರೆ ಅಡಿ ನೀರು ಹೆಚ್ಚು ಹರಿದು ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 39 ಅಡಿ ನೀರು ಹೆಚ್ಚು ಹೆಚ್ಚು ಸಂಗ್ರಹ ಆಗಿದೆ. ಜಲಾಶಯ ಭರ್ತಿಗೆ ಇನ್ನೂ ಕೇವಲ 26.1 ಅಡಿ ನೀರು ಮಾತ್ರ ಬೇಕು.
ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿಯೂ ಏರಿಕೆಯಾಗಿದೆ. ಜಲಾಶಯಕ್ಕೆ 26,646 ಕ್ಯೂಸೆಕ್ ಒಳಹರಿವಿದೆ. ಹೊರ ಹರಿವು 1287 ಕ್ಯೂಸೆಕ್
ಇದೆ. ಜಲಾಶಯದ ನೀರಿನ ಮಟ್ಟ 159.1 ಅಡಿಗೆ ಏರಿಕೆ ಆಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ 120.8 ಅಡಿ ಇತ್ತು.

READ ALSO THIS STORY: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ರೇಣುಕಾಚಾರ್ಯ ಕೋಟ್ಯಂತರ ರೂ. ಪಡೆದಿದ್ದಕ್ಕೆ ದಾಖಲೆ ಇದೆ: ಶಿವಗಂಗಾಬಸವರಾಜ್ ಸ್ಫೋಟಕ ಆರೋಪ!
ಮೂರ್ನಾಲ್ಕು ದಿನಗಳಿಂದ ವರುಣ ಅಬ್ಬರಿಸಿ ಬೊಬ್ಬಿರಿಯುತ್ತಿದ್ದು, ಭದ್ರಾ ಜಲಾನಯನ ಮತ್ತು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳಹರಿವು ಹೆಚ್ಚಿದೆ. ಗುರುವಾರ 22,407 ಕ್ಯೂಸೆಕ್ ಒಳಹರಿವಿದ್ದು, ಒಂದೇ ದಿನಕ್ಕೆ ಡ್ಯಾಂಗೆ ಎರಡು ಅಡಿ ನೀರು ಹರಿದು ಬಂದಿತ್ತು. ಆದ್ರೆ, ಇಂದು ಜಲಾಶಯದ ಒಳಹರಿವಿನಲ್ಲಿ ಹೆಚ್ಚಳವಾಗಿದ್ದು, ಆದಷ್ಟು ಬೇಗ ಜಲಾಶಯ ಭರ್ತಿಯಾಗುವ ವಿಶ್ವಾಸ ರೈತರು ಹಾಗೂ ಜನರದ್ದು. .
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ
Date:27_06_2025
ಇಂದಿನ ನೀರಿನ ಮಟ್ಟ: 159.1 ಅಡಿ
ಒಳ ಹರಿವು: 26,646ಕ್ಯೂಸೆಕ್
ಹೊರ ಹರಿವು: 1287 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 120.8 ಅಡಿ
ಕೆಪಾಸಿಟಿ: 15.879 ಟಿಎಂಸಿ
ಜಲಾಶಯದ ಗರಿಷ್ಠ ಮಟ್ಟ: 186 ಅಡಿ