Home ಅಕ್ರಮ ಸಂಬಂಧ ಶಂಕೆ: ಅಸ್ಸಾಂನಲ್ಲಿ ವ್ಯಕ್ತಿಯ ಭೀಕರ ಶಿರಚ್ಛೇದ, ನಾಲ್ವರ ಬಂಧನ!
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಕ್ರಮ ಸಂಬಂಧ ಶಂಕೆ: ಅಸ್ಸಾಂನಲ್ಲಿ ವ್ಯಕ್ತಿಯ ಭೀಕರ ಶಿರಚ್ಛೇದ, ನಾಲ್ವರ ಬಂಧನ!

Share
ಅಸ್ಸಾಂ
Share

ಅಸ್ಸಾಂ: ಅಸ್ಸಾಂನ ಜೋರ್ಹಾಟ್ ಜಿಲ್ಲೆಯ ಮರಿಯಾನಿ ವ್ಯಾಪ್ತಿಯಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ 31 ವರ್ಷದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ, ಶಿರಚ್ಛೇದ ಗೊಳಿಸಿ ನದಿಯ ದಂಡೆಯಲ್ಲಿ ಹೂತುಹಾಕಿರುವ ದೂಷಿತ ಘಟನೆ ಬೆಳಕಿಗೆ ಬಂದಿದೆ.

ಮೃತನನ್ನು ಮರಿಯಾನಿಯ ಗ್ರೀನ್‌ವ್ಯೂ ಟೀ ಎಸ್ಟೇಟ್ ನಿವಾಸಿ ಅನಿಲ್ ರಾಜ್‌ಗಢ್ ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 7 ರಿಂದ ನಾಪತ್ತೆಯಾಗಿದ್ದ ಈತನ ಮೃತದೇಹ ಭೋಗದೋಯ್ ನದಿಯ ದಂಡೆಯ ಬಳಿ ಗೋಣಿಚೀಲದಲ್ಲಿ ಪತ್ತೆಯಾಗಿದೆ.

ಘಟನೆಯ ವಿವರ:

ಪೋಲೀಸರ ಪ್ರಕಾರ, ನೆರೆಮನೆಯ ಮಹಿಳೆ ಅನಿಮಾ ಕರ್ಮಕಾರ್ ಮತ್ತು ಅನಿಲ್ ನಡುವೆ ನಿಕಟ ಸಂಪರ್ಕವಿತ್ತು. ಸೆಪ್ಟೆಂಬರ್ 7 ರಂದು ಅನಿಮಾ, ಅನಿಲ್‌ನನ್ನು ಚಹಾ ತೋಟದ ಪ್ರದೇಶಕ್ಕೆ ಕರೆಸಿಕೊಂಡಿದ್ದಳು. ಅಲ್ಲಿ ಅನಿಮಾ ಹಾಗೂ ಆಕೆಯ ಪತಿ ಸೇರಿದಂತೆ ನಾಲ್ವರು ಸೇರಿ ಬ್ಲೇಡ್‌ನಿಂದ ಗಂಟಲು ಕೊಯ್ದು, ಮಚ್ಚಿನಿಂದ ಶಿರಚ್ಛೇದ ಮಾಡಿ ಹತ್ಯೆ ಮಾಡಿದ್ದಾರೆ. ನಂತರ ಮೃತದೇಹವನ್ನು ಚೀಲದಲ್ಲಿ ಹಾಕಿ ನದಿಯ ಬಳಿ ಹೂತುಹಾಕಿದ್ದರು.

ಪ್ರಕರಣ ಸಂಬಂಧ ಅನಿಮಾ ಕರ್ಮಕಾರ್, ಆಕೆಯ ಪತಿ ಕಪಿಲ್ ಕರ್ಮಕಾರ್, ಮೈದುನ ಸಂಜಿತ್ ಕರ್ಮಕಾರ್ ಮತ್ತು ಸ್ನೇಹಿತ ಮಹೇಶ್ ರಾಜ್‌ಗಢ್ ಅವರನ್ನು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 3 ದಿನಗಳ ಪೋಲಿಸ್ ಕಸ್ಟಡಿಗೆ ನೀಡಲಾಗಿದೆ.

Share

Leave a comment

Leave a Reply

Your email address will not be published. Required fields are marked *