SUDDIKSHANA KANNADA NEWS/ DAVANAGERE/ DATE:10-03-2025
ದಾವಣಗೆರೆ: ದಾವಣಗೆರೆ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು, ಸದಸ್ಯರುಗಳನ್ನು ಸರ್ಕಾರದ ಮಾನದಂಡದನ್ವಯ ನೇಮಕ ಮಾಡಲಾಗಿದ್ದು ಆಯ್ಕೆಯಾಗಿರುವ ಅಭ್ಯರ್ಥಿಗಳ ಕುರಿತು ಆಕ್ಷೇಪಣೆಗಳಿದ್ದಲ್ಲಿ
ಮಾರ್ಚ್ 13 ರೊಳಗೆ ಲಿಖಿತ ಅರ್ಜಿ ಸಲ್ಲಿಸಬೇಕು.
ಮಕ್ಕಳ ಕಲ್ಯಾಣ ಸಮಿತಿಗೆ ಹೊಸದಾಗಿ ಅಧ್ಯಕ್ಷರು, ಸದಸ್ಯರಾಗಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಯಾವುದೇ ರಾಜಕೀಯ, ಚಟುವಟಿಕೆಗಳಲ್ಲಿ ವ್ಯಕ್ತಿಗಳೊಂದಿಗೆ, ಪಕ್ಷಗಳೊಂದಿಗೆ ಸಂಪರ್ಕ ಹೊಂದಿರಬಾರದು.
ಆಯ್ಕೆಗೊಂಡಿರುವ ಅಭ್ಯರ್ಥಿಗಳ ವಿವರ: ಎ.ಸಿ.ರಾಘವೇಂದ್ರ ಬಿನ್ ಚಂದ್ರರೋಜಿರಾವ್ ಅಧ್ಯಕ್ಷರು, #778/10, ಹೊಂಡದ ರಸ್ತೆ, ಬೀರಲಿಂಗೇಶ್ವರ ದೇವಸ್ಥಾನದ ಹತ್ತಿರ, ದಾವಣಗೆರೆ-577001, ಮಂಜುಳಾ.ಎಂ ಕೋಂ ಮಹೇಶ್ವಿ ಸದಸ್ಯರು, #677/ಸಿಬಿಪಿ, 5 ನೇಕ್ರಾಸ್, ಭಗತ್‍ಸಿಂಗ್ ನಗರ, ದಾವಣಗೆರೆ-577006, ಕರಿಯಮ್ಮ.ಡಿ ಡಿ/ಓ ಲೇ.ದುರುಗಪ್ಪ, ಸದಸ್ಯರು, ಕರಿಯಮ್ಮ ದೇವಸ್ಥಾನದ ಹತ್ತಿರ, ಕೊಂಡಜ್ಜಿ ರಸ್ತೆ, ಯರಗುಂಟೆ ಗ್ರಾಮ, ದಾವಣಗೆರೆ, ನಾಗರಾಜು ನಾಯಕ್.ಎಂ #99/99 ಕೆಂಗಪ್ಪ, ಸೊಸೈಡಿ ಹತ್ತಿರ, ದುರ್ಗಾ ಬಂಕ್ ಲೇ ಔಟ್ ದಾವಣಗೆರೆ-577008, ದುರ್ಗಪ್ಪ.ಆರ್ ಬಿನ್ ರಂಗಪ್ಪ ಸದಸ್ಯರು, ನಾಗರಕಟ್ಟೆ(ವಿ) ಕಾಡಜ್ಜಿ ಪೋಸ್ಟ್, ದಾವಣಗೆರೆ-577002 ಈ ಅಭ್ಯರ್ಥಿಗಳ ಆಯ್ಕೆಯಾಗಿರುವ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 13 ರೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಬಾಲಭವನ, ಟ್ರೈನ್ ಪಾರ್ಕ್, ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ದಾವಣಗೆರೆ ಇಲ್ಲಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ತಿಳಿಸಿದ್ದಾರೆ.