ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ದಾವಣಗೆರೆ ಕೌಟುಂಬಿಕ ನ್ಯಾಯಾಲಯ ಆವರಣದಲ್ಲೇ ಪತ್ನಿಗೆ ಚಾಕುವಿನಿಂದ ಇರಿದ ಪತಿಯಿಂದ ಆತ್ಮಹತ್ಯೆ ಯತ್ನ!

On: September 20, 2025 5:03 PM
Follow Us:
ದಾವಣಗೆರೆ
---Advertisement---

SUDDIKSHANA KANNADA NEWS/ DAVANAGERE/DATE:20_09_2025

ದಾವಣಗೆರೆ: ನಗರದ ಪಿಜೆ ಬಡಾವಣೆಯ ಹೈಸ್ಕೂಲ್ ಮೈದಾನದ ಬಳಿಯ ಕೌಟುಂಬಿಕ ನ್ಯಾಯಾಲಯಕ್ಕೆ ಸಲಹೆ ಸಮಾಲೋಚನೆಗೆಂದು ಬಂದಿದ್ದ ಪತ್ನಿಗೆ ಚಾಕುವಿನಿಂದ ಇರಿದು ಪತಿ ಕೊಲ್ಲಲು ಯತ್ನಿಸಿದ್ದು, ಬಳಿಕ ಆತನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

READ ALSO THIS STORY: ಪಡಿತರ ಚೀಟಿದಾರರು, ಬಿ.ಪಿ.ಎಲ್, ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರು: ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಪದ್ಮ (32) ಚೂರಿ ಇರಿತಕ್ಕೆ ಒಳಗಾದ ಮಹಿಳೆ. ಪ್ರವೀಣ್ (36) ಚೂರಿ ಇರಿದ ಪತಿ. ನಗರದ ಜಾಲಿನಗರ 2 ನೇ ಕ್ರಾಸ್ ನಲ್ಲಿ ವಾಸವಿದ್ದ ಪ್ರವೀಣ್ ಮತ್ತು ಬೆಂಗಳೂರಿನ ಸ್ಟೇಷನರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪದ್ಮ ದಂಪತಿ ಕೌಟುಂಬಿಕ ಕಲಹ ಕಾರಣದಿಂದಾಗಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಬ್ಬರು ಶನಿವಾರದಂದು ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕೌಟುಂಬಿಕ ನ್ಯಾಯಾಲಯದ ಆವರಣದಲ್ಲಿನ ದಾವಣಗೆರೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಾಜ್ಯಗಳ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಕೌಟುಂಬಿಕ ಸಲಹೆ ಸಮಾಲೋಚನೆಗೆ ಪದ್ಮ ಬಂದು ಕುಳಿತಿದ್ದರು. ಈ ವೇಳೆ ಮೊದಲೇ ತನ್ನ ಬಳಿ ಚಾಕು ಇಟ್ಟುಕೊಂಡು ಬಂದಿದ್ದ ಪ್ರವೀಣನು ತನ್ನ ಪತ್ನಿ ಪದ್ಮಳ ಹೊಟ್ಟೆ ಹಾಗೂ ಹೊಟ್ಟೆ ಕೆಳಭಾಗದಲ್ಲಿ ಚಾಕುವಿನಂದ ಇರಿದ. ರಕ್ತಸ್ರಾವದಿಂದ ಆಕೆಯು ಅಲ್ಲಿಯೇ ಕುಸಿದು ಬಿದ್ದಳು. ನಂತರ ಪ್ರವೀಣನು ವಿಷ ಬೆರೆಸಿಕೊಂಡು ಬಂದಿದ್ದ ಬಾಟೆಲ್ ತೆಗೆದು ಕುಡಿದ. ಆತನೂ ಅಲ್ಲಿಯೇ ಅಸ್ವಸ್ಥನಾಗಿ ಬಿದ್ದ.

ಕೂಡಲೇ ಸ್ಥಳದಲ್ಲಿದ್ದವರು ಪದ್ಮಳನ್ನು ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಸಿಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ನಗರದ ಎಸ್ ಎಸ್ ಐ ಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು,
ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ವಸ್ಥನಾಗಿದ್ದ ಪ್ರವೀಣನನ್ನು ಜಿಲ್ಲಾ ಆಸ್ಪತ್ತೆಯಲ್ಲಿ ದಾಖಲಿಸಲಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment