Home ದಾವಣಗೆರೆ ‘ಬೆಲೆ ಏರಿಕೆ ನಿಲ್ಲಲಿ, ದಿವಾಳಿ ಕಾಂಗ್ರೆಸ್‌ ಸರ್ಕಾರ ತೊಲಗಲಿ’: ತಲೆ ಮೇಲೆ ಹಾಲಿನ ಕ್ಯಾನ್ ಹೊತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಡಿಫರೆಂಟ್ ಪ್ರೊಟೆಸ್ಟ್!
ದಾವಣಗೆರೆನವದೆಹಲಿಬೆಂಗಳೂರು

‘ಬೆಲೆ ಏರಿಕೆ ನಿಲ್ಲಲಿ, ದಿವಾಳಿ ಕಾಂಗ್ರೆಸ್‌ ಸರ್ಕಾರ ತೊಲಗಲಿ’: ತಲೆ ಮೇಲೆ ಹಾಲಿನ ಕ್ಯಾನ್ ಹೊತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಡಿಫರೆಂಟ್ ಪ್ರೊಟೆಸ್ಟ್!

Share
ಶೋಭಾ ಕರಂದ್ಲಾಜೆ
Share

ಬೆಂಗಳೂರು: ಹಾಲು ಐಷಾರಾಮಿ ವಸ್ತುವಲ್ಲದೆ ಮಕ್ಕಳು ಮತ್ತು ಹಿರಿಯರ ದಿನನಿತ್ಯದ ಆಹಾರವಾಗಿದ್ದು, ಇದರ ಬೆಲೆಯನ್ನು ಏಕಾಏಕಿ ಶೇ.20ರಷ್ಟು ಹೆಚ್ಚಿಸಿರುವುದು ಸಂಪೂರ್ಣ ಜನವಿರೋಧಿ ನಿರ್ಧಾರವಾಗಿದೆ ಎಂದು ಆರೋಪಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಹಿಳಾ ಬಿಜೆಪಿ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಅವರು ಹಾಲಿನ ಕ್ಯಾನ್ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ನವೆಂಬರ್ 01ರಿಂದಲೇ ಕನ್ನಡಿಗರ ಮೇಲೆ ನಂದಿನಿ ಉತ್ಪನ್ನಗಳ ಬೆಲೆ ಏರಿಕೆಯ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಗ್ಯಾರೆಂಟಿ ಯೋಜನೆಗಳಿಂದ ದಿಕ್ಕೆಟ್ಟು ದುಸ್ಥಿಗೆ ತಲುಪಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಈಗ ಮತ್ತೊಮ್ಮೆ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೇವಲ ಮೂರುವರೆ ವರ್ಷಗಳಲ್ಲಿ ನಂದಿನಿ ಉತ್ಪನ್ನಗಳ ಬೆಲೆಯನ್ನು ನಾಲ್ಕು ಬಾರಿ ಶೇ.38.5ರಷ್ಟು ಹೆಚ್ಚಳ ಮಾಡಲಾಗಿದೆ. ರೈತರ ಹೆಸರಲ್ಲಿ ಬೆಲೆ ಏರಿಕೆ ಮಾಡಿರುವ ಸರ್ಕಾರವು ದೀರ್ಘಕಾಲದಿಂದ ರೈತರಿಗೆ ನೀಡಬೇಕಾದ ಪ್ರೋತ್ಸಾಹಧನಗಳನ್ನು ಬಾಕಿ ಉಳಿಸಿಕೊಂಡಿರುವುದು ಶೋಚನೀಯ ಸಂಗತಿ ಎಂದು ಮುಖಂಡರು ಕಿಡಿಕಾರಿದರು.

ಬೆಲೆ ಏರಿಕೆ ವಾಪಸ್‌ಗೆ ಒತ್ತಾಯ: ಕಾಂಗ್ರೆಸ್ ಸರ್ಕಾರ ತನ್ನ ಬೊಕ್ಕಸ ತುಂಬಿಸಿಕೊಳ್ಳಲು ರಾಜ್ಯದ ಬಡವರಿಗೆ ಹಾಗೂ ಅಪೌಷ್ಟಿಕ ಮಕ್ಕಳ ಹೊಟ್ಟೆ ಮೇಲೆ ಹೊಡೆಯುತ್ತಿರುವುದು ಖಂಡನೀಯವಾಗಿದ್ದು, ತಕ್ಷಣವೇ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ನಿರ್ಧಾರವನ್ನು ಸಂಪೂರ್ಣವಾಗಿ ಹಿಂಪಡೆಯಬೇಕು.

ಜನವಿರೋಧಿ ನೀತಿ: ದಿನನಿತ್ಯದ ಬಳಕೆಯ ಹಾಲಿನ ದರವನ್ನು ಶೇ.20ರಷ್ಟು ಏರಿಕೆ ಮಾಡಿರುವುದು ಮಧ್ಯಮ ವರ್ಗದವರ ಹಾಗೂ ಬಡವರ ಕುಟುಂಬಗಳಿಗೆ ತೀವ್ರ ಆರ್ಥಿಕ ಹೊರೆಯುಂಟು ಮಾಡಿದೆ.

ಪ್ರೋತ್ಸಾಹಧನ ಬಾಕಿ: ರೈತರ ಕಲ್ಯಾಣದ ಹೆಸರಿನಲ್ಲಿ ಬೆಲೆ ಹೆಚ್ಚಿಸಿರುವ ಸರ್ಕಾರವು ಇದುವರೆಗೆ ಪ್ರೋತ್ಸಾಹಧನವನ್ನು ನೀಡದೆ ವಂಚಿಸುತ್ತಿದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.

Share

Leave a comment

Leave a Reply

Your email address will not be published. Required fields are marked *