SUDDIKSHANA KANNADA NEWS/ DAVANAGERE/ DATE:01_08_2025
ದಾವಣಗೆರೆ: ಮನೆ ಬೀಗ ಮುರಿದು ಕಳ್ಳತನ ಮಾಡಿದ್ದ ರಾಜಸ್ತಾನ ಮೂಲದ ಮೂವರು ಆರೋಪಿಗಳನ್ನು ಬಂಧಿಸಿರುವ ಕೆಟಿಜೆ ನಗರ ಪೊಲೀಸರು 20 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
READ ALSO THIS STORY: ಹೆಚ್ಚಿನ ಬೆಲೆಗೆ ಯೂರಿಯಾ ಮಾರಿದರೆ ಮಾರಾಟಗಾರರ ಲೈಸೆನ್ಸ್ ರದ್ದು: ಪ್ರತಿ ರೈತರಿಗೆ ಎರಡು ಚೀಲವಷ್ಟೇ!
ರಾಜಸ್ತಾನದ ಬ್ಯಾವರಿ ಜಿಲ್ಲೆಯ ಬರ್ ಗ್ರಾಮದ ಚಾಲಕನಾಗಿದ್ದ ದಿನೇಶ್ (35), ಕೋಟಾನಗರ ಸಮೀಪದ ಸುಂದರ್ ನಗರದ ಹಮಾಲಿ ಕೆಲಸ ಮಾಡುತ್ತಿದ್ದ ದೀಪಕ್ ಕುಮಾರ್ (26), ಶಿರೋಯಿ ಜಿಲ್ಲೆಯ ಕಂಕರ್ ವಾಡಿ ಗ್ರಾಮದ ಚಾಲಕ ವೃತ್ತಿ ಮಾಡುತ್ತಿದ್ದ ರಮೇಶ್ ಕುಮಾರ್ (31) ಬಂಧಿತ ಆರೋಪಿಗಳು.
ಘಟನೆ ಹಿನ್ನೆಲೆ: ಕೆ. ಬಿ.ಬಡಾವಣೆಯ ಕಿರ್ವಾಡಿ ಲೇಔಟ್ ವಾಸಿ ವ್ಯಾಪಾರಿ ಹೆಚ್. ಎ. ಗಿರೀಶ್ ಅವರು, ಜುಲೈ 14ರಂದು ತಮ್ಮ ಮನೆಗೆ ಇಂಟರ್ ಲಾಕ್ ಹಾಕಿಕೊಂಡು ಬೆಂಗಳೂರಿಗೆ ಹೋಗಿದ್ದರು. ಅದೇ ದಿನ ರಾತ್ರಿ ಯಾರೋ ಕಳ್ಳರು ಮನೆಯ ಇಂಟರ್ ಲಾಕ್ ಗಳನ್ನು ಮುರಿದು ಮನೆಯೊಳಗೆ ಪ್ರವೇಶ ಮಾಡಿ ರೂಮ್ ನಲ್ಲಿದ್ದ ಗಾಡ್ರೇಜ್ ಬೀರು ಮತ್ತು ತಿಜೋರಿಲ್ಲಿದ್ದ ಸುಮಾರು 18 ಕೆ.ಜಿ.790 ಗ್ರಾಂ ಬೆಳ್ಳಿಯ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಸಂಬಂಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡವು ರಾಜಸ್ತಾನ
ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿತರು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಆಯುಧಗಳು, ಮನೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದ ಒಟ್ಟು 20,00,000 ರೂ ಬೆಲೆ ಬಾಳುವ 17 ಕೆ.ಜಿ.690 ಗ್ರಾಂ ಬೆಳ್ಳಿ ಸಾಮಾಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಕರಣದ ಎ1 ಆರೋಪಿ ದಿನೇಶ್ ಕುಮಾರ್ ವಿರುದ್ದ ಗುಜರಾತ್ ರಾಜ್ಯದ ವಲ್ ಸಾಡ್ ಜಿಲ್ಲೆಯ ವಲ್ ಸಾಡ್ ನಗರ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿ ಘನ ನ್ಯಾಯಾಲಯದಲ್ಲಿ 2024ರ ಅಕ್ಟೋಬರ್ 25ರಂದು
ಶಿಕ್ಷೆಗಳೊಪಟ್ಟಿದ್ದಾನೆ.
ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್, ಪಿ.ಎಸ್.ಐ ಲತಾ ಆರ್. ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಸಂಗಮೇಶ್, ಗೌರಮ್ಮ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಮಚಂದ್ರ ಜಾಧವ್, ಸಿದ್ದಾರ್ಥ್, ರಮೇಶ್ ಹಾಗೂ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ನ ಸಿಬ್ಬಂದಿಯವರಾದ ಮಾರುತಿ, ಸೋಮಪ್ಪ ಮತ್ತು ಪ್ರಶಾಂತ್ ಅವರನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.