Home ಕ್ರೈಂ ನ್ಯೂಸ್ ಬೆಂಗಳೂರಿನಲ್ಲಿ ಪುತ್ರನ ಕೊಂದು ಗಾಯಗೊಂಡ ಹೆಂಡತಿಯನ್ನು 3 ದಿನಗಳ ಕಾಲ ಕೊಠಡಿಯಲ್ಲೇ ಕೂಡಿಹಾಕಿದ ಕ್ರೂರಿ ಪತಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬೆಂಗಳೂರಿನಲ್ಲಿ ಪುತ್ರನ ಕೊಂದು ಗಾಯಗೊಂಡ ಹೆಂಡತಿಯನ್ನು 3 ದಿನಗಳ ಕಾಲ ಕೊಠಡಿಯಲ್ಲೇ ಕೂಡಿಹಾಕಿದ ಕ್ರೂರಿ ಪತಿ ಬಂಧನ!

Share
ಪತಿ
Share

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, ವ್ಯಕ್ತಿಯೊಬ್ಬ ಚಾಕು ಹಾಗೂ ಸುತ್ತಿಗೆಯಿಂದ ಹಲ್ಲೆ ನಡೆಸಿ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಪತ್ನಿಯ ಮೇಲೂ ಹತ್ಯೆ ಯತ್ನ ನಡೆಸಿ, ಗಾಯಗೊಂಡ ಆಕೆಯನ್ನು ಮೂರು ದಿನಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿದ್ದ ಪಾಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪದ್ಮನಾಭನಗರದ ಎಸ್‌ಆರ್‌ಆರ್ಕೆ ತುಳಸಿ ಅಪಾರ್ಟ್‌ಮೆಂಟ್‌ನಲ್ಲಿ ನವೆಂಬರ್ 16 ರಂದು ಈ ಘಟನೆ ನಡೆದಿದೆ. 16 ವರ್ಷದ ಸೊಹಮ್ ದಾಸ್ ಕೊಲೆಯಾದ ಬಾಲಕನಾಗಿದ್ದು, ಆತನ ಶವ ಬಾತ್‌ರೂಮ್‌ನಲ್ಲಿ ಪತ್ತೆಯಾಗಿದೆ. ಹಲ್ಲೆಗೊಳಗಾಗಿ ಜೀವಪಾಯದಿಂದ ಪಾರಾಗಿರುವ ಪತ್ನಿ ಸೀಮಾ ದಾಸ್ ನೀಡಿದ ದೂರಿನ ಮೇರೆಗೆ, ಆರೋಪಿ ಪತಿ ಸುದೀಪ್‌ನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ನವೆಂಬರ್ 19 ರಂದು ಅಪಾರ್ಟ್‌ಮೆಂಟ್ ಮಾಲೀಕರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಮಹಿಳೆಯನ್ನು ರಕ್ಷಿಸಿದ್ದಾರೆ.

ಮೂರು ದಿನಗಳ ಕಾಲ ಬಂಧನ: ನವೆಂಬರ್ 16 ರ ರಾತ್ರಿಯೇ ತಂದೆ ಸುದೀಪ್ ಮಗನನ್ನು ಕೊಂದು, ಪತ್ನಿ ಮೇಲೂ ಹಲ್ಲೆ ನಡೆಸಿ ಕೋಣೆಯಲ್ಲಿ ಕೂಡಿಹಾಕಿದ್ದ. ಮೂರು ದಿನಗಳ ಕಾಲ ಯಾವುದೇ ಆಹಾರ, ನೀರಿಲ್ಲದೆ ಆಕೆ ಒಂಟಿಯಾಗಿ ನರಳಾಡಬೇಕಾಯಿತು.

ಮಾಲೀಕರ ಜಾಗರೂಕತೆ ಹಾಗೂ ರಕ್ಷಣೆ: ಅಪಾರ್ಟ್‌ಮೆಂಟ್‌ನಲ್ಲಿ ಗಲಾಜೆ ಕೇಳಿಬಂದ ಹಿನ್ನೆಲೆಯಲ್ಲಿ ಮಾಲೀಕ ಬಿ. ಮಲ್ಲಯ್ಯ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಕೀಲಿ ಕೈಯವರ ಸಹಾಯದಿಂದ ಬಾಗಿಲು ತೆರೆದು ಮಹಿಳೆಯನ್ನು ರಕ್ಷಿಸಿದ್ದಾರೆ.

ಕಾನೂನು ಕ್ರಮ: ಆರೋಪಿ ಸುದೀಪ್ ವಿರುದ್ಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಸೆಕ್ಷನ್ 103(1) (ಕೊಲೆ) ಮತ್ತು 109(1) (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Share

Recent Posts

Recent Comments

No comments to show.
Related Articles