Home ಕ್ರೈಂ ನ್ಯೂಸ್ ‘ಅಸ್ಸಾಂ ಕಾಕ್ರೋಚ್‌ಗಳ ಹೋರಾಟ ಈಗಷ್ಟೇ ಶುರು’: ಸಿಎಂ ಹಿಮಂತ ಬಿಸ್ವ ಶರ್ಮಾಗೆ ಅಶುತೋಷ್ ರಂಕಾ ಬಹಿರಂಗ ಸವಾಲು!”
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

‘ಅಸ್ಸಾಂ ಕಾಕ್ರೋಚ್‌ಗಳ ಹೋರಾಟ ಈಗಷ್ಟೇ ಶುರು’: ಸಿಎಂ ಹಿಮಂತ ಬಿಸ್ವ ಶರ್ಮಾಗೆ ಅಶುತೋಷ್ ರಂಕಾ ಬಹಿರಂಗ ಸವಾಲು!”

Share
ಹಿಮಂತ ಬಿಸ್ವ
Share

ಗುವಾಹಾಟಿ: ಅಸ್ಸಾಂ ಪೋಲಿಸರಿಂದ ಅಕ್ರಮ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕ ಅಶುತೋಷ್ ರಂಕಾ ಹಾಗೂ 40ಕ್ಕೂ ಹೆಚ್ಚು ಕಾರ್ಯಕರ್ತರು ಬಿಡುಗಡೆಯಾದ ನಂತರ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಅಸ್ಸಾಂನ ಕಾಕ್ರೋಚ್‌ಗಳ ಹೋರಾಟ ಈಗಷ್ಟೇ ಪ್ರಾರಂಭವಾಗಿದೆ” ಎಂದು ರಂಕಾ ಎಕ್ಸ್ ಖಾತೆಯಲ್ಲಿ ಬರೆದುಕೊಂಡು ಬಹಿರಂಗ ಸವಾಲು ಹಾಕಿದ್ದಾರೆ.

ವಿರೋಧ ಪಕ್ಷ ಅಸ್ಸಾಂ ಜಾತೀಯ ಪರಿಷತ್ (AJP) ನಾಯಕಿ ಕುಂಕಿ ಚೌಧರಿ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಸಭೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಯಾವುದೇ ಕಾನೂನು ನೋಟಿಸ್ ಅಥವಾ ಸೂಕ್ತ ಕಾರಣ ನೀಡದೆ ರಂಕಾ ಮತ್ತು ಕಾರ್ಯಕರ್ತರನ್ನು 10ನೇ ಅಸ್ಸಾಂ ಪೊಲೀಸ್ ಬೆಟಾಲಿಯನ್ ಪ್ರಧಾನ ಕಚೇರಿಗೆ ಕರೆದೊಯ್ದಿದ್ದರು.

ಬಿಡುಗಡೆಯ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ರಂಕಾ, “ರಾಜ್ಯ ಸರ್ಕಾರದ ಭ್ರಷ್ಟಾಚಾರ, ಸರ್ಕಾರಿ ಶಾಲೆಗಳ ದುಸ್ಥಿತಿ, ಕಾಜಿರಂಗದಲ್ಲಿ ಸ್ಥಳೀಯರ ಹಕ್ಕುಗಳ ಕಸಿದುಕೊಳ್ಳುವಿಕೆ ಮತ್ತು ಕ್ಷೇತ್ರ ಪುನರ್ವಿಂಗಡನೆ ಅಕ್ರಮಗಳನ್ನು ದೇಶಕ್ಕೆ ತಿಳಿಸುತ್ತೇವೆ ಎಂಬ ಭಯದಿಂದ ಹಿಮಂತ ಬಿಸ್ವ ಶರ್ಮಾ ಈ ಕೃತ್ಯ ಎಸಗಿದ್ದಾರೆ. ಆದರೆ, ನಾವು ಯಾವುದಕ್ಕೂ ಹೆದರುವುದಿಲ್ಲ, ಈಶಾನ್ಯ ಭಾರತದಾದ್ಯಂತ ಸಿಜೆಪಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ” ಎಂದು ತಿಳಿಸಿದರು. ಎನ್‌ಸಿಪಿ (ಎಸ್‌ಪಿ) ವಕ್ತಾರ ಅನೀಶ್ ಗಾವಂಡೆ ಕೂಡ ಪೊಲೀಸ್ ಕ್ರಮವನ್ನು “ಜಂಗಲ್ ರಾಜ್” ಎಂದು ಖಂಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *