ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜ.3ರೊಳಗೆ ರಾಜೀನಾಮೆ ಪಡೆಯಿರಿ, ಇಲ್ಲದಿದ್ದರೆ ಪ್ರಿಯಾಂಕಾ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕ್ತೇವೆ: ಬಿ. ವೈ. ವಿಜಯೇಂದ್ರ ಎಚ್ಚರಿಕೆ!

On: December 30, 2024 12:02 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:30-12-2024

ಬೆಂಗಳೂರು: ಬೀದರ್ ನ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಲು ಗಡುವು ನೀಡಿರುವ ಬಿಜೆಪಿಯು ಜನವರಿ 3ರೊಳಗೆ ಕ್ರಮ ಜರುಗಿಸದಿದ್ದರೆ ಕಲಬುರ್ಗಿಯ ಪ್ರಿಯಾಂಕಾ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದೆ.

ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಕೈವಾಡವಿರುವುದು ನಿಜ. ಕೂಡಲೇ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯರು ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಲೇಬೇಕು. ಇಲ್ಲದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ವಾರ್ನಿಂಗ್ ನೀಡಿದ್ದಾರೆ.

ಸಚಿವ ಪ್ರಿಯಾಂಕಾ ಖರ್ಗೆ ಅವರ ದುಷ್ಟ ಕೂಟದ ಸದಸ್ಯರ ಕಿರುಕುಳ, ಬೆದರಿಕೆಗಳಿಂದಲೇ ಸಚಿನ್ ಸಾವಿಗೆ ಶರಣಾಗಿರುವುದು. ಪೊಲೀಸರು ಸಹ ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ. ಸಚಿನ್ ಕುಟುಂಬದವರು ದೂರು ನೀಡಲು
ಹೋದರೆ ಸ್ವೀಕರಿಸಿಲ್ಲ. ಹಾಗಾಗಿ, ಅವರ ಮನೆಗೆ ಹೋದಾಗ ಪೊಲೀಸರು ಒಳಗಡೆ ಬರಲು ಬಿಡುತ್ತಿಲ್ಲ. ಪ್ರಿಯಾಂಕಾ ಖರ್ಗೆ ಸೂಚನೆಯಂತೆ ಮತ್ತು ಬೆಂಬಲಿಗರ ಅಣತಿಯಂತೆ ಪೊಲೀಸರು ಕಾರ್ಯನಿರ್ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕುಟುಂಬಸ್ಥರೇ ಆರೋಪ ಮಾಡಿದ್ದಾರೆ. ಹಾಗಾಗಿ, ಕೂಡಲೇ ಸಚಿವ ಪ್ರಿಯಾಂಕಾ ಖರ್ಗೆ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಬೆಂಬಲದಿಂದಲೇ ಪ್ರಿಯಾಂಕಾ ಖರ್ಗೆ ಈ ಮಟ್ಟಕ್ಕೆ ಹೋಗಿರುವುದು. ತಂದೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಯಾರೂ ಏನೂ ಮಾಡಲು ಆಗದು ಎಂಬ ದುರಹಂಕಾರದ ವರ್ತನೆ ತೋರುತ್ತಿರುವ ಪ್ರಿಯಾಂಕಾ ಖರ್ಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸ್ವಚ್ಛ ಹಾಗೂ ಪಾರದರ್ಶಕವಾಗಿದ್ದರೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಆರೋಪಮುಕ್ತರಾಗಿ ಬಂದರೆ ಸಚಿವರಾಗಲಿ. ಆದ್ರೆ, ಕಳಂಕಿತರಾಗಿ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ವಿಜಯೇಂದ್ರ ಗುಡುಗಿದ್ದಾರೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಯುವತಿ

ದುರ್ಗಾಪುರ ಯುವತಿ ಮೇಲೆ ಅ*ತ್ಯಾಚಾರಕ್ಕೆ ಸಾಥ್ ಕೊಟ್ಟಿದ್ದ ಸಹಪಾಠಿ ಸೆರೆ: ಬಂಧಿತರ ಸಂಖ್ಯೆ 6ಕ್ಕೇರಿಕೆ, ಸ್ಫೋಟಕ ಮಾಹಿತಿ ಬಯಲಿಗೆ!

ಚನ್ನಗಿರಿ

ಚನ್ನಗಿರಿ ಪಟ್ಟಣ ಸಮೀಪದ ಜೆ. ಹೆಚ್. ಪಟೇಲ್ ನಗರದಲ್ಲಿ ರಾತ್ರಿ ವೇಳೆ ಎಸ್ಪಿ ಭೇಟಿ: ಮನೆ ಗೋಡೆ ಮೇಲೆ ಉಮಾ ಪ್ರಶಾಂತ್ ಸ್ಟಿಕ್ಕರ್ ಅಂಟಿಸಿದ್ಯಾಕೆ?

ಧರ್ಮಸ್ಥಳ

ಕಾಂಗ್ರೆಸ್ ಜೊತೆ ಶಾಮೀಲಾಗಿಲ್ಲವಾದರೆ ಬಿಜೆಪಿ ಕಚೇರಿಗೆ ಬಂದು ಧರ್ಮಸ್ಥಳದ ಮಂಜುನಾಥ ಸ್ವಾಮಿ ಮೇಲೆ ಆಣೆ ಮಾಡಿ: ಕೃಷ್ಣಮೂರ್ತಿ ಪವಾರ್ ಪಂಥಾಹ್ವಾನ

ವ್ಯಾಪಾರಿ

ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ಆತ್ಮ ನಿರ್ಭರ್ ಯೋಜನೆಯಡಿ ವಿವಿಧ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ವಿದ್ಯಾರ್ಥಿ

ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ: ಕೃತಕ ಬುದ್ದಿಮತ್ತೆ ಭವಿಷ್ಯದ ಕಾರ್ಯಪಡೆ ಕಾರ್ಯಾಗಾರ

ತ್ಯಾಜ್ಯ

ನರಕ ಚರ್ತುದರ್ಶಿಯಂದು ಕಸ ಹೊರಗೆ ಎಸೆಯಬೇಡಿ, ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಣಾ ವಾಹನಗಳಿಗೆ ನೀಡಿ

Leave a Comment