ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

Bhadra Dam Water: ಭದ್ರಾ ಡ್ಯಾಂಗೆ ಭಾರೀ ಒಳಹರಿವು: ಜಲಾಶಯದ ನೀರಿನ ಮಟ್ಟ 155 ಅಡಿಗೆ ಏರಿಕೆ

On: June 25, 2025 10:29 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-25-06-2025

ದಾವಣಗೆರೆ: ಚಿಕ್ಕಮಗಳೂರು ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಭದ್ರಾ ಡ್ಯಾಂ (Bhadra Dam)ಗೆ ಭಾರೀ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಜಲಾಶಯಕ್ಕೆ 16,039 ಕ್ಯೂಸೆಕ್ ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 155 ಅಡಿಗೆ ಏರಿಕೆ ಆಗಿದೆ. ಜಲಾಶಯ ಭರ್ತಿಗೆ ಕೇವಲ 31 ಅಡಿ ನೀರು ಬರಬೇಕಷ್ಟೇ.

ಈ ವರ್ಷ ಭದ್ರಾ ಡ್ಯಾಂನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶದ ಜನರು ಮತ್ತು ರೈತರಿಗೆ ಖುಷಿ ತಂದಿದೆ. ಕಳೆದ ವರ್ಷದ ಇದೇ ದಿನ ಜಲಾಶಯದ ನೀರಿನ ಮಟ್ಟ 119.7 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 36 ಅಡಿ ಹೆಚ್ಚಳ ಸಂಗ್ರಹವಿದೆ.

ಈ ಸುದ್ದಿಯನ್ನೂ ಓದಿ: ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳಿ ಕಾಮಗಾರಿಗೆ ರೋಷಾವೇಷ: ಜೂ. 28ಕ್ಕೆ ದಾವಣಗೆರ ನಗರ ಬಂದ್

ಸೋಮವಾರ ಜಲಾಶಯಕ್ಕೆ 9994 ಕ್ಯೂಸೆಕ್ ಹರಿದು ಬರುತ್ತಿತ್ತು. ಮಂಗಳವಾರ ಜಲಾಶಯಕ್ಕೆ 10933 ಕ್ಯೂಸೆಕ್ ಹರಿದು ಬರುತ್ತಿತ್ತು. ಆದ್ರೆ, ಇಂದು ಜಲಾಶಯಕ್ಕೆ 16,039 ಕ್ಯೂಸೆಕ್ ಒಳಹರಿವಿದ್ದು, ಹೊರ ಹರಿವು 1282 ಕ್ಯೂ ಸೆಕ್ ಇದೆ. ಜಲಾಶಯಕ್ಕೆ ಒಂದೇ ದಿನ ಒಂದೂವರೆ ಅಡಿ ನೀರು ಹೆಚ್ಚು ಹರಿದು ಬಂದಿದೆ.

ಜಲಾಶಯದಿಂದ 1282 ಕ್ಯೂಸೆಕ್ ಹೊರ ಬಿಡಲಾಗುತ್ತಿದ್ದು, ಇತರೆ 1200 ಕ್ಯೂಸೆಕ್ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮತ್ತು ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಜೋರಾಗಿದ್ದು, ಕಳೆದೆರಡು ದಿನಗಳಿಂದ ಮಳೆ ಕುಂಠಿತಗೊಂಡಿದ್ದು, ಮತ್ತೆ ಅಬ್ಬರಿಸಲು ಶುರು ಮಾಡಿದ್ದಾನೆ. ಡ್ಯಾಂಗೆ ಬರುತ್ತಿರುವ ಒಳಹರಿವು ತುಸು ಹೆಚ್ಚಳವಾಗಿದೆ.

ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ಜನರ ಮತ್ತು ರೈತರ ಜೀವನಾಡಿ ಭದ್ರಾ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಭದ್ರಾ ಜಲಾಶಯಕ್ಕೆ ಬರುತ್ತಿದ್ದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ಮಳೆಯೂ ಸಾಧಾರಣವಾಗಿ ಸುರಿಯುತ್ತಿದೆ. ಬುಧವಾರ 8493 ಕ್ಯೂಸೆಕ್ ಇತ್ತು. ಆದ್ರೆ, ಗುರುವಾರ ಒಳಹರಿವು ತುಂಬಾನೇ ಹೆಚ್ಚಾಗಿತ್ತು. 19027 ಕ್ಯೂಸೆಕ್ ಒಳಹರಿವಿತ್ತು. ಶುಕ್ರವಾರ ಒಳಹರಿವು 14,932 ಕ್ಯೂಸೆಕ್ ಇದ್ದರೆ ಇಂದು ಮತ್ತಷ್ಟು ಕಡಿಮೆಯಾಗಿದೆ. ಶನಿವಾರ 9760 ಕ್ಯೂಸೆಕ್ ಇತ್ತು. ಭಾನುವಾರ ಒಳಹರಿವು 9877 ಕ್ಯೂಸೆಕ್ ಇತ್ತು. ಇಂದು ಸುಮಾರು ಆರು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದು ಬರುತ್ತಿದೆ.

ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ. ಕಳೆದ ವರ್ಷವರುಣ ಅಬ್ಬರಿಸಿ ಬೊಬ್ಬಿರಿದ ಕಾರಣ ಭದ್ರಾ ಜಲಾಶಯವು ಎರಡರಿಂದ ಮೂರು ಬಾರಿ ಭರ್ತಿಯಾಗಿತ್ತು. ಬೇಸಿಗೆ ಕಾಲ ಬಂದರೂ ಜಲಾಶಯದಲ್ಲಿ ನೀರು ಸಂಗ್ರಹವಾಗಿತ್ತು. ನಿಯಮಿತವಾಗಿ ಭದ್ರಾ ಎಡದಂಡೆ, ಬಲದಂಡೆ ನಾಲೆಗಳಲ್ಲಿ ನೀರು ಹರಿಸಿದ ಪರಿಣಾಮ ಜಲಾಶಯದ ನೀರಿನ ಸಂಗ್ರಹ ಕಡಿಮೆಯಾಗಿತ್ತು. ಮತ್ತೆ ಮಳೆ ಶುರುವಾಗಿದ್ದು, ಒಳಹರಿವು ಹೆಚ್ಚಾಗುತ್ತಿದೆ.

ಭದ್ರಾ ಜಲಾಶಯದ ನೀರಿನ ಮಟ್ಟ

Date:25_06_2025

ಇಂದಿನ ನೀರಿನ ಮಟ್ಟ: 155 ಅಡಿ

ಒಳ ಹರಿವು: 16,039 ಕ್ಯೂಸೆಕ್

ಹೊರ ಹರಿವು: 1282 ಕ್ಯೂಸೆಕ್

ಇತರೆ: 1200 ಕ್ಯೂಸೆಕ್

ಕಳೆದ ವರ್ಷ ಇದೇ ದಿನ ನೀರಿನ ಮಟ್ಟ: 119.7 ಅಡಿ

ಕೆಪಾಸಿಟಿ: 15.156 ಟಿಎಂಸಿ

ಜಲಾಶಯದ ಗರಿಷ್ಠ ಮಟ್ಟ: 186 ಅಡಿ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment