ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಈಗ ಮದುವೆ ಸೀಸನ್: ಕಲ್ಯಾಣ ಮಂಟಪಕ್ಕೆ ಹೋಗುವ ಮುನ್ನ ಎಚ್ಚರ.. ಎಚ್ಚರ..! ಸ್ವಲ್ಪ ಯಾಮಾರಿದ್ರೂ ಏನಾಗುತ್ತೆ ಗೊತ್ತಾ…?

On: November 11, 2024 10:49 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:11-11-2024

ದಾವಣಗೆರೆ: ಈಗ ಮದುವೆ ಸೀಸನ್. ಎಲ್ಲರೂ ಸಿಂಗಾರಗೊಂಡು ಆಭರಣ ತೊಟ್ಟು ಕಲ್ಯಾಣ ಮಂಟಪಕ್ಕೆ ಹೋಗುತ್ತಾರೆ. ಆದ್ರೆ, ಕೆಲವರು ಇದನ್ನೇ ಬಂಡವಾಳವನ್ನಾಗಿಸಿಕೊಂಡು, ಸಮಯ ನೋಡಿಕೊಂಡು ಚಿನ್ನಾಭರಣ, ನಗದು ಕಳ್ಳತನಕ್ಕಿಳಿದಿದ್ದಾರೆ.

ಹಾಗಾಗಿ, ಮದುವೆಗೆ ತುಂಬಾ ಚೆನ್ನಾಗಿ ಕಾಣುವಂತೆ ರೆಡಿ ಆಗಿ, ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಆಭರಣ ಧರಿಸಿ ಹೋಗುವವರು ಸ್ವಲ್ಪ ಯಾಮಾರಿದ್ರೂ ಸಮಸ್ಯೆ ಎದುರಿಸುವುದು ಖಚಿತ. ಕಲ್ಯಾಣ ಮಂಟಪಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಎಚ್ಚರದಿಂದ ಇರುವಂತೆ ಜನರಿಗೆ ಸಲಹೆಯನ್ನೂ ನೀಡಿದ್ದಾರೆ.

ಘಟನೆ ಹಿನ್ನೆಲೆ:

ಕಳೆದ ತಿಂಗಳು 26ರಂದು ದೂರುದಾರ ಕೌಶಿಕ್ ಬಿ.ಆರ್ ರವರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಅಕ್ಟೋಬರ್ 26 ಮತ್ತು 27ರಂದು ಮದುವೆ ಸಮಾರಂಭ ಇದ್ದ ಕಾರಣ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಶ್ರೀ ಬಕ್ಕೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದು, ಮದುವೆ ಸಮಾರಂಭದಲ್ಲಿರುವಾಗ 26ರ ರಾತ್ರಿ ವೇಳೆ ಕಲ್ಯಾಣ ಮಂಟಪದ ಮೊದಲು ಮಹಡಿ ರೂಮ್ ನಲ್ಲಿ ಇರಿಸಿದ್ದ ಬ್ಯಾಗಿನಲ್ಲಿದ್ದ ಸುಮಾರು 73 ಗ್ರಾಂ ತೂಕದ ಎರಡು ಎಳೆಯ ಮಾಂಗಲ್ಯ ಸರ, ಒಂದು ಎಳೆಯ ಚೈನ್, ಒಂದು ಜೊತೆ ಚಿಕ್ಕ ಜುಮುಕಿ ಒಡವೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಬಡಾವಣೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಮಾಹಿತಿ ನೀಡಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ್ ಜಿ. ಮಾರ್ಗದರ್ಶನದಲ್ಲಿ ಹಾಗೂ ದಾವಣಗೆರೆ ನಗರ ಉಪವಿಭಾಗದ ಪೊಲೀಸ್ ಅಧೀಕ್ಷಕ ಮಲ್ಲೇಶ್ ದೊಡ್ಡಮನಿ ಅವರ ನೇತೃತ್ವದಲ್ಲಿ ಆರೋಪಿತರನ್ನು ಪತ್ತೆ ಮಾಡಲು ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಎಂ. ಆರ್. ಚೌಬೆ ಅವರ ನೇತೃತ್ವದ ತಂಡವು ಪ್ರಕರಣದಲ್ಲಿನ ಆರೋಪಿತರ ಪತ್ತೆಗೆ ಕಾರ್ಯಚರಣೆಗೆ ಕೈಗೊಂಡರು.

ಪದೇ ಪದೇ ಬರೀ ಕಲ್ಯಾಣ ಮಂಟಪಗಳಲ್ಲೇ ಕಳ್ಳತನ ಮಾಡುತ್ತಿದ್ದ ಆರೋಪಿತರ ಬಗ್ಗೆ ಸುಳಿವು ದೊರೆತಿದ್ದು, ತಂಡವು ಕಾರ್ಯ ಪ್ರವೃತ್ತರಾಗಿ ಆರೋಪಿತರಾದ ದಾವಣಗೆರೆ ಶಾಂತಿನಗರ ರಿಂಗ್ ರಸ್ತೆಯ ಮಸಾಲೆ ವ್ಯಾಪಾರಿಗಳಾದ ಕಿರಣ್ ನಾಯ್ಕ್ (25) ಮತ್ತು ವಿನೋದ್ ನಾಯ್ಕ್ (23) ಬಂಧಿಸಿದೆ.

ಬಂಧಿತ ಆರೋಪಿಗಳಿಂದ ದಾಜು 5,32,000 ರೂ. ಮೌಲ್ಯದ ಸುಮಾರು 80 ಗ್ರಾಂ ತೂಕದ ಎರಡು ಎಳೆ ಬಂಗಾರದ ಮಾಂಗಲ್ಯ ಸರ, ಒಂದು ಎಳೆ ಬಂಗಾರದ ಚೈನ್, ಒಂದು ಜೊತೆ ಜುಮುಕಿ, ಕಳವು ಮಾಡಿದ ಬಂಗಾರವನ್ನು ಮಾರಾಟ, ಅಡಮಾನ ಮಾಡಿ ಹೊಸದಾಗಿ ಖರೀದಿ ಮಾಡಿದ ತಾಳಿ, 2 ಉಂಗುರ,3 ತಾಳಿ ಗುಂಡುಗಳು, ಸುಮಾರು 24 ಗ್ರಾಂ ತೂಕದ ಒಂದು ಜೊತೆ ಬೆಳ್ಳಿ ಕಾಲು ಕಡಗ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 1.25.000 ರೂಪಾಯಿ ನಗದು, ಕೃತ್ಯಕ್ಕೆ ಬಳಸಿದ ಸುಮಾರು 70,000 ರೂ. ಮೌಲ್ಯದ ಸ್ಕೂಟರ್, ಸುಮಾರು 56.000 ರೂ. ಮೌಲ್ಯದ 7 ಮೊಬೈಲ್ ಪೋನ್‌ಗಳು ಸೇರಿದಂತೆ ಒಟ್ಟು 7,83,000 ರೂ. ಮೌಲ್ಯದ ಬಂಗಾರ, ಬೆಳ್ಳಿ ಆಭರಣ, ನಗದು ವಶಪಡಿಸಿಕೊಳ್ಳಲಾಗಿದೆ.

ಆರೋಪಿತರ ಹಿನ್ನೆಲೆ:

ಆರೋಪಿತ ಕಿರಣ್ ನಾಯ್ಕ್ ದಾವಣಗೆರೆ ಜಿಲ್ಲೆಯ ವಿದ್ಯಾನಗರ ಠಾಣೆಯ 5 ಪ್ರಕರಣಗಳು, ಬಡಾವಣೆ ಠಾಣೆಯ 4, ಗಾಂಧಿನಗರ ಠಾಣೆಯ 1, ಬಸವನಗರ ಠಾಣೆಯ 1 ಪ್ರಕರಣ ಹಾಗೂ ಹಾಲಿ ಕೆಟಿಜೆ ನಗರ ಠಾಣೆಯ ಒಂದು ಪ್ರಕರಣ ಸೇರಿದಂತೆ ಒಟ್ಟು 12 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ಈ ಪ್ರಕರಣದ ಕಾರ್ಯಚರಣೆ ನಡೆಸಿ ಆರೋಪಿತರ ಬಂಧಿಸಿ, ಬಂಗಾರ, ಬೆಳ್ಳಿ, ನಗದು ವಶಪಡಿಸಿಕೊಂಡ ಪೊಲೀಸ್ ಇನ್ ಸ್ಪೆಕ್ಟರ್ ಎಂ.ಆರ್ ಚೌಬೆ, ಪಿಎಸ್‌ಐ ನಾಗರಾಜ್ ಬಿ.ಆರ್., ಎಎಸ್‌ಐ ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ಹರೀಶ್, ಬಸವರಾಜ, ಧ್ರುವ, ಬಸವರಾಜ.ಡಿ, ಗೀತಾ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ರಾಘವೇಂದ್ರ, ರಾಮಚಂದ್ರ ಜಾಧವ್, ಶಾಂತರಾಜ್ ಅವರುಗಳನ್ನೊಳಗೊಂಡ ತಂಡಕ್ಕೆ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment