SUDDIKSHANA KANNADA NEWS/ DAVANAGERE/ DATE:30-08-2024
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗಿದ್ದು, ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.
ಜಲಾಶಯದ ನೀರಿನ ಮಟ್ಟ 182.3 ಅಡಿಗೆ ಏರಿಕೆಯಾಗಿದ್ದು, 12137 ಕ್ಯೂಸೆಕ್ ಒಳಹರಿವಿದೆ. ಇದರಿಂದಾಗಿ ಡ್ಯಾಂನ ನೀರಿನ ಮಟ್ಟ ಹೆಚ್ಚಳವಾಗಲಿದೆ. ಜಲಾಶಯದಿಂದ 3943 ಕ್ಯೂಸೆಕ್ ಹೊರ ಹರಿವಿದ್ದು, ಜಲಾಶಯಕ್ಕೆ 9 ಸಾವಿರ ಕ್ಯೂಸೆಕ್ ನೀರಿನಷ್ಟು ಸಂಗ್ರಹವಾಗುತ್ತಿದೆ.
ಜಲಾಶಯದ ಇಂದಿನ ನೀರಿನ ಮಟ್ಟ ಹೆಚ್ಚಳವಾಗಿದ್ದು, ರೈತರಲ್ಲಿ ಖುಷಿಗೆ ಕಾರಣವಾಗಿದೆ. ಜಲಾಶಯದಿಂದ 3943 ಕ್ಯೂಸೆಕ್ ಹೊರ ಹರಿವಿದ್ದು, ಒಳಹರಿವು 12137 ಕ್ಯೂಸೆಕ್ ಇದೆ. ಇದರಿಂದಾಗಿ ಜಲಾಶಯದ ನೀರಿನ ಮಟ್ಟ 183 ಅಡಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಭದ್ರಾ ಎಡದಂಡೆ ನಾಲೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆ ನಾಲೆಗೆ 2650 ಕ್ಯೂಸೆಕ್ ಹರಿಬಿಡಲಾಗುತ್ತಿದೆ.
ಭದ್ರಾ ಹಿನ್ನೀರು ಪ್ರದೇಶದಲ್ಲಿ ಉತ್ತಮ ಮಳೆ ಮುಂದುವರಿದಿದ್ದು, ಭದ್ರಾ ಅಚ್ಚುಕಟ್ಟುದಾರ ರೈತರು ಮತ್ತು ಜನರ ಸಂತಸಕ್ಕೆ ಕಾರಣವಾಗಿದೆ. ಕಳೆದ ವರ್ಷ ಜಲಾಶಯದ ನೀರಿನ ಮಟ್ಟ ಇದೇ ದಿನ 164.5 ಅಡಿ ನೀರು ಇತ್ತು. ಅಂದು ಒಳಹರಿವು 3222 ಕ್ಯೂಸೆಕ್ ಇತ್ತು.
ಕಳೆದ ವರ್ಷ ತೀವ್ರ ಬರಗಾಲ ಇತ್ತು, ಈ ವರ್ಷ ಸಮೃದ್ಧ ಮಳೆಯಾಗಿದ್ದು, ಜುಲೈ ತಿಂಗಳಿನಲ್ಲಿಯೇ ಜಲಾಶಯವು ಭರ್ತಿಯಾಗಿತ್ತು. ಆದ್ರೆ. ಮತ್ತೆ ಮಳೆ ಶುರುವಾಗಿದ್ದು, ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವುದು ರೈತರ ಸಂತಸ ಇಮ್ಮುಡಿಯಾಗಲು ಕಾರಣವಾಗಿದೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 186 ಅಡಿ ಆಗಿದ್ದು, ಜಲಾಶಯ ಭರ್ತಿಗೆ ಇನ್ನೂ ಕೇವಲ 3.7 ಅಡಿ ನೀರು ಮಾತ್ರ ಬರಬೇಕು. ಜಲಾಶಯಕ್ಕೆ 9 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಉಳಿಸಿಕೊಳ್ಳಲಾಗುತ್ತಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
ದಿನಾಂಕ: 30-08-2024
ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 182.3 ಅಡಿ
ಕೆಪಾಸಿಟಿ: 66.888 ಟಿಎಂಸಿ
ಒಳಹರಿವು: 12137 ಕ್ಯೂಸೆಕ್
ಹೊರ ಹರಿವು: 3943 ಕ್ಯೂಸೆಕ್
ಭದ್ರಾ ಎಡದಂಡೆ ನಾಲೆ: 2650 ಕ್ಯೂಸೆಕ್
ಭದ್ರಾ ಬಲದಂಡೆ ನಾಲೆ: 380 ಕ್ಯೂಸೆಕ್
ಕಳೆದ ವರ್ಷ ಇದೇ ದಿನ ಡ್ಯಾಂ ನೀರಿನ ಮಟ್ಟ: 164.5 ಅಡಿ
ಕಳೆದ ವರ್ಷ ಇದೇ ದಿನ ಒಳಹರಿವು: 3222 ಕ್ಯೂಸೆಕ್