SUDDIKSHANA KANNADA NEWS/ DAVANAGERE/DATE:13_08_2025
ಬೆಂಗಳೂರು: ಸ್ವಯಂ ಉದ್ಯೋಗ ನೇರಸಾಲ, ಜಮೀನು ಖರೀದಿ, ಕೊಳವೆ ಬಾವಿ ಕೊರೆಸುವುದೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ವಿವಿಧ ನಿಗಮಗಳಲ್ಲಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ನಿಗಮಗಳು ಯಾವುವು?
- ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ
- ಕರ್ನಾಟಕ ಆಧಿಜಾಂಬವ ನಿಗಮ
- ಕರ್ನಾಟಕ ಭೋವಿ ಆಭಿವೃದ್ದಿ ನಿಗಮ, ಕರ್ನಾಟಕ ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮ
- ಕರ್ನಾಟಕ ತಾಂಡ ಅಭಿವೃದ್ದಿ ನಿಗಮ ಯೋಜನೆ:
ಈ ಸುದ್ದಿಯನ್ನೂ ಓದಿ: ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ದಾಖಲೆಗಳು ಹಾಗೂ ಅರ್ಹತೆ ಏನಿರಬೇಕು?
ಪರಿಶಿಷ್ಟ ಜಾತಿಯ ಜನರ ಆರ್ಥಿಕ ಅಭಿವೃದ್ದಿಗಾಗಿ 2025-26 ನೇ ಸಾಲಿಗೆ ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ದಿ ಯೋಜನೆಯಡಿ ವ್ಯಾಪಾರ ಮತ್ತು ಇತರೆ ಉದ್ಯಮಗಳಿಗೆ ಹಾಗೂ ಸ್ವಾವಲಂಬಿ ಸಾರಥಿ ಯೋಜನೆಯಡಿ ಸರಕು ಸಾಕಾಣಿಕೆ / ಟ್ಯಾಕ್ಸಿ (ಹಳದಿ ಬೋರ್ಡ್) ವಾಹನ ಖರೀದಿಸಲು ಹಾಗೂ ಮೈಕ್ರೋಕ್ರೆಡಿಟ್(ಪ್ರೇರಣಾ) ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ) ಗಂಗಾಕಲ್ಯಾಣ ಯೋಜನೆಯಡಿ – ಕೊಳವೆಬಾವಿಗಾಗಿ ಹಾಗೂ ಭೂ ಒಡೆತನ ಯೋಜನೆಯಡಿ-ಜಮೀನು ಖರೀದಿಸಲು ಈ ನಿಗಮಗಳ ವತಿಯಿಂದ ಸಾಲದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಆನ್‌ಲೈನ್ ಮೂಲಕ http://sevasindhu.karnataka. gov.in ಈ ವೆಬ್‌ಲಿಂಕ್ ಮೂಲಕ ನೇರವಾಗಿ ಅಥವಾ ಗ್ರಾಮಓನ್, ಕರ್ನಾಟಕ ಓನ್, ಬೆಂಗಳೂರುಓನ್/ಬಾಪೂಜಿ ಸೇವಾ
ಕೇಂದ್ರಗಳ ಸಹಯೋಗದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ 10-09-2025 ಆಗಿರುತ್ತದೆ.
ಸೌಲಭ್ಯ ಪಡೆಯಲು ಸಾಮಾನ್ಯ ಅರ್ಹತೆಗಳು:
- ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ಕಳೆದ 15 ವರ್ಷಗಳಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿದಾರರು ಉದ್ಯಮಶೀಲತಾ ಯೋಜನೆಯಡಿ ಕನಿಷ್ಟ 21 ವರ್ಷದಿಂದ ಗರಿಷ್ಟ 50 ವರ್ಷದೊಳಗಿನ ವಯೋಮಾನದವರಾಗಿರಬೇಕು.
- ಮೈಕ್ರೋಕ್ರೆಡಿಟ್(ಪ್ರೇರಣಾ) ಯೋಜನೆ(ಮಹಿಳಾ ಸ್ವಸಹಾಯ ಗುಂಪುಗಳಿಗೆ) ಸದಸ್ಯರಿಗೆ ಕನಿಷ್ಟ 21 ರಿಂದ 60 ವರ್ಷ ವಯೋಮಾನದವರಾಗಿರಬೇಕು.
- ಉದ್ಯಮಶೀಲತಾ ಯೋಜನೆಯಡಿ ಸೌಲಭ್ಯ ಪಡೆಯಲು ಗ್ರಾಮಾಂತರ ಪ್ರದೇಶದಲ್ಲಿ ವಾರ್ಷಿಕ ಆದಾಯ ರೂ.1.50 ಲಕ್ಷ ಹಾಗೂ ನಗರ ಪ್ರದೇಶದಲ್ಲಿ ರೂ.2 ಲಕ್ಷ ಮೀರಬಾರದು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆಸರ್ಕಾರ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
- ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
- ಉದ್ಯಮಶೀ¯ತಾ ಅಭಿವೃದ್ದಿ ಯೋಜನೆಯಡಿ ಹೈನುಗಾರಿಕೆ ಅಥವಾ ಇತರೆ ಉದ್ದೇಶಗಳಿಗೆ ಘಟಕವೆಚ್ಚದ ಪೈಕಿ ಕನಿಷ್ಟ ಶೇ.50ರಷ್ಟು/ಗರಿಷ್ಟ ರೂ.1.25ಲಕ್ಷ/ಶೇ.70ರಷ್ಟು ಅಥವಾ ಗರಿಷ್ಟರೂ.2 ಲಕ್ಷ ಸಹಾಯಧನ ಹಾಗೂ ಟ್ಯಾಕ್ಸಿ/ ಸರಕುಸಾಗಾಣಿಕೆ/ಫಾಸ್ಟ್ಪುಡ್ ಟ್ರಕ್ ಟ್ರೈಲರ್ಮೊ, ಬೈಲ್ ಕಿಚನ್ ಫುಡ್ ಕಿಯೋಸ್ಕ್ ಉದ್ದೇಶಗಳಿಗೆ ಘಟಕವೆಚ್ಚದ ಪೈಕಿ ಕನಿಷ್ಟ ಶೇ.75 ರಷ್ಟು/ಗರಿಷ್ಟ ರೂ.4 ಲಕ್ಷ ಸಹಾಯಧನವನ್ನು & ನೇರಸಾಲ ಯೋಜನೆಯಡಿ ಕುರಿ ಸಾಲ/ಇತರೆ
ಉದ್ದೇಶಕ್ಕೆ ಸ.ಧನ ರೂ.0.50 ಲಕ್ಷ & ಅಂಚಿನಹಣಸಾಲ ರೂ.0.50 ಲಕ್ಷ ಮಂಜೂರು ಮಾಡಲಾಗುತ್ತದೆ. - ವಾಹನಗಳಿಗೆ ಸೌಲಭ್ಯ ಪಡೆಯಲು ಫಲಾಪೇಕ್ಷಿಗಳು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು
- ಮೈಕ್ರೋ ಕ್ರೆಡಿಟ್(ಪ್ರೇರಣಾ) ಯೋಜನೆ (ಮಹಿಳಾ ಸ್ವಸಹಾಯ ಗುಂಪುಗಳಿಗೆ) ಕನಿಷ್ಟ 10 ಮಹಿಳೆಯರು ಸ್ವಸಹಾಯ ಗುಂಪಿನಲ್ಲಿ ಸದಸ್ಯರಿರಬೇಕು
- ಸಂಘದ ಸದಸ್ಯರು ಬಿ.ಪಿ.ಎಲ್ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹೊಂದಿರಬೇಕು.
- ಸ್ವಸಹಾಯ ಸಂಘಗಳು ಸಕ್ಷಮ ಪ್ರಾಧಿಕಾರಗಳಿಂದ ನೊಂದಣಿಯಾಗಿರಬೇಕು
- ಸಂಘದ ಹೆಸರಿನಲ್ಲಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರಬೇಕು.
- ಸ್ವ ಸಹಾಯ ಸಂಘಕ್ಕೆ ಘಟಕವೆಚ್ಚ ರೂ.5.00 ಲಕ್ಷದಲ್ಲಿ ಸಹಾಯಧನ ರೂ.2.50 ಲಕ್ಷ ಹಾಗೂ ಅಂಚಿನಹಣ ರೂ.2.50 ಲಕ್ಷ ನೀಡಲಾಗುವುದು.
ಹೆಚ್ಚಿನ ಮಾಹಿತಿಯನ್ನು ಸಂಬಂಧಿತ ನಿಗಮದ ಜಿಲ್ಲಾ ಕಚೇರಿ ಮತ್ತು ನಿಗಮಗಳ ವೆಬ್‌ಸೈಟ್‌ನಲ್ಲಿ / ಕಲ್ಯಾಣಮಿತ್ರ ಸಹಾಯವಾಣಿ 9482-300-400 ಸಂಪರ್ಕಿಸಬಹುದು. ಆನ್‌ಲೈನ್ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಿದೆ. ಅಂತಿಮ ದಿನಾಂಕದ ನಂತರ ಸಾಲದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.