ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ರೆಸಾರ್ಟಲ್ಲಿ ಸೇರಿದ್ದ ಎಲ್ಲರನ್ನೂ ಸಿರಿಗೆರೆ ಮಠದಿಂದ ಬಹಿಷ್ಕರಿಸಿ: ಇಟಗಿ ನೂರಾರು ಗ್ರಾಮಸ್ಥರಿಂದ ಶ್ರೀಗಳಿಗೆ ಒತ್ತಾಯ…!

On: August 12, 2024 11:48 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:12-08-2024

ದಾವಣಗೆರೆ/ ಚಿತ್ರದುರ್ಗ: ದಾವಣಗೆರೆಯ ಅಪೂರ್ವ ರೆಸಾರ್ಟ್ ನಲ್ಲಿ ಸಭೆ ನಡೆಸಿದ ಶ್ರೀ ಮಠದ ಭಿನ್ನಮತೀಯರೆಲ್ಲರನ್ನೂ ಮಠದಿಂದ ಬಹಿಷ್ಕರಿಸುವಂತೆ ಕೊಟ್ಟೂರಿನ ಇಟಗಿಯ ನೂರಾರು ಗ್ರಾಮಸ್ಥರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರಲ್ಲಿ ಭಿನ್ನವಿಸಿಕೊಂಡರು.

ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ತರಳಬಾಳು ಬೃಹನ್ಮಠಕ್ಕೆ ಭೇಟಿ ನೀಡಿದ ಕೊಟ್ಟೂರು, ತೂಲಹಳ್ಳಿ,, ಇಟಗಿಯ ನೂರಾರು ಗ್ರಾಮಸ್ಥರು ಶ್ರೀಗಳ ಜತೆ ನಿಲ್ಲುವ ನಿರ್ಣಯ ಅಂಗೀಕರಿಸಿದ ಪತ್ರವನ್ನು ಶ್ರೀಜಗದ್ಗುರುಗಳಿಗೆ ನೀಡಿದರು.

ಇತ್ತೀಚೆಗೆ ದಾವಣಗೆರೆಯಲ್ಲಿ ಶ್ರೀಮಠದ ಭಿನ್ನಮತೀಯರು ಮಾಡಿರುವ ಆರೋಪಗಳಿಗೆ ಬೇಸರ ವ್ಯಕ್ತಪಡಿಸಿದರು. ರೆರ್ಸಾಟ್‌ನಲ್ಲಿ ಸೇರಿದ್ದ ಎಲ್ಲರನ್ನೂ ಮಠದಿಂದ ಬಹಿಷ್ಕರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.  ಶ್ರೀ ತರಳಬಾಳು ಮಠದ ಪೀಠಾಪತಿಯಾಗಿ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರೇ ಮುಂದುವರಿಯಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಶ್ರೀಮರುಳಸಿದ್ಧರ ಜೀವನ ಮೂಡಿಬರಲಿ:

ಸಿರಿಗೆರೆಯಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಅಣ್ಣನ ಬಳಗದಿಂದ ಶ್ರೀ ಗುರುಶಾಂತ ರಾಜ ದೇಶಿಕೇಂದ್ರ ಮಹಾಸ್ವಾಮೀಜಿಯವರ ಶ್ರದ್ಧಾಂಜಲಿ ಸಮಾರಂಭ ನಡೆಯಿತು. ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ವೀರಗಾಸೆ ವೀರಾವೇಶದ ಹೋರಾಟದ ಕಲೆಯಾಗಿದೆ.ಮುಂದಿನ ದಿನಗಳಲ್ಲಿ ಮಠದಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರಸಂಗಗಳ ಶ್ರೀ ಮರುಳಸಿದ್ದರ ಜೀವನ ಪ್ರಸಂಗಗಳ ವೀರಗಾಸೆ ಪ್ರದರ್ಶನ ನೀಡಬೇಕು ಸಲಹೆ ನೀಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ 1946 ರಲ್ಲಿ ನಮ್ಮ ಗುರುಗಳಾದ ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಹಳ್ಳಿಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದ್ಧರಿಂದ ನಾಡಿನಾದ್ಯಂತ ಇಂದು 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳು ಮೂಲತಃ ತೂಲಹಳ್ಳಿಯವರು.ಶಿಕ್ಷಣ ಪ್ರೇಮಿಗಳಾಗಿದ್ದ ಶ್ರೀಗಳು 1938 ರಲ್ಲಿ ದಾವಣಗೆರೆಯಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿದರು. ಶ್ರೀಗಳ ತ್ಯಾಗ, ಬಲಿದಾನ ಸದಾ ಸ್ಮರಣೀಯ ಎಂದರು.

ಸಾಹಿತಿಗಳಾದ ಹೊಸೂರು ಪುಟ್ಟರಾಜು ಮಾತನಾಡಿ ವೀರಗಾಸೆ, ಭಜನೆ, ಸೋಬಾನೆ ವೆಲ್ಲವೂ ಜಾನಪದ ಸಂಸ್ಕೃತಿ ಬೇರುಗಳ ಜನಪದ ಸಾಹಿತ್ಯವು ಜನಜೀವನ ಹಾಗೂ ಕನ್ನಡದ ಬೇರು. ಇದು ಸಾವಿಲ್ಲದ ಸಾಹಿತ್ಯ, ವೀರಗಾಸೆಯ ವೀರತ್ವ, ಶೌರ್ಯವನ್ನು ಮುಖದಲ್ಲಿ ತುಂಬಿಸಿಕೊಂಡು ಸಾಂಪ್ರದಾಯಿಕ ಗಂಡು ಕಲೆಯಾಗಿದೆ. ವಿದ್ಯಾರ್ಥಿಗಳು ಗುರು ಹಿರಿಯರನ್ನು ಹಾಗೂ ಸಂಸ್ಕೃತಿಯನ್ನು ಉಳಿಸುವ ಆರಾಧಕರು ಆಗಬೇಕು ಎಂದು ತಿಳಿಸಿದರು.

ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಡಾ.ಹಾ.ಮ.ನಾಗರ್ಜುನ್, ಅಣ್ಣನ ಬಳಗದ ಅಧ್ಯಕ್ಷ ಬಿ. ಎಸ್. ಮರುಳಸಿದ್ಧಯ್ಯ ಮಾತನಾಡಿದರು.

ವೀರಗಾಸೆ ಬಹುಮಾನ ವಿಜೇತರು.

ಪುರುವಂತಿಕೆ ಸ್ಪರ್ಧೆಯಲ್ಲಿಹಾನಗಲ್‌’ ಅರಳೇಶ್ವರದ ಶ್ರೀ ಸಿದ್ದೇಶ್ವರ ಪುರುವಂತಿಕೆ ಸೇವಾ ಸಂಘ (ಪ್ರ), ಯಲವಗಿ ಶ್ರೀ ವೀರಭದ್ರೇಶ್ವರ ಸೇವಾ ಸಂಘ (ದ್ವಿತೀಯ) ಮುಳಗುಂದ ಶ್ರೀವೀರಭದ್ರೇಶ್ವರ ಪುರವಂತಿಕೆ (ತೃತೀಯ ಸ್ಥಾನ) ಪಡೆಯಿತು. ವೀರೆಗಾಸೆಯಲ್ಲಿ ತರಿಕೆರೆ ಜಾವಿಕೆರೆ ಶ್ರೀ ಚಾಮುಂಡೇಶ್ವರಿ ಮಹಿಳಾ ತಂಡ (ಪ್ರ), ಹಾಸನ ಶ್ರೀ ವೀರಭದ್ರೇಶ್ವರ ಕಲಾತಂಡ (ದ್ರಿ), ಹೊಳಲ್ಕೆರೆ ತಾಳಕಟ್ಟೆ ಶ್ರೀ ಬೀರಲಿಂಗೇಶ್ವರ ಮಹಿಳಾ ಕಲಾತಂಡ (ತೃ) ಪಡೆದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment