SUDDIKSHANA KANNADA NEWS/ DAVANAGERE/ DATE:23-10-2023
ಬೆಂಗಳೂರು(Bangalore): ಹುಲಿ ಉಗುರಿರುವ ಪೆಂಡೆಂಟ್ ಧರಿಸಿದ್ದ ಆರೋಪದ ಮೇಲೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧಿಸಲಾಗಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರೆಸ್ಟ್ ಮಾಡಲಾಗಿದೆ. ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದ ಹೊರಗಡೆ ಕರೆದುಕೊಂಡು ಬಂದು ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
READ ALSO THIS STORY:
ಜ್ಯೋತಿಷ್ಯ (Astrology) ಶಾಸ್ತ್ರದ ಪ್ರಕಾರ ಯಾರು ಅದೃಷ್ಟವಂತರು, ಕುಬೇರರು…? ಲಕ್ಷ್ಮಿ ಯೋಗ ಹೇಗೆ ಉಂಟಾಗುತ್ತದೆ…?
ಹುಲಿ ಉಗುರಿರುವ ಪೆಂಡೆಂಟ್ ಧರಿಸಿದ್ದ ಸಂತೋಷ್ ಇದಕ್ಕೆ ಅನುಮತಿ ಪಡೆದಿರಲಿಲ್ಲ. ಮಾತ್ರವಲ್ಲ, ಈ ಹುಲಿ ಉಗುರಿನ ಪೆಂಡೆಂಟ್ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಿಗ್ ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್ ಹಾಗೂ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಆದ್ರೆ, ಉತ್ತಮ ಸ್ಪರ್ಧೆ ನೀಡಿದ್ದ ಸಂತೋಷ್ ಬಿಗ್ ಬಾಸ್ ಮನೆಯಲ್ಲಿ ಸೇಫ್ ಆಗಿದ್ದರು. ಆದ್ರೆ, ಹುಲಿ ಉಗುರು ಧರಿಸಿದ್ದು ಈಗ ಕಂಟಕವಾಗಿ ವರ್ತೂರು ಸಂತೋಷ್ ಗೆ ಕಂಟಕವಾಗಿ ಪರಿಣಮಿಸಿದೆ.
ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಕೈಯಲ್ಲಿನ ಹುಲಿ ಉಂಗುರು ಕಂಡು ಬಂದಿತ್ತು. ಕೊರಳಲಿದ್ದ ಚಿನ್ನದ ಸರದಲ್ಲಿ ಹುಲಿ ಉಗುರು ಇತ್ತು. ಇದು ಎಲ್ಲರ ಕಣ್ಣು ಕುಕ್ಕುವಂತಿತ್ತು. ರೈತನಾಗಿ ಗುರುತಿಸಿಕೊಂಡಿದ್ದ ವರ್ತೂರು ಸಂತೋಷ್ ಜಾನುವಾರುಗಳ ಸಾಕಣಿಕೆ ಮಾಡುತ್ತಿದ್ದರು. ಕೃಷಿಯಲ್ಲಿಯೂ ಸೈ ಎನಿಸಿಕೊಂಡಿದ್ದರು. ಆದ್ರೆ, ಈಗ ಹುಲಿ ಉಂಗುರ ಧರಿಸಿ ತಾವೇ ತನ್ನ ಬಿಗ್ ಬಾಸ್ ಮನೆಯಿಂದ ಹೊರಬೀಳುವಂತಾಗಿದೆ.