SUDDIKSHANA KANNADA NEWS/ DAVANAGERE/ DATE:13-02-2025
ದಾವಣಗೆರೆ: ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಐವರು ಆರೋಪಿಗಳನ್ನು ಬಂಧಿಸಿರುವ ದಾವಣಗೆರೆ ಜಿಲ್ಲಾ ಪೊಲೀಸರು ಒಟ್ಟು 3.85 ಲಕ್ಷ ರೂಪಾಯಿ ಮೌಲ್ಯದ ಆರು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ-1:
2024ರ ಅಕ್ಟೋಬರ್ 24ರಂದು ಬಲವಂತ್ ಎಂ.ನಿಲುಗಲ್ ತನ್ನ ಕಪ್ಪು ಬಣ್ಣದ ರಾಯಲ್ ಎನ್ ಪೀಲ್ಡ್ ಬೈಕ್ ಅನ್ನು ಗಣೇಶ ಲೇ ಔಟ್ ನಲ್ಲಿರುವ ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದರು. ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ದೂರು ನೀಡಿ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ-2:
ಈ ವರ್ಷದ ಫೆಬ್ರವರಿ 2ರಂದು ನಾಗರಾಜ ತನ್ನ ಕಪ್ಪು ಬಣ್ಣದ ಫ್ಯಾಷನ್ ಪ್ರೋ ಬೈಕನ್ನು ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿರುವ ತಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದರು. ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರು ಹಾಗು ಮಾಲು ಪತ್ತೆಗಾಗಿ ತಂಡ ರಚಿಸಲಾಗಿತ್ತು. ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಹೆಚ್. ಎಸ್. ರವರ ನೇತೃತ್ವದಲ್ಲಿ ಪಿ.ಎಸ್.ಐ ಲತಾ.ಆರ್. ಹಾಗು ಸಿಬ್ಬಂದಿಗಳಾದ
ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ ಡಿ.ಬಿ. ಹನುಮಂತಪ್ಪ ಎಂ. ಮತ್ತು ಗೌರಮ್ಮ, ಗೀತಾ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ರಮೇಶ, ಶಿವಕುಮಾರ್ ಬಿ. ಕೆ.. ಹಾಗೂ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನ ಸಿಬ್ಬಂದಿಯವರಾದ ಮಾರುತಿ ಮತ್ತು ಸೋಮು ರವರನ್ನೊಳಗೊಂಡ ತಂಡವು ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಐವರನ್ನು ಬಂಧಿಸಿದೆ.
ಶಿವಮೊಗ್ಗದ ಮಿಳಘಟ್ಟದ ಮೊಹವ್ಮದ್ ಸೂಫೀಯಾನ್ (22), ಶಿವಮೊಗ್ಗದ ತುಂಗಾನಗರದ ಕೆಳಗಿನ ಒಂದನೇ ಕ್ರಾಸ್ ನ ಮೊಹವ್ಮದ್ ದಾದಾಪೀರ್ (20), ದಾವಣಗೆರೆಯ ಅಮರಪ್ಪನ ತೋಟದ ಅಲ್ತಾಪ್ (22), ಆಜಾದ್ ನಗರದ ಬಾಬ್ಜಾನ್ (30), ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೆ.ಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರಾಯಲ್ ಎನ್ ಪೀಲ್ಡ್ ಬೈಕ್, ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ರಾಯಲ್ ಎನ್ ಪೀಲ್ಡ್ ಬೈಕ್, ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಲ್ಸರ್, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಲ್ಸರ್ ಸೇರಿದಂತೆ ಬೈಕ್ ಒಟ್ಟು 4 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ಬೈಕ್ ಗಳ ಒಟ್ಟು ಮೌಲ್ಯ 2,80000 ರೂ.
ಆರೋಪಿತರ ಹಿನ್ನೆಲೆ:
ಹವ್ಮದ್ ಸೂಪೀಯಾನ್ ಈತನ ವಿರುದ್ದ ಆಜಾದ್ ನಗರ, ಕೆಟಿಜೆ ನಗರ, ಹಾಸನ ಜಿಲ್ಲೆಯ ಅರಸೀಕೆರೆ ಪೊಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳಲ್ಲಿನ ಆರೋಪಿ.
ಕೆ.ಟಿ.ಜೆ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಬೈಕ್ ಕಳ್ಳತನ ಪ್ರಕರಣದ ಆರೋಪಿ ಹೊನ್ನಾಳಿ ತಾಲೂಕಿನ ಸಿಂಗಟಗೆರೆ ಗ್ರಾಮದ ತರಗಾರ ಆರ್. ರವಿ (26)ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಕೆ.ಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಯಾಷನ್ ಪ್ರೊ ಬೈಕ್, ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಲ್ಸರ್ ಬೈಕ್ ಸೇರಿ 2 ಪ್ರಕರಣಗಳ ಒಟ್ಟು 1,05000 ರೂ ಮೌಲ್ಯದ 2 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.